LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪಾಕ್‌ನ ಐಎಸ್‌ಐಗೆ ಸೂಕ್ಷ್ಮ ಮಾಹಿತಿ, ಸಿಮ್‌ಗಳನ್ನು ರವಾನಿಸುತ್ತಿದ್ದ ದಂಪತಿ ಅರೆಸ್ಟ್‌

Advertisement
Advertisement
Advertisement

ನವದೆಹಲಿ: ಪಾಕಿಸ್ತಾನದ ಐಎಸ್‌ಐ (ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್) ಪರ ಬೇಹುಗಾರಿಕೆ ನಡೆಸುತ್ತಿದ್ದ ದಂಪತಿಯನ್ನು ದೆಹಲಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಸಾಹಿಲ್ (25) ಮತ್ತು ಆತನ ಪತ್ನಿ ಸಮೀರಾ (21) ಬಂಧಿತ ಆರೋಪಿಗಳು. ಇಬ್ಬರು ಪಾಕಿಸ್ತಾನ ಮೂಲದ ಗುಪ್ತಚರ ಸಂಸ್ಥೆಯ ಸಿಬ್ಬಂದಿ ಜೊತೆ ಸಂಪರ್ಕದಲ್ಲಿದ್ದರು. ಅವರೊಂದಿಗೆ ಭಾರತಕ್ಕೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನು ಇಬ್ಬರು ಹಂಚಿಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ಈ ಇಬ್ಬರನ್ನೂ ಭಾರತದ ಸಿಮ್ ಕಾರ್ಡ್‌ ಪೂರೈಸಲು, ಕಾರ್ಯಕರ್ತರನ್ನು ನೇಮಿಸಿಕೊಳ್ಳಲು ಮತ್ತು ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸಲು ಬಳಸಿಕೊಳ್ಳಲಾಗಿದೆ. ದಂಪತಿ 2024 ರಿಂದ ಬೇಹುಗಾರಿಕೆ ನಡೆಸುತ್ತಿದ್ದರು. ಇದಕ್ಕೆ ಪಾಕಿಸ್ತಾನಿ ಹ್ಯಾಂಡ್ಲರ್‌ಗಳು ಹಣ ಕಳುಹಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

30,000ಕ್ಕೆ ಸಿಮ್‌ ಮಾರಾಟ
ಸಾಹಿಲ್ ಮತ್ತು ಸಮೀರಾ 2024 ಮತ್ತು 2025 ರ ನಡುವೆ ಎಂಟು ಭಾರತದ ಸಿಮ್ ಕಾರ್ಡ್‌ಗಳನ್ನು ದುಬೈ ಮೂಲಕ ಪಾಕಿಸ್ತಾನಕ್ಕೆ ಕಳುಹಿಸಿದ್ದಾರೆ. ಸಿಮ್ ಕಾರ್ಡ್‌ಗಳಿಗಾಗಿ ಪಾಕ್‌ ಹ್ಯಾಂಡ್ಲರ್‌ಗಳು ಅವರಿಗೆ 30,000 ರೂ.ಗಳನ್ನು ಪಾವತಿಸಿದ್ದಾರೆ. ಈ ಸಿಮ್‌ಗಳನ್ನು ಪಾಕಿಸ್ತಾನದಲ್ಲಿ ವಾಟ್ಸಾಪ್ ಖಾತೆಗಳನ್ನು ಸಕ್ರಿಯಗೊಳಿಸಲು ಬಳಸಿದ್ದಾರೆ. ಈ ಮೂಲಕ ಪಾಕಿಸ್ತಾನಿ ಗುಪ್ತಚರ ಕಾರ್ಯಕರ್ತರು ಭಾರತದ ಜನರನ್ನು ಸಂಪರ್ಕಿಸಲು ಮತ್ತು ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸಲು ಆ ಖಾತೆಗಳನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ.

ಸೂಕ್ಷ್ಮ ಪ್ರದೇಶಗಳ ಮೇಲೆ ಕಣ್ಣಿಡೋ ಕೆಲಸ
ಭಾರತದ ವಿವಿಧ ಭಾಗಗಳಲ್ಲಿನ ಕಂಟೋನ್ಮೆಂಟ್ ಪ್ರದೇಶಗಳ ಮಾಹಿತಿ ಕಲೆಹಾಕಲು ಮತ್ತು ಕ್ಷೇತ್ರ ಕಾರ್ಯಾಚರಣೆಗಳಿಗಾಗಿ ಜನರನ್ನು ನೇಮಿಸಿಕೊಳ್ಳುವ ಕಾರ್ಯವನ್ನು ಸಾಹಿಲ್ ವಹಿಸಲಾಗಿತ್ತು.

ತನಿಖೆ ವೇಳೆ ನ್ಯಾಯಾಲಯದ ವಿಚಾರಣೆಯನ್ನು ಎದುರಿಸುತ್ತಿರುವ ಸೇನಾ ಸಿಬ್ಬಂದಿಯ ಮಾಹಿತಿಯನ್ನು ಪಾಕ್‌ಗೆ ಆತ ರವಾನಿಸಿದ್ದಾನೆ ಎಂದು ತಿಳಿದು ಬಂದಿದೆ. ಅಲ್ಲದೇ ಭಾರತೀಯ ರಕ್ಷಣಾ ಸಂಸ್ಥೆಗಳು ಮತ್ತು ಮಿಲಿಟರಿ ಚಟುವಟಿಕೆಗಳ ಬಗ್ಗೆ ಸೂಕ್ಷ್ಮ ವಿವರಗಳನ್ನು ಆರೋಪಿಗಳು ಕಲೆಹಾಕುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಿಂದ ಸ್ಪೈ ನೆಟ್‌ವರ್ಕ್‌
ಪೊಲೀಸರ ವಿಶೇಷ ದಳವು ಮೊದಲು ದೆಹಲಿಯ ಸರಾಯ್ ಕಾಲೆ ಖಾನ್‌ನಲ್ಲಿರುವ ಚಾಂದ್ ಬೀಬಿ ಕ್ಯಾಂಪ್‌ನಿಂದ ಮೊಹಮ್ಮದ್ ಅಸ್ಫಾಕ್ ಅವರ ಮಗ ಸಾಹಿಲ್‌ನನ್ನು ಬಂಧಿಸಿತ್ತು. ಆತನ ಮೊಬೈಲ್ ಫೋನ್‌ನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿದಾಗ ಪಾಕಿಸ್ತಾನಿ ಏಜೆಂಟ್‌ಗಳೊಂದಿಗಿನ ಚಾಟ್‌ ಬಹಿರಂಗಗೊಂಡಿತ್ತು. ಆ ಮಾಹಿತಿ ಆಧಾರದ ಮೇಲೆ, ತನಿಖೆ ತೀವ್ರಗೊಳಿಸಿದಾಗ ಸಮೀರಾ ಪಾತ್ರ ಇರುವುದು ಗೊತ್ತಾಗಿತ್ತು. ಬಳಿಕ ಆಕೆಯನ್ನು ಪೊಲೀಸರು ಬಂಧಿಸಿದ್ದರು.

ಸಾಹಿಲ್ ಮೊದಲು 2024 ರಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ಪಾಕಿಸ್ತಾನಿ ಏಜೆಂಟ್‌ನ್ನು ಸಂಪರ್ಕಿಸಿದ್ದ. ಇನ್ನೂ ಸಾಹಿಲ್ ಮದುವೆಯಾಗುವ ಮೊದಲು 2022 ರಲ್ಲಿ ಸಮೀರಾಳನ್ನು ಭೇಟಿಯಾಗಿದ್ದ. ಹೀಗೆ ಈ ಜಾಲ ಸಕ್ರಿಯವಾಗಿತ್ತು. ನಂತರ ಪಾಕಿಸ್ತಾನಿ ಏಜೆಂಟ್, ಈ ದಂಪತಿಯನ್ನು ಪಾಕಿಸ್ತಾನಿ ಗುಪ್ತಚರ ಕಾರ್ಯಕರ್ತನಿಗೆ ಪರಿಚಯಿಸಿದ್ದ. ಆತ ಹಣಕಾಸಿನ ಭರವಸೆ ನೀಡುವ ಮೂಲಕ ಬೇಹುಗಾರಿಕೆಗೆ ನೇಮಿಸಿಕೊಂಡಿದ್ದ.

ದಂಪತಿಯಿಂದ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೊಬೈಲ್‌ನಲ್ಲಿ ಪಾಕಿಸ್ತಾನಿ ಗುಪ್ತಚರ ಕಾರ್ಯಕರ್ತರೊಂದಿಗಿನ ಸಂಭಾಷಣೆಗಳು ಮತ್ತು ಭಾರತದಲ್ಲಿನ ನೆಟ್‌ವರ್ಕ್‌ನ ಸಂಪರ್ಕಗಳ ಬಗ್ಗೆ ಮಾಹಿತಿ ಇದೆ ಎಂದು ಆರೋಪಿಸಲಾಗಿದೆ.

ಯಾರು ಈ ಆರೋಪಿಗಳು?
2001 ರಲ್ಲಿ ಜನಿಸಿದ ಸಾಹಿಲ್, ದೆಹಲಿಯ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಿಂದ ಬಿಎ ಪದವಿ ಪಡೆದಿದ್ದ. ಈತ ವಕೀಲರೊಂದಿಗೆ ಕೆಲಸ ಮಾಡಿದ್ದ ಮತ್ತು ಎಲ್‌ಎಲ್‌ಬಿ ಓದಲು ಯೋಜಿಸುತ್ತಿದ್ದ. ಜೂನ್ 2025 ರಲ್ಲಿ ಕೆಲಸವನ್ನು ತೊರೆದಿದ್ದ ಎಂದು ತಿಳಿದು ಬಂದಿದೆ.

2005 ರಲ್ಲಿ ಜನಿಸಿದ ಸಮೀರಾ, ಕೇಶವ್ ಪುರಂನ ಕನ್ಯಾ ವಿದ್ಯಾಲಯದಲ್ಲಿ 12 ನೇ ತರಗತಿಯವರೆಗೆ ಅಧ್ಯಯನ ಮಾಡಿದ್ದಳು. ನಂತರ ಕರೆಸ್ಪಾಂಡೆಂಟ್‌ ಮೂಲಕ ಬಿಎ ಪದವಿ ಮಾಡಿದ್ದಳು. ಬಂಧನಕ್ಕೂ ಮುನ್ನ ನೋಯ್ಡಾದ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದಳು. 

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪತ್ನಿ ಕೊಂದು ತಾನೂ ನೇಣಿಗೆ ಶರಣಾದ ಪತಿ‌ಪಾಕ್‌ನ ಐಎಸ್‌ಐಗೆ ಸೂಕ್ಷ್ಮ ಮಾಹಿತಿ, ಸಿಮ್‌ಗಳನ್ನು ರವಾನಿಸುತ್ತಿದ್ದ ದಂಪತಿ ಅರೆಸ್ಟ್‌ಯುವತಿಯರ ಒಳಉಡುಪು, ಸ್ಯಾನಿಟರಿ ಪ್ಯಾಡ್‌ ಕಳ್ಳತನ; ವಿಚಿತ್ರವಾಗಿ ಜೋಡಿಸಿ ಲೈಂಗಿಕತೃಪ್ತಿ ಪಡ್ತಿದ್ದ ಕಾಮುಕರಾತ್ರಿ ಹೊತ್ತು ಗ್ರಾಮಕ್ಕೆ ನುಗ್ಗಿ ಕುರಿ, ನಾಯಿ ಹೊತ್ತೊಯ್ಯುತ್ತಿದ್ದ ಚಿರತೆ ಸೆರೆ; ನಿಟ್ಟುಸಿರು ಬಿಟ್ಟ ಜನಹನೂರು ಎನ್‌ಕೌಂಟರ್ ಪ್ರಕರಣ – ಸರ್ಕಾರಕ್ಕೆ ಮ್ಯಾಜಿಸ್ಟ್ರೇಟ್ ತನಿಖಾ ವರದಿ ಸಲ್ಲಿಕೆನಾಗೇಂದ್ರ ರಾಜೀನಾಮೆ; ವ್ಯಕ್ತಿಯಲ್ಲ ವ್ಯವಸ್ಥೆ ವಿರುದ್ಧ ನಮ್ಮ ಹೋರಾಟ: ಸಿ‌.ಸಿ ಪಾಟೀಲಫುಡ್‌ ಪ್ರೊಸೆಸಿಂಗ್‌ ಘಟಕಗಳ ಮೇಲೆ ಅಧಿಕಾರಿಗಳ ದಾಳಿ; 1,033 ಕೆಜಿ ಆಹಾರ ಪದಾರ್ಥ ಸೀಜ್ಜಮೀನಿಗಾಗಿ 20 ವರ್ಷಗಳಿಂದ ಅಲೆದಾಟ – ಕಾರ್ಗಿಲ್‌ ಯುದ್ಧದಲ್ಲಿ ಹೋರಾಡಿದ್ದ ಯೋಧನಿಂದ ಆತ್ಮಹತ್ಯೆಗೆ ಯತ್ನ101 ತಾಲೂಕುಗಳಲ್ಲಿ ಬರ; ವಿಬಿಜಿ ರಾಮ್ ಜಿ ಯೋಜನೆಯಲ್ಲಿ 15 ದಿನದೊಳಗೆ ಕೂಲಿ ಪಾವತಿಗೆ ಈಶ್ವರ ಖಂಡ್ರೆ ಸೂಚನೆಸಾಕು ನಾಯಿಯನ್ನು ಕಚ್ಚಿದ ಬೀದಿನಾಯಿಗೆ ಗುಂಡಿಕ್ಕಿ ಹತ್ಯೆ – ಆರೋಪಿ ಅರೆಸ್ಟ್‌