ಆನೇಕಲ್: ಚಿತ್ರದುರ್ಗದ ರೇಣುಕಾಸ್ವಾಮಿ ಕೇಸ್‌ನಲ್ಲಿ ಮಾಫಿ ಸಾಕ್ಷಿಯಾಗಿ ಪ್ರಕರಣದಿಂದ ಪಾರಾಗಲು ಪ್ರಯತ್ನಿಸುತ್ತಿದ್ದ 14ನೇ ಆರೋಪಿ ಪ್ರದೋಷ್‌ನ ಕಳ್ಳಾಟವೊಂದು ಇದೀಗ ಬಯಲಾಗಿದ್ದು, ಕೇಸ್ ದಾಖಲಾಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿಗಳಿಗೆ ವಕೀಲರ ಜೊತೆ ಹಾಗೂ ಕುಟುಂಬದವರ ಜೊತೆ ಮಾತನಾಡುವುದಕ್ಕೆ 3 ನಂಬರ್‌ಗಳನ್ನು ಕೊಡಲಾಗುತ್ತದೆ. ವಕೀಲರ ಜೊತೆ ಹಾಗೂ ಕುಟುಂಬದವರ ಜೊತೆ ಮಾತನಾಡಲು ಅವಕಾಶ ಕೊಡುವ ನಂಬರ್ ಅನ್ನು ರಿಜಿಸ್ಟರ್ ಮಾಡಿಸಿಕೊಂಡಿರುತ್ತಾರೆ. ಈ ನಂಬರ್‌ಗಳನ್ನ ನಮೂದು ಮಾಡಿಸಿಕೊಳ್ಳುವ ಜವಾಬ್ದಾರಿಯನ್ನು ಮೌನೇಶ್.ಹೆಚ್.ಕೋರಿ ಎಂಬ ಸಿಬ್ಬಂದಿಗೆ ವಹಿಸಲಾಗಿತ್ತು.
ಆರೋಪಿ ಪ್ರದೋಷ್ ಬೇರೆ ಖೈದಿ ಹೆಸರಿನಲ್ಲಿ ನಂಬರ್ ಪಡೆದಿದ್ದ. ಈ ನಂಬರ್ ನೋಂದಾಯಿಸಿಕೊಳ್ಳಲು ಜೈಲು ಸಿಬ್ಬಂದಿ ಮೌನೇಶ್ ಸಹಾಯ ಮಾಡಿದ್ದ. ಅಲ್ಲದೇ ವಕೀಲರ ನಂಬರ್ ಎಂದು ನಮೂದಿಸಿ ಪತ್ನಿಯ ಜೊತೆ ಮಾತನಾಡುತ್ತಿರುವುದು ಇದೀಗ ಬೆಳಕಿಗೆ ಬಂದಿದೆ. ಸದ್ಯ ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮೌನೇಶ್ ಹಾಗೂ ಪ್ರದೋಷ್ ವಿರುದ್ಧ ದೂರು ದಾಖಲಾಗಿದೆ.
