LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಭೂ ಮಂಜೂರಾತಿಗಾಗಿ ಮಾಜಿ ಯೋಧ ಆತ್ಮಹತ್ಯೆಗೆ ಯತ್ನ

Advertisement
Advertisement
Advertisement

ಬೆಂಗಳೂರು: ದೇಶಕ್ಕಾಗಿ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ, ಶತ್ರುಗಳ ವಿರುದ್ಧ ಹೋರಾಟದ ವೇಳೆ ಕಾಲಿಗೆ ಗಾಯ ಮಾಡಿಕೊಂಡಿದ್ದ ಮಾಜಿ ಯೋಧರೊಬ್ಬರು  ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಕಾರ್ಗಿಲ್ ಯುದ್ಧದಲ್ಲಿ  ಭಾಗಿಯಾಗಿದ್ದ ಶಿವಾನಂದ ರೆಡ್ಡಿ ಆತ್ಮಹತ್ಯೆಗೆ ಯತ್ನಿಸಿರುವ ಮಾಜಿ ಯೋಧ. ಶಿವಾನಂದ ರೆಡ್ಡಿ ಎಂಎಲ್‌ಐ-ಮರಾಠ ಲೈಟ್ ಇನ್ಫೆಂಟ್ರಿ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸಿದ್ದರು. ಯುದ್ಧದ ಸಂದರ್ಭದಲ್ಲಿ ಕಾಲಿಗೆ ಗಾಯಗೊಂಡಿದ್ದ ಶಿವಾನಂದ ರೆಡ್ಡಿ ನಿವೃತ್ತಿಯ ಬಳಿಕ ಸರ್ಕಾರದಿಂದ ಜಮೀನು ಮಂಜೂರು ಮಾಡಿಸಿಕೊಳ್ಳಲು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರು. 

ನಿವೃತ್ತ ಯೋಧರಿಗೆ ಸರ್ಕಾರದ ನಿಯಮಗಳ ಪ್ರಕಾರ ಜಮೀನು ಮಂಜೂರು ಮಾಡಬೇಕಿದ್ದರೂ, ತಮ್ಮ ಮನವಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಶಿವಾನಂದ ರೆಡ್ಡಿ ಅಸಮಾಧಾನಗೊಂಡಿದ್ದರು. ಜಮೀನು ಮಂಜೂರಿಗಾಗಿ ಶಿವಾನಂದ ರೆಡ್ಡಿ ಈ ಹಿಂದೆ ಉಪವಾಸ ಸತ್ಯಾಗ್ರಹ ಕೂಡ ನಡೆಸಿದ್ದರು. ಆದರೂ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದರು. 

ಇದೀಗ ಇದೇ ವಿಚಾರಕ್ಕೆ ಬೇಸತ್ತು ಶಿವಾನಂದ ರೆಡ್ಡಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷ ಸೇವಿಸಿದ ಬಳಿಕ ಅಸ್ವಸ್ಥಗೊಂಡ ಅವರನ್ನು ಬೆಂಗಳೂರಿನ ಹೆಬ್ಬಾಳದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೊಲೀಸರಿಂದ ಅವಮಾನ ಆರೋಪ:
ಆಗಸ್ಟ್ 22ರಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಚಿಂತಾಮಣಿಗೆ ಆಗಮಿಸಿದ್ದ ವೇಳೆ ಅವರನ್ನು ಭೇಟಿಯಾಗಲು ಶಿವಾನಂದ ರೆಡ್ಡಿ ಮುಂದಾಗಿದ್ದರು. ಆದರೆ, ಹಿರಿಯ ಪೊಲೀಸ್ ಅಧಿಕಾರಿಗಳು ಶಿವಾನಂದ ರೆಡ್ಡಿಗೆ ಡಿಸಿಎಂ ಅವರನ್ನು ಭೇಟಿಯಾಗಲು ಅವಕಾಶ ನೀಡಲಿಲ್ಲ. ಬಳಿಕ ಅವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಕೂರಿಸಿ ನಿಂದಿಸಲಾಗಿದೆ. ಪೊಲೀಸರು ಮಾಜಿ ಯೋಧ ಶಿವಾನಂದ ರೆಡ್ಡಿಯವರನ್ನು ಏಕವಚನದಲ್ಲಿ ಮಾತನಾಡಿಸಿ ಅವಮಾನಿಸಿದ್ದಾರೆ ಎಂದು ಅವರ ಪತ್ನಿ ಕಾಂತಮ್ಮ ಗಂಭೀರ ಆರೋಪ ಮಾಡಿದ್ದಾರೆ.ಸರ್ಕಾರದ ನಿರ್ಲಕ್ಷ್ಯ ಹಾಗೂ ಪೊಲೀಸರಿಂದ ಆದ ಅವಮಾನದಿಂದಲೇ ಶಿವಾನಂದ ರೆಡ್ಡಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪತ್ನಿ ಕಾಂತಮ್ಮ ಆರೋಪಿಸಿದ್ದಾರೆ. 

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜನ್ಮಾಷ್ಟಮಿಯಂದು ಶ್ರೀಕೃಷ್ಣನಿಗೆ ಈ ನೈವೇದ್ಯಗಳನ್ನು ಅರ್ಪಿಸಲೇಬೇಕುಕಲಬುರಗಿಯಲ್ಲಿ ಭೀಕರ ಅಪಘಾತ – ತಾಯಿಯೊಂದಿಗೆ 3 ತಿಂಗಳ ಮಗು ಸ್ಥಳದಲ್ಲೇ ಸಾವು200 ವರ್ಷಗಳ ಬಳಿಕ ಕುಟುಂಬದಲ್ಲಿ ಹೆಣ್ಣು ಮಗು ಜನನ – ರಥದಲ್ಲಿ ಕೂರಿಸಿ ಅದ್ದೂರಿ ಸ್ವಾಗತಮೈಸೂರಿನಲ್ಲಿ ಮತ್ತೊಂದು ʻಗೋಲ್ಡ್ ಸ್ಕ್ಯಾಮ್ʼ – 80ಕ್ಕೂ ಹೆಚ್ಚು ಜನರಿಗೆ ಉಂಡೆನಾಮ!ಸಾಲ ತೀರಿಸಲು ಹಣ ಕೊಟ್ಟಿಲ್ಲವೆಂದು ರಾಡ್‌ನಿಂದ ಹೊಡೆದು ತಂದೆಯನ್ನೇ ಕೊಂದ ಮಗರಾಹುಲ್ ಗಾಂಧಿ ಸಾರ್ವಕರ್‌ರನ್ನ ಮುಸ್ಲಿಮರ ದ್ವೇಷಿಯಂತೆ ಬಿಂಬಿಸಿದ್ದಾರೆ: ಸಂಬಂಧಿಭೂ ಮಂಜೂರಾತಿಗಾಗಿ ಮಾಜಿ ಯೋಧ ಆತ್ಮಹತ್ಯೆಗೆ ಯತ್ನತರಗತಿ ನಡೆಯುತ್ತಿದ್ದಗಲೇ ಕೊಠಡಿಯ ಮೇಲ್ಛಾವಣಿ ಕುಸಿತ – ನಾಲ್ವರು ಮಕ್ಕಳಿಗೆ ಗಾಯಬರಪೀಡಿತ ಜಿಲ್ಲೆಗಳ ಪಟ್ಟಿಯಿಂದ ಬೆಳಗಾವಿ ಹೊರಕ್ಕೆ: ರೈತರ ಆಕ್ರೋಶಕೆಆರ್‌ಐಡಿಎಲ್‌ ಲಂಚ ಪ್ರಕರಣ; ಇಬ್ಬರು ಸಚಿವರ ರಾಜೀನಾಮೆ ಪಡೆಯಿರಿ, ಸಿಬಿಐ ತನಿಖೆಗೆ ನೀಡಿ: ಅಶೋಕ್‌