ರಾಯಚೂರು: ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವಕ್ಕೆ ಸರ್ವ ಸಮರ್ಪಣೋತ್ಸವದೊಂದಿಗೆ ಅದ್ಧೂರಿ ತೆರೆ ಬಿದ್ದಿದೆ. ಏಳುದಿನಗಳ ಸಪ್ತರಾತ್ರೋತ್ಸವ ಮುಕ್ತಾಯಗೊಂಡಿದೆ.
ರಾಯರ ಉತ್ತರಾರಾಧನೆ ಬಳಿಕ ಎರಡು ದಿನಗಳ ಕಾಲ ಆರಾಧನೆ ಹಿನ್ನೆಲೆ ರಾಯರ ಮಠದಲ್ಲಿ ವಿಶೇಷ ಪೂಜೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು ಸರ್ವ ಸಮರ್ಪಣೋತ್ಸವದೊಂದಿಗೆ ಆರಾಧನಾ ಮಹೋತ್ಸವಕ್ಕೆ ತೆರೆ ಎಳೆಯಲಾಗಿದೆ.
ಎಲ್ಲಾ ಉತ್ಸವ ವಾಹನಗಳನ್ನು ಭವ್ಯವಾದ ಮರದ ರಥದ ಮೇಲೆ ಇರಿಸಿ ವೈಭವದ ರಥೋತ್ಸವದ ಮೂಲಕ ಹೊರತರುವುದು ಕೊನೆಯ ದಿನದ ವಿಶೇಷವಾಗಿತ್ತು. ನಂತರ 355 ನೇ ಆರಾಧನಾ ಮಹೋತ್ಸವದ ಸಮಯದಲ್ಲಿ ಮಾಡಿದ ಎಲ್ಲಾ ಉತ್ಸವಗಳು, ಸೇವೆಗಳು ಮತ್ತು ವಿಶೇಷ ನೈವೇದ್ಯಗಳನ್ನು ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ರಾಯರಿಗೆ ಅರ್ಪಿಸಿದರು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ರಾಯರ ಆರಾಧನಾ ಮಹೋತ್ಸವಕ್ಕೆ ವಿದ್ಯುಕ್ತ ತೆರೆ ಎಳೆಯಲಾಗಿದೆ.




