LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಿಎಂ ಡಿಕೆಶಿ ಸಂಧಾನ ಸಕ್ಸಸ್‌ – ನಾನು ಸ್ವೀಕರ್ ಆಗಿ ಕೆಲಸ ಮಾಡ್ತೀನಿ ಎಂದ ಟಿಬಿ ಜಯಚಂದ್ರ

Advertisement
Advertisement

ಬೆಂಗಳೂರು: ಶಿರಾ ಶಾಸಕ ಟಿ.ಬಿ ಜಯಚಂದ್ರ ಅವರೊಂದಿಗೆ ಸಿಎಂ ಡಿಕೆ ಶಿವಕುಮಾರ್‌ (DK Shivakumar) ಅವರು ನಡೆಸಿದ ಸಂಧಾನ ಸಕ್ಸಸ್‌ ಆದಂತೆ ಕಾಣ್ತಿದೆ. ನಾಳೆಯಿಂದಲೇ ನಾನು ಸ್ಪೀಕರ್‌ ಆಗಿ ಕೆಲಸ ಮಾಡುತ್ತೇನೆಂದು ಟಿ.ಬಿ ಜಯಚಂದ್ರ ಅವರು ತಿಳಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ ಅಸಮಾಧಾನಗೊಂಡಿದ್ದ ಶಾಸಕ ಟಿ.ಬಿ ಜಯಚಂದ್ರ ಅವರ ನಿವಾಸಕ್ಕೆ ಇಂದು ರಾತ್ರಿ ಖುದ್ದು ಸಿಎಂ ಡಿಕೆ ಶಿವಕುಮಾರ್‌ ಅವ್ರೇ ಭೇಟಿ ನೀಡಿದ್ದರು. ಶಾಸಕರೊಂದಿಗೆ ಸಿಎಂ ಸುದೀರ್ಘ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ನೂತನ ಸಚಿವ ಬಾಲಕೃಷ್ಣ ಹಾಗೂ ಶಾಸಕ ಡಾ. ರಂಗನಾಥ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಇನ್ನೂ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಟಿಬಿ ಜಯಚಂದ್ರ ಅವರು, ಮುಖ್ಯಮಂತ್ರಿಗಳು ಇವತ್ತು ನಮ್ಮ ಮನೆಗೆ ಬಂದಿದ್ರು. ಮುಂಬರುವ ವಿಧಾನಸಭೆಯಲ್ಲಿ ಯಾವ ವಿಚಾರ ಮಾತಾಡಬೇಕು? ಯಾವ ವಿಚಾರ ಚರ್ಚೆ ಮಾಡಬೇಕು ಅನ್ನೋ ಬಗ್ಗೆ ಮಾತಾಡಿದ್ವಿ. ಸದ್ಯ ನಾನೊಬ್ಬ ಸ್ವೀಕರ್, ಆಗಿ ಕೆಲಸ ಮಾಡ್ತೀನಿ. ಅದನ್ನು ಬಿಟ್ಟು ಬೇರೆ ಏನೂ ಮಾತಾಡಲ್ಲ. ಸದ್ಯ ಎಲ್ಲಾ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ನಾಳೆಯಿಂದಲೇ ನಾನು ಸ್ವೀಕರ್ ಆಗಿ ಕೆಲಸ ಮಾಡ್ತಿನಿ ಎಂದಿದ್ದಾರೆ.

ಇನ್ನೂ ಸಿಎಂ ಡಿಕೆ ಶಿವಕುಮಾರ್‌ ಮಾತನಾಡಿ, ಜಯಚಂದ್ರ ಅವರು ಸ್ಪೀಕರ್ ಇದ್ದಾರೆ. ಅವರು ಬರೋಕೆ ಆಗಲ್ಲ, ಸಿಎಂ ಆಗಿ ನಾವೇ ಅವ್ರ ಬಳಿ ಬರಬೇಕು, ಬಂದಿದ್ದೇನೆ. ಅವರು ನನ್ನ ಆತ್ಮೀಯರು, ಮನೆಗೆ ಬಂದಿದ್ದೆ ಅಷ್ಟೇ ಎಂದರಲ್ಲದೇ, ಸಚಿವ ಸ್ಥಾನದ ಅಸಮಧಾನದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಹೊರಟರು.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಳಗಾವಿ ಬರ ಜಿಲ್ಲೆಯೆಂದು ಘೋಷಿಸಲು ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಆಗ್ರಹನೌಕರಿ ಹೆಸರಿನಲ್ಲಿ 6.17 ಲಕ್ಷ ರೂ. ವಂಚನೆಪ್ರಮಾಣಪತ್ರ ವಿತರಣೆ ಕಾರ್ಯದಿಂದ ಮುಕ್ತಗೊಳಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆರಾಜ್ಯದಲ್ಲಿ SIR ಅವಧಿ ವಿಸ್ತರಣೆ – ಆ.17 ರ ವರೆಗೆ ಬಿಎಲ್‌ಒ ಮನೆ ಮನೆ ಭೇಟಿಆಟವಾಡ್ತಿದ್ದ ವೇಳೆ ಶಾಲೆಯ ಗೇಟ್ ಬಿದ್ದು 4 ವರ್ಷದ ಮಗು ಸಾವುಗೂಂಡಾಗಿರಿ ಮಾಡಿ ಬಲವಂತವಾಗಿ ಹೊರಟ್ಟಿ ಬಳಿ ರಾಜೀನಾಮೆ ಕೊಡಿಸಿದ್ದಾರೆ: ಅಶೋಕ್‌ ಕಿಡಿಸಚಿವ ಸ್ಥಾನ ಬಿಟ್ಟು ಪಕ್ಷದ ಕೆಲಸ ಮಾಡಿ ಅಂತ ಹೈಕಮಾಂಡ್ ಹೇಳಿದ್ರೆ ಎಲ್ಲರೂ ಮಾಡಬೇಕು: ಪ್ರಿಯಾಂಕ್ ಖರ್ಗೆಶಿವಾನಂದ ನೀಲಣ್ಣವರ್‌ ಬಹುಕೋಟಿ ವಂಚನೆ ಕೇಸ್‌ಗೆ ಇಡಿ ಎಂಟ್ರಿ – ಮೂರು ಕಡೆ ದಾಳಿ ʻಲೋಕಾʼ ಬಲೆಗೆ ಬಿದ್ದ ಬೆಸ್ಕಾಂ ಅಧಿಕಾರಿಗಳು – 1.50 ಲಕ್ಷ ಲಂಚ ಪಡೆಯುವಾಗ ರೆಡ್‌ಹ್ಯಾಂಡಾಗಿ ಲಾಕ್ರೈತರು ಬೆಳೆ ವಿಮೆ ಮಾಡಿಸಲು ಆ.14 ಕೊನೆಯ ದಿನ: ಸಚಿವ ಕೆ.ಹೆಚ್ ಮುನಿಯಪ್ಪ