LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಜನ್ಮಾಷ್ಟಮಿಯಂದು ಶ್ರೀಕೃಷ್ಣನಿಗೆ ಈ ನೈವೇದ್ಯಗಳನ್ನು ಅರ್ಪಿಸಲೇಬೇಕು

Advertisement
Advertisement
Advertisement

ಗೋಕುಲಾಷ್ಟಮಿ, ಕೃಷ್ಣಾಷ್ಟಮಿ ಎಂಬಿತ್ಯಾದಿ ಹೆಸರುಗಳಿಂದ ಕರೆಯಲಾಗುವ ಕೃಷ್ಣ ಜನ್ಮಾಷ್ಟಮಿಯನ್ನುಪ್ರತಿವರ್ಷ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು  ಬಹಳ ವಿಜೃಂಭನೆಯಿಂದ ಆಚರಿಸಲಾಗುತ್ತದೆ. ಜನ್ಮಾಷ್ಟಮಿಯಂದು ಶ್ರೀಕೃಷ್ಣನ ದೇವಾಲಯಗಳಲ್ಲಿ 56 ಬಗೆಯ ನೈವೇದ್ಯಗಳನ್ನು ಅರ್ಪಿಸಲಾಗುತ್ತದೆ. ಅದೇ ರೀತಿ ಭಕ್ತರು ಮನೆಯಲ್ಲಿ ವಿವಿಧ ಖಾದ್ಯಗಳನ್ನು ತಯಾರಿಸಿ ಕೃಷ್ಣನಿಗೆ ನೈವೇದ್ಯವಾಗಿ ಅರ್ಪಿಸುತ್ತಾರೆ. ಈ ಬಾರಿ ಸೆಪ್ಟೆಂಬರ್‌ 5 ರಂದು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದ್ದು, ಕಷ್ಟಗಳೆಲ್ಲಾ ಕಳೆದು ಇಷ್ಟಾರ್ಥಗಳೆಲ್ಲಾ ಈಡೆರಲು, ಮನೆಯಲ್ಲಿ ಶಾಂತಿ ಸಮೃದ್ಧಿ, ಸಕಾರಾತ್ಮಕತೆ ನೆಲೆಸಲು ಬಾಲ ಗೋಪಾಲನಿಗೆ ಯಾವೆಲ್ಲಾ ನೈವೇದ್ಯಗಳನ್ನು ಅರ್ಪಿಸುವುದು ಮಂಗಳಕರ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

ಈ ವರ್ಷ ಕೃಷ್ಣ ಜನ್ಮಾಷ್ಟಮಿ ಯಾವಾಗ?

ಪಂಚಾಂಗದ ಪ್ರಕಾರ, ಈ ವರ್ಷದ ಭಾದ್ರಪದ ಕೃಷ್ಣ ಅಷ್ಟಮಿ ತಿಥಿಯು ಸೆಪ್ಟೆಂಬರ್ 4, 2026 ರ ಶುಕ್ರವಾರ ಬೆಳಗಿನ ಜಾವ 2:25 ಕ್ಕೆ ಪ್ರಾರಂಭವಾಗಿ ಸೆಪ್ಟೆಂಬರ್ 5 ರಂದು ಬೆಳಗಿನ ಜಾವ 12:13 ಕ್ಕೆ ಕೊನೆಗೊಳ್ಳುತ್ತದೆ. ಶ್ರೀಕೃಷ್ಣನು ನಿಶಿತ ಕಾಲದಲ್ಲಿ (ಮಧ್ಯರಾತ್ರಿ) ಜನಿಸಿದ ಕಾರಣ, ಮುಖ್ಯ ಜನ್ಮಾಷ್ಟಮಿಯನ್ನು ಸೆಪ್ಟೆಂಬರ್ 4 ರಂದು ಆಚರಿಸಲಾಗುತ್ತದೆ.

ಕೃಷ್ಣನಿಗೆ ಅರ್ಪಿಸಬೇಕಾದ ನೈವೇದ್ಯಗಳು:

ಬೆಣ್ಣೆ:

ಶ್ರೀಕೃಷ್ಣನಿಗೆ ಬಾಲ್ಯದಿಂದಲೂ ಬೆಣ್ಣೆ ಎಂದರೆ ಅಪಾರ ಪ್ರೀತಿ. ಜನ್ಮಾಷ್ಟಮಿಯಂದು, ಬೆಳ್ಳಿಯ ಪಾತ್ರೆಯಲ್ಲಿ ಸಕ್ಕರೆಯೊಂದಿಗೆ ಬೆರೆಸಿದ ಬಿಳಿ ಬೆಣ್ಣೆಯನ್ನು ಶ್ರೀ ಕೃಷ್ಣನಿಗೆ ಅರ್ಪಿಸುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ ಮತ್ತು ಕುಟುಂಬ ಸದಸ್ಯರಲ್ಲಿ ಪರಸ್ಪರ ಪ್ರೀತಿ ಬೆಳೆಯುತ್ತದೆ ಎಂಬ ನಂಬಿಕೆಯಿದೆ.

ಹಾಲಿನಿಂದ ಮಾಡಿದ ಸಿಹಿ ಪದಾರ್ಥಗಳು:

ಜನ್ಮಾಷ್ಟಮಿಯಂದು ಬರ್ಫಿ, ರಸಗುಲ್ಲಾ ಮತ್ತು ರಸಮಲೈನಂತಹ ಹಾಲಿನ ಸಿಹಿತಿಂಡಿಗಳನ್ನು ಕೃಷ್ಣನಿಗೆ ಅರ್ಪಿಸುವುದು ಶ್ರೇಯಸ್ಕರ ಎಂದು ಹೇಳಲಾಗುತ್ತದೆ. ಈ ನೈವೇದ್ಯವು ಕುಟುಂಬಕ್ಕೆ ಸಂತೋಷ, ಸಮೃದ್ಧಿ ಮತ್ತು ಶಾಂತಿಯನ್ನು ತರುತ್ತದೆ ಎಂದು ನಂಬಲಾಗಿದೆ.

ಪಂಚಾಮೃತ:

ಪಂಚಾಮೃತವನ್ನು ಹಾಲು, ಮೊಸರು, ಜೇನುತುಪ್ಪ, ತುಪ್ಪ ಮತ್ತು ಸಕ್ಕರೆಯಿಂದ ತಯಾರಿಸಲಾಗುತ್ತದೆ. ಇದನ್ನು ಶ್ರೀಕೃಷ್ಣನಿಗೆ ಅಭಿಷೇಕದ ನಂತರ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಗೋಪಾಲನಿಗೆ ಪಂಚಾಮೃತವನ್ನು ನೈವೇದ್ಯವಾಗಿ ಅರ್ಪಿಸುವುದರಿಂದ ಪಾಪಗಳು ನಿರ್ಮೂಲನೆಯಾಗಿ ಜೀವನದಲ್ಲಿ ಪುಣ್ಯ ಹೆಚ್ಚಾಗುತ್ತದೆ ಎಂಬ ನಂಬಿಕೆಯಿದೆ.

ಮಖಾನ ಖೀರ್:

ಶ್ರೀಕೃಷ್ಣ ಜನ್ಮಾಷ್ಟಮಿಯಂದು ಹಾಲು ಮತ್ತು ಮಖಾನ ಬೀಜಗಳಿಂದ ಮಾಡಿದ ಖೀರ್ ಅನ್ನು ಅರ್ಪಿಸುವುದು ಬಹಳ ಶುಭ ಮತ್ತು ಫಲಪ್ರದವೆಂದು ಪರಿಗಣಿಸಲಾಗಿದೆ. ಇದು ಚಂದ್ರ ದೇವರಿಗೂ ಪ್ರಿಯವಾದದ್ದು.

ತಾಜಾ ಕಾಲೋಚಿತ ಹಣ್ಣುಗಳು:

ತಾಜಾ ಕಾಲೋಚಿತ ಹಣ್ಣುಗಳನ್ನು ಸಹ ನೀವು ನೈವೇದ್ಯ ರೂಪದಲ್ಲಿ ಅರ್ಪಿಸಬಹುದು. ಬಾಲ ಗೋಪಾಲನಿಗೆ ತಾಜಾ ಮತ್ತು ರಸಭರಿತವಾದ ಹಣ್ಣುಗಳೆಂದರೆ ಬಲು ಇಷ್ಟ. ಹಾಗಾಗಿ ಜನ್ಮಾಷ್ಟಮಿಯ ದಿನ ಪೂಜಾ ತಟ್ಟೆಯಲ್ಲಿ ಬಾಳೆಹಣ್ಣು, ಸೇಬು ಮತ್ತು ಇತರೆ ಕಾಲೋಚಿತ ಹಣ್ಣುಗಳನ್ನಿಡಲು ಮರೆಯದಿರಿ.

ತುಳಸಿ ಎಲೆ:

ಶ್ರೀಕೃಷ್ಣನಿಗೆ ತುಳಸಿ ಎಲೆ ಎಂದರೆ ಅತ್ಯಂತ ಪ್ರೀತಿ. ಕೃಷ್ಣನ ಪೂಜೆ ಮತ್ತು ಅರ್ಪಿಸುವ ಯಾವುದೇ ನೈವೇದ್ಯವು ತುಳಸಿ ಎಲೆಯಿಲ್ಲದೆ ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ನೀವು ಏನೇ ನ್ಥವೇದ್ಯ ತಯಾರಿಸಿದರೂ, ಆ ತಟ್ಟೆಯಲ್ಲಿ ತುಳಸಿ ಎಲೆಯನ್ನಿಡಿ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜನ್ಮಾಷ್ಟಮಿಯಂದು ಶ್ರೀಕೃಷ್ಣನಿಗೆ ಈ ನೈವೇದ್ಯಗಳನ್ನು ಅರ್ಪಿಸಲೇಬೇಕುಕಲಬುರಗಿಯಲ್ಲಿ ಭೀಕರ ಅಪಘಾತ – ತಾಯಿಯೊಂದಿಗೆ 3 ತಿಂಗಳ ಮಗು ಸ್ಥಳದಲ್ಲೇ ಸಾವು200 ವರ್ಷಗಳ ಬಳಿಕ ಕುಟುಂಬದಲ್ಲಿ ಹೆಣ್ಣು ಮಗು ಜನನ – ರಥದಲ್ಲಿ ಕೂರಿಸಿ ಅದ್ದೂರಿ ಸ್ವಾಗತಮೈಸೂರಿನಲ್ಲಿ ಮತ್ತೊಂದು ʻಗೋಲ್ಡ್ ಸ್ಕ್ಯಾಮ್ʼ – 80ಕ್ಕೂ ಹೆಚ್ಚು ಜನರಿಗೆ ಉಂಡೆನಾಮ!ಸಾಲ ತೀರಿಸಲು ಹಣ ಕೊಟ್ಟಿಲ್ಲವೆಂದು ರಾಡ್‌ನಿಂದ ಹೊಡೆದು ತಂದೆಯನ್ನೇ ಕೊಂದ ಮಗರಾಹುಲ್ ಗಾಂಧಿ ಸಾರ್ವಕರ್‌ರನ್ನ ಮುಸ್ಲಿಮರ ದ್ವೇಷಿಯಂತೆ ಬಿಂಬಿಸಿದ್ದಾರೆ: ಸಂಬಂಧಿಭೂ ಮಂಜೂರಾತಿಗಾಗಿ ಮಾಜಿ ಯೋಧ ಆತ್ಮಹತ್ಯೆಗೆ ಯತ್ನತರಗತಿ ನಡೆಯುತ್ತಿದ್ದಗಲೇ ಕೊಠಡಿಯ ಮೇಲ್ಛಾವಣಿ ಕುಸಿತ – ನಾಲ್ವರು ಮಕ್ಕಳಿಗೆ ಗಾಯಬರಪೀಡಿತ ಜಿಲ್ಲೆಗಳ ಪಟ್ಟಿಯಿಂದ ಬೆಳಗಾವಿ ಹೊರಕ್ಕೆ: ರೈತರ ಆಕ್ರೋಶಕೆಆರ್‌ಐಡಿಎಲ್‌ ಲಂಚ ಪ್ರಕರಣ; ಇಬ್ಬರು ಸಚಿವರ ರಾಜೀನಾಮೆ ಪಡೆಯಿರಿ, ಸಿಬಿಐ ತನಿಖೆಗೆ ನೀಡಿ: ಅಶೋಕ್‌