LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

2,000 ರೂ. ಮೇಲ್ಪಟ್ಟ ಯುಪಿಐ ಪಾವತಿಗೆ 0.4% ಶುಲ್ಕ – ಅ.15 ರಿಂದ ಹೊಸ ನಿಯಮ

Advertisement

ನವದೆಹಲಿ: 2,000 ರೂ.ಗಿಂತ ಹೆಚ್ಚಿನ ಮೊತ್ತದ ಯುಪಿಐ (ಏಕೀಕೃತ ಪಾವತಿ ವ್ಯವಸ್ಥೆ) ಪಾವತಿಗಳನ್ನ (UPI Payments) ಸ್ವೀಕರಿಸುವ ವ್ಯಾಪಾರಿಗಳಿಗೆ ಅ.15 ರಿಂದ ಶೇ.0.4 ರಷ್ಟು ಶುಲ್ಕ ವಿಧಿಸಲಾಗುವುದು ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಮಂಗಳವಾರ ತಿಳ

2,000 ರೂ.ವರೆಗಿನ ಸಣ್ಣ ಮೊತ್ತದ ಯುಪಿಐ ವಹಿವಾಟುಗಳಿಗೆ ಬ್ಯಾಂಕುಗಳು ಅಥವಾ ಸೇವಾ ಪೂರೈಕೆದಾರರು ಶುಲ್ಕ ವಿಧಿಸುವಂತಿಲ್ಲ ಎಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ ಎನ್‌ಪಿಸಿಐ ಮಹತ್ವದ ಘೋಷಣೆ ಮಾಡಿದೆ.

ಈ ಶುಲ್ಕವನ್ನು ಮರ್ಚೆಂಟ್ ಡಿಸ್ಕೌಂಟ್ ರೇಟ್ ಎಂದು ಕರೆಯಲಾಗುತ್ತದೆ. ಪ್ರತಿ ವಹಿವಾಟಿಗೆ ಗರಿಷ್ಠ 300 ರೂ. ವರೆಗೆ ಮಾತ್ರ ಎಂಡಿಆರ್‌ ವಿಧಿಸಲಾಗುತ್ತದೆ. ಅಂದರೆ, ವ್ಯಾಪಾರಸ್ಥರಿಗೆ 75,000 ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನ ಯುಪಿಐ ಮೂಲಕ ಪಾವತಿಸಿದ್ರೂ ಎಂಡಿಆರ್‌ ಶುಲ್ಕ 300 ರೂ.ಗಿಂತ ಹೆಚ್ಚಾಗುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ಇದೇ ವೇಳೆ, ರೈಲ್ವೆ, ಟೆಲಿಕಾಂ ಸೇವೆಗಳು, ವಿಮೆ, ಇಂಧನ ಸೇರಿದಂತೆ ಕೆಲವು ನಿರ್ದಿಷ್ಟ ವ್ಯಾಪಾರಿ ವಿಭಾಗಗಳಿಗೆ 2,000 ರೂ.ಗಿಂತ ಹೆಚ್ಚಿನ UPI ಪಾವತಿಗಳ ಮೇಲೆ ಪ್ರತಿ ವಹಿವಾಟಿಗೆ 5 ರೂ.ನಷ್ಟು ನಿಗದಿತ ಎಂಡಿಆರ್‌ ಶುಲ್ಕ ವಿಧಿಸಲಾಗುತ್ತದೆ.

ಈ ನಿಗದಿತ ದರದ ಮಾದರಿಯು ಪ್ರಮುಖ ಸಾರ್ವಜನಿಕ ಸೇವೆಗಳು, ಯುಟಿಲಿಟಿ ಬಿಲ್ ಸಂಗ್ರಹಣೆ ಹಾಗೂ ಇಂಧನ ಮಾರಾಟದಂತಹ ಕಡಿಮೆ ಲಾಭಾಂಶದ ಕ್ಷೇತ್ರಗಳಲ್ಲಿ ವೆಚ್ಚ ಹೆಚ್ಚಾಗುವುದನ್ನ ತಡೆಯುತ್ತದೆ. ಅಗತ್ಯ ಗ್ರಾಹಕ ಸೇವೆಗಳು ಕಡಿಮೆ ವೆಚ್ಚದಲ್ಲಿ ಹಾಗೂ ಡಿಜಿಟಲ್ ರೀತಿಯಲ್ಲಿ ಪರಿಣಾಮಕಾರಿಯಾಗಿ ಮುಂದುವರಿಯುವುದನ್ನ ಖಚಿತಪಡಿಸುತ್ತದೆ ಎಂದಿದೆ ಎನ್‌ಪಿಸಿಐ.

ವೈಯಕ್ತಿಕ ಪಾವತಿಗೆ ಶುಲ್ಕ ವಿನಾಯ್ತಿ
ಇನ್ನೂ ಎನ್‌ಪಿಸಿಐ ಘೋಷಣೆ ಮಾಡಿರುವಂತೆ ಪರಿಷ್ಕೃತ MDR ವ್ಯವಸ್ಥೆ ವ್ಯಕ್ತಿಯಿಂದ ವ್ಯಾಪಾರಿಗೆ ನಡೆಯುವ UPI ವಹಿವಾಟುಗಳಿಗೆ ಮಾತ್ರ ಅನ್ವಯಿಸುತ್ತದೆ. ವ್ಯಕ್ತಿಯಿಂದ ವ್ಯಕ್ತಿಗೆ ನಡೆಯುವ ಯುಪಿಐ ಪಾವತಿಗಳು ಎಷ್ಟೇ ಮೊತ್ತದ್ದಾಗಿದ್ದರೂ ಉಚಿತವಾಗಿಯೇ ಮುಂದುವರಿಯಲಿವೆ.

ಎನ್‌ಪಿಸಿಐ ಘೋಷಣೆ ಮಾಡುವ ಒಂದು ದಿನಕ್ಕೂ ಮೊದಲೇ ಕೇಂದ್ರ ಸರ್ಕಾರ ಮಹತ್ವದ ಆದೇಶ ಪ್ರಕಟಿಸಿತ್ತು. 2,000 ರೂ. ವರೆಗಿನ ಯಾವುದೇ ಯುಪಿಐ ಪಾವತಿಗಳಿಗೆ ಹಾಗೂ ರೂಪೇ ಡೆಬಿಡ್‌ ಕಾರ್ಡ್‌ ಪಾವತಿಗಳ ಮೇಲೆ ಯಾವುದೇ ಶುಲ್ಕ ವಿಧಿಸುವಂತಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಅಧಿಸೂಚನೆ ಹೊರಡಿಸಿತ್ತು.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
2,000 ರೂ. ಮೇಲ್ಪಟ್ಟ ಯುಪಿಐ ಪಾವತಿಗೆ 0.4% ಶುಲ್ಕ – ಅ.15 ರಿಂದ ಹೊಸ ನಿಯಮಬೆಟ್ಟದಲ್ಲಿ ಅಡಗಿದ್ದ `ಸುಡೋ ನಕ್ಸಲ್’ ಕನಕಲಬಂಡೆ ವೆಂಕಟೇಶ್ ಬಂಧನರೇಣುಕಾಸ್ವಾಮಿ ಕೇಸ್‌ – ಮಾಫಿ ಸಾಕ್ಷಿ ಪ್ರದೋಷ್‌ ವಿರುದ್ಧ ದೂರುವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PILಶಾಲಾ ಬ್ಯಾಗ್‌ಗಳಿಂದ 38 ಕೆಜಿ ಗಾಂಜಾ ಸೀಜ್‌; ಮೂವರು ಅಪ್ರಾಪ್ತರು ಸೇರಿ ಐವರು ವಶಕ್ಕೆಮೋದಿ ದೇಶದ ರಾಜಕೀಯ ಸಂಸ್ಕೃತಿ ಬದಲಿಸಿದ್ದಾರೆ, ಆದ್ರೆ ಕಾಂಗ್ರೆಸ್‌ ಒಡೆದಾಳುವ ನೀತಿ ಪಾಲಿಸುತ್ತಿದೆ: ನಡ್ಡಾ ನಿಗಿನಿಗಿಮಂಡ್ಯದಲ್ಲಿ ʻಮಾಯದಂಥ ಮಳೆʼ – ರಸ್ತೆಗಳು ಜಲಾವೃತವಿದ್ಯುತ್ ಉತ್ಪಾದನೆಯಲ್ಲಿ ವ್ಯತ್ಯಯವಾಗಿದ್ದು, ರಾಜ್ಯದಲ್ಲಿ ಲೋಡ್‌ ಶೆಡ್ಡಿಂಗ್ ಆಗ್ತಿದೆ: ಪರಮೇಶ್ವರ್ನಾಯಕನಾದವನಿಗೆ ಅಡಿಗಡಿಗೂ ಅಡಚಣೆಗಳು ಜಾಸ್ತಿ: ಡಿ.ಕೆ.ಶಿವಕುಮಾರ್ಹೋಬಳಿಗೊಂದು ವಸತಿ ಶಾಲೆ ನಿರ್ಮಾಣಕ್ಕೆ 650 ಕೋಟಿ ಮೀಸಲು: ಮುನಿಯಪ್ಪ