LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಜೋಗ್‌ ಫಾಲ್ಸ್‌ಗೆ ಜೀವಕಳೆ – ಪ್ರವಾಸಿಗರಿಗಾಗಿ ಕೆಎಸ್ಆರ್‌ಟಿಸಿಯಿಂದ ವಿಶೇಷ ಪ್ಯಾಕೇಜ್

Advertisement
Advertisement

ಶಿವಮೊಗ್ಗ: ಮಲೆನಾಡಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಜೋಗ ಜಲಪಾತಕ್ಕೆ ಜೀವಕಳೆ ಬಂದಿದೆ. ಈ ಹೊತ್ತಿನಲ್ಲಿ ಪ್ರವಾಸಿಗರ ನೆಚ್ಚಿನ ತಾಣವಾಗಿರುವ ವಿಶ್ವವಿಖ್ಯಾತ ಜೋಗ್‌ ಫಾಲ್ಸ್ (Jog Falls) ವೀಕ್ಷಣೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ  ಶಿವಮೊಗ್ಗ ವಿಭಾಗ ವಿಶೇಷ ಪ್ಯಾಕೇಜ್ ಸಾರಿಗೆ ಸೇವೆಯನ್ನು ಆರಂಭಿಸಿದೆ.

ಸಾರ್ವಜನಿಕ ಪ್ರಯಾಣಿಕರು ಮತ್ತು ಪ್ರವಾಸಿಗರ ಅನುಕೂಲಕ್ಕಾಗಿ ಪ್ರತಿ ಶನಿವಾರ ಮತ್ತು ಭಾನುವಾರ ಈ ವಿಶೇಷ ಬಸ್ಸುಗಳ ಕಾರ್ಯಾಚರಣೆ ನಡೆಯಲಿದೆ. ಈ ವಿಶೇಷ ಸಾರಿಗೆಯು ಶಿವಮೊಗ್ಗ ಬಸ್ ನಿಲ್ದಾಣದಿಂದ ಹೊರಟು ಸಿಗಂದೂರು, ವರದಾಮೂಲ, ಇಕ್ಕೇರಿ ಮತ್ತು ಕೆಳದಿ ಮಾರ್ಗವಾಗಿ ಜೋಗ್‌ಫಾಲ್ಸ್‌ಗೆ ತಲುಪಲಿದೆ. 

ಶಿವಮೊಗ್ಗದಿಂದ ಹೊರಡುವ ಸಮಯ ಬೆಳಿಗ್ಗೆ 08:00 ಗಂಟೆ, ಜೋಗ್‌ಫಾಲ್ಸ್ ತಲುಪುವ ಸಮಯ ಮಧ್ಯಾಹ್ನ 02 ಗಂಟೆ. ಜೋಗ್‌ಫಾಲ್ಸ್‌ನಿಂದ ಹಿಂತಿರುಗುವ ಸಮಯ ಸಂಜೆ 05 ಗಂಟೆ. ಶಿವಮೊಗ್ಗ ತಲುಪುವ ಸಮಯ ರಾತ್ರಿ 07:30 ಗಂಟೆ ಆಗಿರಲಿದೆ. ಪ್ರಯಾಣ ದರ: ವಯಸ್ಕರಿಗೆ 450 ರೂ. ಹಾಗೂ ಮಕ್ಕಳಿಗೆ 250 ರೂ. ಆಗಿರಲಿದೆ.

ಮಳೆಗಾಲದಲ್ಲಿ ಸುಂದರ ಜಲಪಾತ ಹಾಗೂ ಸುತ್ತಮುತ್ತಲಿನ ಧಾರ್ಮಿಕ ಮತ್ತು ಐತಿಹಾಸಿಕ ತಾಣಗಳನ್ನು ವೀಕ್ಷಿಸಲು ಬಯಸುವ ಸಾರ್ವಜನಿಕರು ಹಾಗೂ ಪ್ರವಾಸಿಗರು ಈ ವಿಶೇಷ ಪ್ಯಾಕೇಜ್ ಸಾರಿಗೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಕೆಎಸ್ಆರ್‌ಟಿಸಿ ಶಿವಮೊಗ್ಗ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಳಗಾವಿ ಬರ ಜಿಲ್ಲೆಯೆಂದು ಘೋಷಿಸಲು ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಆಗ್ರಹನೌಕರಿ ಹೆಸರಿನಲ್ಲಿ 6.17 ಲಕ್ಷ ರೂ. ವಂಚನೆಪ್ರಮಾಣಪತ್ರ ವಿತರಣೆ ಕಾರ್ಯದಿಂದ ಮುಕ್ತಗೊಳಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆರಾಜ್ಯದಲ್ಲಿ SIR ಅವಧಿ ವಿಸ್ತರಣೆ – ಆ.17 ರ ವರೆಗೆ ಬಿಎಲ್‌ಒ ಮನೆ ಮನೆ ಭೇಟಿಆಟವಾಡ್ತಿದ್ದ ವೇಳೆ ಶಾಲೆಯ ಗೇಟ್ ಬಿದ್ದು 4 ವರ್ಷದ ಮಗು ಸಾವುಗೂಂಡಾಗಿರಿ ಮಾಡಿ ಬಲವಂತವಾಗಿ ಹೊರಟ್ಟಿ ಬಳಿ ರಾಜೀನಾಮೆ ಕೊಡಿಸಿದ್ದಾರೆ: ಅಶೋಕ್‌ ಕಿಡಿಸಚಿವ ಸ್ಥಾನ ಬಿಟ್ಟು ಪಕ್ಷದ ಕೆಲಸ ಮಾಡಿ ಅಂತ ಹೈಕಮಾಂಡ್ ಹೇಳಿದ್ರೆ ಎಲ್ಲರೂ ಮಾಡಬೇಕು: ಪ್ರಿಯಾಂಕ್ ಖರ್ಗೆಶಿವಾನಂದ ನೀಲಣ್ಣವರ್‌ ಬಹುಕೋಟಿ ವಂಚನೆ ಕೇಸ್‌ಗೆ ಇಡಿ ಎಂಟ್ರಿ – ಮೂರು ಕಡೆ ದಾಳಿ ʻಲೋಕಾʼ ಬಲೆಗೆ ಬಿದ್ದ ಬೆಸ್ಕಾಂ ಅಧಿಕಾರಿಗಳು – 1.50 ಲಕ್ಷ ಲಂಚ ಪಡೆಯುವಾಗ ರೆಡ್‌ಹ್ಯಾಂಡಾಗಿ ಲಾಕ್ರೈತರು ಬೆಳೆ ವಿಮೆ ಮಾಡಿಸಲು ಆ.14 ಕೊನೆಯ ದಿನ: ಸಚಿವ ಕೆ.ಹೆಚ್ ಮುನಿಯಪ್ಪ