LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪತ್ನಿ ಕೊಂದು ತಾನೂ ನೇಣಿಗೆ ಶರಣಾದ ಪತಿ‌

Advertisement
Advertisement
Advertisement

ಧಾರವಾಡ: ಪತ್ನಿಯನ್ನು ಕೊಂದು ಪತಿ ತಾನೂ ನೇಣಿಗೆ ಶರಣಾದ ಘಟನೆ ಧಾರವಾಡ  ತಾಲೂಕಿನ ಗರಗ ಗ್ರಾಮದಲ್ಲಿ ಗುರುವಾರ ತಡರಾತ್ರಿ ನಡೆದಿದೆ.

ಮೌಲಾಸಾಬ್ (28) ಎಂಬಾತನೇ ತನ್ನ ಪತ್ನಿ ಸಲ್ಮಾ (21) ಎಂಬಾಕೆಯನ್ನು ಕೊಲೆ ಮಾಡಿ ಕೊನೆಗೆ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಒಂದೂವರೆ ವರ್ಷದ ಮಗುವಿನ ಎದುರೇ ಮೌಲಾಸಾಬ್ ಪತ್ನಿಯನ್ನು ಕೊಲೆ ಮಾಡಿ ತಾನೂ ನೇಣಿಗೆ ಶರಣಾಗಿದ್ದಾನೆ. ಕಳೆದ ಮೂರು ವರ್ಷಗಳ ಹಿಂದಷ್ಟೇ ಇವರ ವಿವಾಹವಾಗಿತ್ತು. 

ಗುರುವಾರ ತಡರಾತ್ರಿ ಈ ಘಟನೆ ನಡೆದಿದೆ. ತಡರಾತ್ರಿವರೆಗೂ ಮನೆಯಲ್ಲಿ ಏನೂ ಶಬ್ದ ಬಾರದೇ ಇದ್ದಿದ್ದರಿಂದ ವೃದ್ಧೆಯೊಬ್ಬರು ಹೋಗಿ ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಕೊಲೆಯಾದ ಸಲ್ಮಾ ಮನೆಯವರು ಗರಗ ಗ್ರಾಮಕ್ಕೆ ಬರುತ್ತಿದ್ದಂತೆಯೇ ಎರಡೂ ಕುಟುಂಬಗಳ ಮಧ್ಯೆ ಗಲಾಟೆ ಸಂಭವಿಸಿದೆ. ಎರಡೂ ಕುಟುಂಬದವರು ಪರಸ್ಪರ ಹೊಡೆದಾಟಕ್ಕೆ ಮುಂದಾಗಿದ್ದಾರೆ.

ಅತ್ತೆ, ಮಾವನ ಕಾಟ ಸಲ್ಮಾಳಿಗೆ ಇತ್ತು. ಈ ಕಾಟಕ್ಕೆ ತನ್ನ ಮಗಳನ್ನೇ ಬಲಿ ಪಡೆದುಕೊಂಡಿದ್ದಾರೆ. ಅಳಿಯನ ಕಾಟ ಏನೂ ಇರಲಿಲ್ಲ. ಕೂಲಿ ಮಾಡುತ್ತಿದ್ದ ಆತನಿಗೆ ನಾವೇ ಸಹಾಯ ಮಾಡುತ್ತಿದ್ದೆವು. ನನ್ನ ಮಗಳು ಸಣ್ಣವಳು. ಆಕೆಯಲ್ಲಿ ಚುರುಕುತನ ಇರಲಿಲ್ಲ ಎಂದು ಸಲ್ಮಾ ತಾಯಿ ಆರೋಪಿಸಿದ್ದಾರೆ. ಘಟನೆ ನಡೆದ ತಕ್ಷಣ ಸ್ಥಳಕ್ಕೆ ಎಸ್‌ಪಿ ಗುಂಜನ್ ಆರ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವಗಳನ್ನು ಧಾರವಾಡ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪತ್ನಿ ಕೊಂದು ತಾನೂ ನೇಣಿಗೆ ಶರಣಾದ ಪತಿ‌ಪಾಕ್‌ನ ಐಎಸ್‌ಐಗೆ ಸೂಕ್ಷ್ಮ ಮಾಹಿತಿ, ಸಿಮ್‌ಗಳನ್ನು ರವಾನಿಸುತ್ತಿದ್ದ ದಂಪತಿ ಅರೆಸ್ಟ್‌ಯುವತಿಯರ ಒಳಉಡುಪು, ಸ್ಯಾನಿಟರಿ ಪ್ಯಾಡ್‌ ಕಳ್ಳತನ; ವಿಚಿತ್ರವಾಗಿ ಜೋಡಿಸಿ ಲೈಂಗಿಕತೃಪ್ತಿ ಪಡ್ತಿದ್ದ ಕಾಮುಕರಾತ್ರಿ ಹೊತ್ತು ಗ್ರಾಮಕ್ಕೆ ನುಗ್ಗಿ ಕುರಿ, ನಾಯಿ ಹೊತ್ತೊಯ್ಯುತ್ತಿದ್ದ ಚಿರತೆ ಸೆರೆ; ನಿಟ್ಟುಸಿರು ಬಿಟ್ಟ ಜನಹನೂರು ಎನ್‌ಕೌಂಟರ್ ಪ್ರಕರಣ – ಸರ್ಕಾರಕ್ಕೆ ಮ್ಯಾಜಿಸ್ಟ್ರೇಟ್ ತನಿಖಾ ವರದಿ ಸಲ್ಲಿಕೆನಾಗೇಂದ್ರ ರಾಜೀನಾಮೆ; ವ್ಯಕ್ತಿಯಲ್ಲ ವ್ಯವಸ್ಥೆ ವಿರುದ್ಧ ನಮ್ಮ ಹೋರಾಟ: ಸಿ‌.ಸಿ ಪಾಟೀಲಫುಡ್‌ ಪ್ರೊಸೆಸಿಂಗ್‌ ಘಟಕಗಳ ಮೇಲೆ ಅಧಿಕಾರಿಗಳ ದಾಳಿ; 1,033 ಕೆಜಿ ಆಹಾರ ಪದಾರ್ಥ ಸೀಜ್ಜಮೀನಿಗಾಗಿ 20 ವರ್ಷಗಳಿಂದ ಅಲೆದಾಟ – ಕಾರ್ಗಿಲ್‌ ಯುದ್ಧದಲ್ಲಿ ಹೋರಾಡಿದ್ದ ಯೋಧನಿಂದ ಆತ್ಮಹತ್ಯೆಗೆ ಯತ್ನ101 ತಾಲೂಕುಗಳಲ್ಲಿ ಬರ; ವಿಬಿಜಿ ರಾಮ್ ಜಿ ಯೋಜನೆಯಲ್ಲಿ 15 ದಿನದೊಳಗೆ ಕೂಲಿ ಪಾವತಿಗೆ ಈಶ್ವರ ಖಂಡ್ರೆ ಸೂಚನೆಸಾಕು ನಾಯಿಯನ್ನು ಕಚ್ಚಿದ ಬೀದಿನಾಯಿಗೆ ಗುಂಡಿಕ್ಕಿ ಹತ್ಯೆ – ಆರೋಪಿ ಅರೆಸ್ಟ್‌