LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್‌ನನ್ನು ಕೆಪಿಎಸ್‌ಸಿಗೆ ನೇಮಕ ಮಾಡಿದ್ದು ಬಿಜೆಪಿ: ಬಿಕೆ ಹರಿಪ್ರಸಾದ್

Advertisement
Advertisement
Advertisement

ಬೀದರ್: ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್‌ನನ್ನು  ಕೆಪಿಎಸ್‌ಸಿಗೆ ನೇಮಕ ಮಾಡಿದ್ದು ಯಾರು? ಇಂಥವರನ್ನು ನೇಮಕ ಮಾಡಿದ್ದೆ ಬಿಜೆಪಿಯ ನಾಯಕರು ಎಂದು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಬೀದರ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ (BJP) ಅಧ್ಯಕ್ಷ ಬಿವೈ ವಿಜಯೇಂದ್ರ 20 ಕೋಟಿ ಲಂಚ ಹಗರಣದಲ್ಲಿ ಸ್ವಂತ ತಂದೆಯನ್ನೇ ಜೈಲಿಗೆ ಕಳುಹಿಸಿದರು. ಇವರು ನಮಗೆ ಲಂಚದ ಬಗ್ಗೆ ಪಾಠದ ನೈತಿಕತೆ ಹೇಳತ್ತಾರಾ? ಸಾಮ್ರಾಟ ಅಶೋಕ್ ಸೇರಿದಂತೆ ಯರ‍್ಯಾರ ಮೇಲೆ ಯಾವ ಕೇಸ್ ಇದೆಯಂತ ನಾನು ಹೇಳುತ್ತೇನೆ ಎಂದು ಕಿಡಿಕಾರಿದರು. 

ನಾವು ನೈತಿಕ ಪಾಠ ಬಿಜೆಪಿಯಿಂದ ಕಲಿಯಬೇಕಿಲ್ಲಾ, ಬಿಜೆಪಿಯವರು ಕಂಠಪೂರ್ತಿ ಲಂಚ ತುಂಬಿದ್ದು, ಕೆಎಸ್ ಈಶ್ವರಪ್ಪ ಯಾಕೆ ಅಂದು ರಾಜೀನಾಮೆ ನೀಡಿದ್ರು, ಬಿಜೆಪಿಯದ್ದು 40% ಅಲ್ಲ, ಇನ್ನೂ ಜಾಸ್ತಿ ಇದೆ ಎಂದು ಆರೋಪಿಸಿದರು. 

ನಾಗೇಂದ್ರ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಬಿಜೆಪಿಯವರು ಏನು ನ್ಯಾಯಾಧೀಶರಾ? ನಾಗೇಂದ್ರ ಕರ್ಮ ಮಾಡಿದ್ರೆ ಚಾರ್ಜ್‌ಶೀಟ್‌ನಲ್ಲಿ ಅವರ ಹೆಸರು ಇರಬೇಕಿತ್ತು. ನಾಗೇಂದ್ರ ವಿಚಾರದಲ್ಲಿ ಬಿಜೆಪಿ ಷಡ್ಯಂತ್ರ ಮಾಡಿ ರಾಜೀನಾಮೆ ಕೊಡಿಸಿದ್ದು, ಒಬ್ಬ ದಲಿತ ನಾಯಕನನ್ನು ಮುಗಿಸಲು ಬಿಜೆಪಿ ಕುತಂತ್ರ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. 

ಪಾದಯಾತ್ರೆ ಮಾಡಲಿ, ಸ್ವಲ್ಪ ಆರೋಗ್ಯ ಸರಿಯಾಗುತ್ತೆ, ಅವರ ತಲೆ ಮತ್ತು ಆರೋಗ್ಯನೂ ಕೆಟ್ಟಿದೆ. ಪಾದಯಾತ್ರೆ ಮಾಡುವುದರಿಂದ ಸ್ವಲ್ಪ ಚುರುಕಾಗತ್ತಾರೆ. ಪ್ರಾಸಿಕ್ಯೂಷನ್‌ಗೆ ಕೊಡಲಿ, ನಾವು ಕೋರ್ಟ್‌ನಲ್ಲಿ ಹೋರಾಟ ಮಾಡುತ್ತೇವೆ. ಈ ನೆಲದ ಕಾನೂನಿನ ಚೌಕಟ್ಟಿನಲ್ಲಿ ಹೋರಾಟ ಮಾಡುತ್ತೇವೆ. ಮೊದಲ ವಿಕೆಟ್ ಪತನ ಅನ್ನೋಕೆ ಇದೆನಾ ಐಪಿಎಲ್ ಅಲ್ಲ, ಬಿಜೆಪಿಯಲ್ಲಿ ಈಗಾಗಲೇ ಎಷ್ಟು ವಿಕೆಟ್‌ಗಳು ಪತನವಾಗಿವೆ. ಎಷ್ಟು ಜನರ ಮೇಲೆ ಕ್ರಿಮಿನಲ್ ಕೇಸ್‌ಗಳು ಇವೆ, ಜನಾರ್ದನ ರೆಡ್ಡಿಯಂಥ ಒಬ್ಬ ಮಹಾನ್ ನಾಯಕನನ್ನು ಈಗ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ ಎಂದು ಹರಿಹಾಯ್ದರು. 

ನಾಲ್ಕೂವರೆ ವರ್ಷ ರೆಡ್ಡಿ ಜೈಲಿನಲ್ಲಿದ್ದರು. ಅವರ ನಾಯಕ ಬಿಎಸ್‌ವೈ ಮೇಲೆ ಪೋಕ್ಸೋ ಕೇಸ್ ಇದೆ. ರೇಣುಕಾಸ್ವಾಮಿ, ಹೆಚ್.ಡಿ ಕುಮಾರಸ್ವಾಮಿ ಮೇಲೆ ಪ್ರಾಸಿಕ್ಯೂಷನ್ ಕೇಸ್ ಇವೆ. ಬಿಜೆಪಿಗೆ ಸಚಿವ ಬಿ ನಾಗೇಂದ್ರರನ್ನು ಸೇರಿಸಲು ಶತಪ್ರಯತ್ನ ಮಾಡಿದರು. ಬಳ್ಳಾರಿಯಲ್ಲಿ ಎಲ್ಲಾ ಬಿಜೆಪಿ ನಾಯಕರು ಅಲ್ಲಿ ನೆಲವನ್ನು ಕಳೆದುಕೊಂಡಿದ್ದು, 25 ಕೇಸ್ ಇರುವಂತ ನಾಯಕರನ್ನು ಬಿಜೆಪಿಗೆ ಸೇರಿಸಿಕೊಂಡು ವಾಷಿಂಗ್ ಮಿಷನ್‌ಗೆ ಹಾಕಿ ಕ್ಲೀನ್ ಮಾಡಿದ್ದಾರೆ. ನಾಗೇಂದ್ರರನ್ನು ಸೇರಿಸಲು ಪ್ರಯತ್ನ ಮಾಡಿದ್ರು, ಆದ್ರೆ ಆಗಿಲ್ಲ, ಚಾರ್ಜ್‌ಶೀಟ್‌ನಲ್ಲಿ ಎಲ್ಲೂ ಅವರ ಹೆಸರು ಇಲ್ಲಾ, ಹೀಗಾಗಿ ಮತ್ತೆ ಮಂತ್ರಿ ಮಾಡಿದ್ದೆವು ಎಂದು ಸಮರ್ಥಿಸಿಕೊಂಡರು. 

ಸಚಿವ ಸಂಪುಟ ವಿಸ್ತರಣೆ ಸಿಎಂ ಡಿಕೆ ಶಿವಕುಮಾರ್ ತೀರ್ಮಾನ ಮಾಡುತ್ತಾರೆ. ಓರ್ವ ಮಹಿಳೆಗೆ ಅವಕಾಶ ನೀಡಬೇಕು ಆದ್ರೆ ಸಮುದಾಯ ಅನ್ನೋದು ಬರಲ್ಲ, ಮಂತ್ರಿ ಮಂಡಲದಲ್ಲಿ ಮಹಿಳೆ ಒಬ್ಬರು ಇರತ್ತಾರೆ ಎಂದು ಬಿಜೆಪಿ ನಾಯಕರ ವಿರುದ್ಧ ತೀರುಗೇಟು ನೀಡಿದರು. 

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಟೈರ್ ಬ್ಲಾಸ್ಟ್, ಕಾರಿನ ಮೇಲೆ ಟ್ರಕ್‌ ಪಲ್ಟಿ – ತಪ್ಪಿದ ಭಾರೀ ಅನಾಹುತಈಗ ಚುನಾವಣೆ ಎದುರಿಸಲು ಟನ್‌ಗಟ್ಟಲೆ ಹಣ ಬೇಕು: ಸಿದ್ದರಾಮಯ್ಯಕ್ರಿಕೆಟ್ ಅಕಾಡೆಮಿಯಲ್ಲಿ ಪಿಚ್ ರೋಲರ್ ಹರಿದು 8 ವರ್ಷದ ಬಾಲಕ ದುರ್ಮರಣಬಂಡೆ ತಬ್ಬಿ ಬೆಂಗಳೂರಿಗರ ಪ್ರತಿಭಟನೆ – ಲಾಲ್‌ಬಾಗ್‌ ಉಳಿಸಲು ಬೃಹತ್‌ ಅಭಿಯಾನKPSC ಬಗ್ಗೆ ಸಾರ್ವಜನಿಕರಿಗೆ ಅಸಹ್ಯಕರ ಭಾವನೆ ಮೂಡಿದೆ: ಹೆಚ್‌ಡಿಕೆಪ್ರಮೋಷನ್ ನೀಡುವುದಾಗಿ 50 ಸಾವಿರ ರೂ. ಲಂಚ – ಸೆಲ್ಫಿ ವೀಡಿಯೋ ಮಾಡಿಟ್ಟು ಬ್ಯಾಂಕ್ ಸಿಬ್ಬಂದಿ ಆತ್ಮಹತ್ಯೆಜೈಲಿನೊಳಗೆ ಕೈದಿಗಳ ನಡುವೆ ಮಾರಾಮಾರಿ; ಜಗಳ ಬಿಡಿಸಲು ಹೋದ ಸಿಬ್ಬಂದಿ ಮೇಲೆಯೇ ಹಲ್ಲೆಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್‌ನನ್ನು ಕೆಪಿಎಸ್‌ಸಿಗೆ ನೇಮಕ ಮಾಡಿದ್ದು ಬಿಜೆಪಿ: ಬಿಕೆ ಹರಿಪ್ರಸಾದ್ಸರ್ವರ್ ಡೌನ್ – ಪಡಿತರ ಸಿಗದೆ ಬೆಳಗಾವಿ ಜಿಲ್ಲೆಯಾದ್ಯಂತ ಕಾರ್ಡುದಾರರ ಪರದಾಟಬೆಂಗಳೂರಲ್ಲಿ 7ನೇ ಮಹಡಿಯಿಂದ ಬಿದ್ದು ಟೆಕ್ಕಿ ಸಾವು, ಯುವಕನ ಸ್ಥಿತಿ ಗಂಭೀರ