LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗೂಂಡಾಗಿರಿ ಮಾಡಿ ಬಲವಂತವಾಗಿ ಹೊರಟ್ಟಿ ಬಳಿ ರಾಜೀನಾಮೆ ಕೊಡಿಸಿದ್ದಾರೆ: ಅಶೋಕ್‌ ಕಿಡಿ

Advertisement
Advertisement

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಅವರು ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಈ ವಿಚಾರವಾಗಿ ವಿರೋಧ ಪಕ್ಷದ ನಾಯಕ ಆರ್‌ ಅಶೋಕ್‌  ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಗೂಂಡಾಗಿರಿ ಮಾಡಿ ತಮ್ಮ ತಂಡ ಕಟ್ಟಿಕೊಂಡು ಹೋಗಿ ಬಲವಂತವಾಗಿ ಅವರ ರಾಜೀನಾಮೆ ಕೊಡಿಸಿದ್ದಾರೆ. ಕರ್ನಾಟಕಕ್ಕೆ ಇದು ದೊಡ್ಡ ಕಳಂಕ. ಈ ರೀತಿ ಘಟನೆ ರಾಜ್ಯ ರಾಜಕೀಯದಲ್ಲಿ ಹಿಂದೆ ನಡೆದಿಲ್ಲ. ಇದರ ವಿರುದ್ಧ ಹೋರಾಟ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಕಾಂಗ್ರೆಸ್‌ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. 

ಈ ಮೊದಲು ಮುಂಗಾರು ಅಧಿವೇಶನ ಆರಂಭವಾದ ಬಳಿಕ ಅಂದರೆ ಆಗಸ್ಟ್ 14 ರಂದು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಲು ಬಸವರಾಜ ಹೊರಟ್ಟಿ ತೀರ್ಮಾನಿಸಿದ್ದರು. ಆದರೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌  ಹಾಗೂ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್‌  ಅವರ ಸುದೀರ್ಘ ಮನವೊಲಿಕೆಯ ಬಳಿಕ ಅವರು ರಾಜೀನಾಮೆ ನಿರ್ಧಾರ ಕೈಗೊಂಡಿದ್ದಾರೆ.

ಯಾವುದೇ ಒತ್ತಡವಿಲ್ಲದೆ, ಸಂಪೂರ್ಣ ಸ್ವಇಚ್ಛೆಯಿಂದಲೇ ತಾವು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಹೊರಟ್ಟಿ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ನೂತನ ಸಭಾಪತಿ ಆಯ್ಕೆಯಾಗುವವರೆಗೆ ಬಸವರಾಜ ಹೊರಟ್ಟಿ ಅವರೇ ಹಂಗಾಮಿ ಸಭಾಪತಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. 

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಳಗಾವಿ ಬರ ಜಿಲ್ಲೆಯೆಂದು ಘೋಷಿಸಲು ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಆಗ್ರಹನೌಕರಿ ಹೆಸರಿನಲ್ಲಿ 6.17 ಲಕ್ಷ ರೂ. ವಂಚನೆಪ್ರಮಾಣಪತ್ರ ವಿತರಣೆ ಕಾರ್ಯದಿಂದ ಮುಕ್ತಗೊಳಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆರಾಜ್ಯದಲ್ಲಿ SIR ಅವಧಿ ವಿಸ್ತರಣೆ – ಆ.17 ರ ವರೆಗೆ ಬಿಎಲ್‌ಒ ಮನೆ ಮನೆ ಭೇಟಿಆಟವಾಡ್ತಿದ್ದ ವೇಳೆ ಶಾಲೆಯ ಗೇಟ್ ಬಿದ್ದು 4 ವರ್ಷದ ಮಗು ಸಾವುಗೂಂಡಾಗಿರಿ ಮಾಡಿ ಬಲವಂತವಾಗಿ ಹೊರಟ್ಟಿ ಬಳಿ ರಾಜೀನಾಮೆ ಕೊಡಿಸಿದ್ದಾರೆ: ಅಶೋಕ್‌ ಕಿಡಿಸಚಿವ ಸ್ಥಾನ ಬಿಟ್ಟು ಪಕ್ಷದ ಕೆಲಸ ಮಾಡಿ ಅಂತ ಹೈಕಮಾಂಡ್ ಹೇಳಿದ್ರೆ ಎಲ್ಲರೂ ಮಾಡಬೇಕು: ಪ್ರಿಯಾಂಕ್ ಖರ್ಗೆಶಿವಾನಂದ ನೀಲಣ್ಣವರ್‌ ಬಹುಕೋಟಿ ವಂಚನೆ ಕೇಸ್‌ಗೆ ಇಡಿ ಎಂಟ್ರಿ – ಮೂರು ಕಡೆ ದಾಳಿ ʻಲೋಕಾʼ ಬಲೆಗೆ ಬಿದ್ದ ಬೆಸ್ಕಾಂ ಅಧಿಕಾರಿಗಳು – 1.50 ಲಕ್ಷ ಲಂಚ ಪಡೆಯುವಾಗ ರೆಡ್‌ಹ್ಯಾಂಡಾಗಿ ಲಾಕ್ರೈತರು ಬೆಳೆ ವಿಮೆ ಮಾಡಿಸಲು ಆ.14 ಕೊನೆಯ ದಿನ: ಸಚಿವ ಕೆ.ಹೆಚ್ ಮುನಿಯಪ್ಪ