LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಫುಡ್‌ ಪ್ರೊಸೆಸಿಂಗ್‌ ಘಟಕಗಳ ಮೇಲೆ ಅಧಿಕಾರಿಗಳ ದಾಳಿ; 1,033 ಕೆಜಿ ಆಹಾರ ಪದಾರ್ಥ ಸೀಜ್

Advertisement
Advertisement
Advertisement

ಹಾವೇರಿ: ಜಿಲ್ಲೆಯ ಆಹಾರ ಸಂಸ್ಕರಣಾ ಘಟಕಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ಹಾಗೂ ರಾಣೇಬೆನ್ನೂರು ತಹಶೀಲ್ದಾರ್ ನೇತೃತ್ವದ ತಂಡ ದಾಳಿ ನಡೆಸಿದೆ. ಈ ವೇಳೆ ಒಟ್ಟು 1,033 ಕೆಜಿ ಆಹಾರ ಪದಾರ್ಥಗಳನ್ನು ಸೀಜ್ ಮಾಡಲಾಗಿದೆ.

ರಾಣೇಬೆನ್ನೂರು ತಾಲೂಕಿನ ಕೃಷ್ಣಾಪುರ, ತರೇದಹಳ್ಳಿ ಹಾಗೂ ಹನುಮನಹಳ್ಳಿ ಗ್ರಾಮದಲ್ಲಿರುವ ಆಹಾರ ಸಂಸ್ಕರಣಾ ಘಟಕಗಳ ಮೇಲೆ ಇತ್ತೀಚೆಗೆ ದಿಢೀರ್ ತಪಾಸಣೆ ನಡೆಸಲಾಯಿತು.

ಈ ವೇಳೆ ಆಹಾರ ಪದಾರ್ಥಗಳನ್ನು ಸರಿಯಾಗಿ ಪ್ಯಾಕ್ ಮಾಡದೆ ಸಾಗಣೆ ಮಾಡುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಹೀಗಾಗಿ ಸ್ಥಳ ಮಹಜರು ನಡೆಸಿ, ಸಂಬಂಧಿಸಿದ ಘಟಕಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಕೃಷ್ಣಾಪುರ ಮತ್ತು ತರೇದಹಳ್ಳಿ ಗ್ರಾಮದ ವೆಂಕಟೇಶ್ವರ ಹ್ಯಾಚರೀಸ್ ಪ್ರೈವೇಟ್ ಲಿಮಿಟೆಡ್‌ನಿಂದ 382 ಕೆಜಿ ಆಹಾರ ಪದಾರ್ಥಗಳನ್ನು ಸೀಜ್ ಮಾಡಲಾಗಿದೆ. ಹನುಮನಹಳ್ಳಿ ಗ್ರಾಮದ ವೆಸ್ಟ್‌ವಿಂಡ್ ಫುಡ್ ಪ್ರೊಸೆಸಿಂಗ್‌ನಿಂದ 651 ಕೆಜಿ ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆಯಲಾಗಿದೆ. 

ಒಟ್ಟು 1,033 ಕೆಜಿ ಆಹಾರ ಪದಾರ್ಥಗಳನ್ನು ಸೀಜ್ ಮಾಡಲಾಗಿದ್ದು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಅನ್ವಯ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಬಂಧಿಸಿದ ಆಹಾರ ಉದ್ದಿಮೆದಾರರು ನೋಟಿಸ್‌ಗೆ ನೀಡುವ ಉತ್ತರವನ್ನು ಆಧರಿಸಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಉಪ ವಿಭಾಗಾಧಿಕಾರಿ ಹಾಗೂ ಪ್ರಭಾರ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಅಂಕಿತ ಅಧಿಕಾರಿ ಕುಮಾರಿ ಕಲ್ಯಾಣಿ ಕಾಂಬಳೆ ತಿಳಿಸಿದ್ದಾರೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪತ್ನಿ ಕೊಂದು ತಾನೂ ನೇಣಿಗೆ ಶರಣಾದ ಪತಿ‌ಪಾಕ್‌ನ ಐಎಸ್‌ಐಗೆ ಸೂಕ್ಷ್ಮ ಮಾಹಿತಿ, ಸಿಮ್‌ಗಳನ್ನು ರವಾನಿಸುತ್ತಿದ್ದ ದಂಪತಿ ಅರೆಸ್ಟ್‌ಯುವತಿಯರ ಒಳಉಡುಪು, ಸ್ಯಾನಿಟರಿ ಪ್ಯಾಡ್‌ ಕಳ್ಳತನ; ವಿಚಿತ್ರವಾಗಿ ಜೋಡಿಸಿ ಲೈಂಗಿಕತೃಪ್ತಿ ಪಡ್ತಿದ್ದ ಕಾಮುಕರಾತ್ರಿ ಹೊತ್ತು ಗ್ರಾಮಕ್ಕೆ ನುಗ್ಗಿ ಕುರಿ, ನಾಯಿ ಹೊತ್ತೊಯ್ಯುತ್ತಿದ್ದ ಚಿರತೆ ಸೆರೆ; ನಿಟ್ಟುಸಿರು ಬಿಟ್ಟ ಜನಹನೂರು ಎನ್‌ಕೌಂಟರ್ ಪ್ರಕರಣ – ಸರ್ಕಾರಕ್ಕೆ ಮ್ಯಾಜಿಸ್ಟ್ರೇಟ್ ತನಿಖಾ ವರದಿ ಸಲ್ಲಿಕೆನಾಗೇಂದ್ರ ರಾಜೀನಾಮೆ; ವ್ಯಕ್ತಿಯಲ್ಲ ವ್ಯವಸ್ಥೆ ವಿರುದ್ಧ ನಮ್ಮ ಹೋರಾಟ: ಸಿ‌.ಸಿ ಪಾಟೀಲಫುಡ್‌ ಪ್ರೊಸೆಸಿಂಗ್‌ ಘಟಕಗಳ ಮೇಲೆ ಅಧಿಕಾರಿಗಳ ದಾಳಿ; 1,033 ಕೆಜಿ ಆಹಾರ ಪದಾರ್ಥ ಸೀಜ್ಜಮೀನಿಗಾಗಿ 20 ವರ್ಷಗಳಿಂದ ಅಲೆದಾಟ – ಕಾರ್ಗಿಲ್‌ ಯುದ್ಧದಲ್ಲಿ ಹೋರಾಡಿದ್ದ ಯೋಧನಿಂದ ಆತ್ಮಹತ್ಯೆಗೆ ಯತ್ನ101 ತಾಲೂಕುಗಳಲ್ಲಿ ಬರ; ವಿಬಿಜಿ ರಾಮ್ ಜಿ ಯೋಜನೆಯಲ್ಲಿ 15 ದಿನದೊಳಗೆ ಕೂಲಿ ಪಾವತಿಗೆ ಈಶ್ವರ ಖಂಡ್ರೆ ಸೂಚನೆಸಾಕು ನಾಯಿಯನ್ನು ಕಚ್ಚಿದ ಬೀದಿನಾಯಿಗೆ ಗುಂಡಿಕ್ಕಿ ಹತ್ಯೆ – ಆರೋಪಿ ಅರೆಸ್ಟ್‌