LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕ್ರಿಕೆಟ್ ಅಕಾಡೆಮಿಯಲ್ಲಿ ಪಿಚ್ ರೋಲರ್ ಹರಿದು 8 ವರ್ಷದ ಬಾಲಕ ದುರ್ಮರಣ

Advertisement
Advertisement
Advertisement

ಚಂಡೀಗಢ: ಕ್ರಿಕೆಟ್ ಅಕಾಡೆಮಿಯಲ್ಲಿ  ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದ 8 ವರ್ಷದ ಬಾಲಕನ ಮೇಲೆ ಮಿನಿ ಪಿಚ್ ರೋಲರ್  ಹರಿದು ಮೃತಪಟ್ಟಿರುವ ದಾರುಣ ಘಟನೆ ಗುರುಗ್ರಾಮ್‌ನಲ್ಲಿ ನಡೆದಿದೆ.

ಮೃತ ಬಾಲಕನನ್ನು ಆಕಾಶ್ ಕುಮಾರ್ ಎಂದು ಗುರುತಿಸಲಾಗಿದೆ. ಮೂಲತಃ ಬಿಹಾರದ ನಳಂದಾ ನಿವಾಸಿಯಾಗಿದ್ದ ಆಕಾಶ್, ತನ್ನ ಸಹೋದರ ನೀಲ್ ಹಾಗೂ ಇತರ ಮಕ್ಕಳೊಂದಿಗೆ ಕ್ರಿಕೆಟ್ ಅಕಾಡೆಮಿ ಆವರಣದಲ್ಲಿ ಆಟವಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಅಕಾಡೆಮಿ ಆವರಣದಲ್ಲಿ ನಿಲ್ಲಿಸಲಾಗಿದ್ದ ಮಿನಿ ಪಿಚ್ ರೋಲರ್ ಏಕಾಏಕಿ ಚಲಿಸಲು ಆರಂಭಿಸಿದೆ. ಬಾಲಕನೊಬ್ಬನ ಕೈ ಯಂತ್ರದ ಸರ್ಕ್ಯೂಟ್ ಬ್ರೇಕರ್‌ಗೆ ತಾಗಿದ್ದರಿಂದ ರೋಲರ್ ಚಾಲನೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಇದೇ ವೇಳೆ ಆಕಾಶ್ ರೋಲರ್‌ನ ಮುಂಭಾಗಕ್ಕೆ ಬಿದ್ದಿದ್ದು, ಚಲಿಸುತ್ತಿದ್ದ ಯಂತ್ರ ಆತನ ಮೇಲೆ ಹರಿದಿದೆ. ಘಟನೆ ನಡೆದ ಕೂಡಲೇ ಸ್ಥಳದಲ್ಲಿದ್ದ ಇತರ ಮಕ್ಕಳು ಭಯಭೀತರಾಗಿ ಅಲ್ಲಿಂದ ಓಡಿ ಹೋಗಿದ್ದಾರೆ. ಘಟನೆಯ ಬಳಿಕ ಆಕಾಶ್‌ನ ಕುಟುಂಬಸ್ಥರು ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಬಾಲಕನನ್ನು ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. 

ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಘಟನೆ ಸಂಭವಿಸಿದ ವೇಳೆ ಪಿಚ್ ರೋಲರ್ ಅನ್ನು ಮೇಲ್ವಿಚಾರಣೆ ಮಾಡಲು ಸ್ಥಳದಲ್ಲಿ ಯಾರೂ ಇರಲಿಲ್ಲ ಎಂಬುದು ಬೆಳಕಿಗೆ ಬಂದಿದೆ. ತನಿಖಾಧಿಕಾರಿಯ ಪ್ರಕಾರ, ಘಟನೆಗೆ ಸಂಬAಧಿಸಿದAತೆ ಬಾಲಕನ ಕುಟುಂಬಸ್ಥರು ಯಾವುದೇ ನಿರ್ಲಕ್ಷ್ಯದ ಆರೋಪ ಮಾಡಿಲ್ಲ. ಕುಟುಂಬಸ್ಥರು ಪೊಲೀಸರಿಗೆ ಲಿಖಿತ ಹೇಳಿಕೆ ನೀಡಿದ್ದು, ಅದರ ಆಧಾರದ ಮೇಲೆ ಘಟನೆ ಕುರಿತು ತನಿಖೆ ಆರಂಭಿಸಲಾಗಿದೆ. 

ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಆಕಾಶ್‌ನ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಸದ್ಯ ಪೊಲೀಸರು ಬಾಲಕನ ಸಾವಿಗೆ ಕಾರಣವಾದ ನಿಖರ ಪರಿಸ್ಥಿತಿಗಳು ಹಾಗೂ ಪಿಚ್ ರೋಲರ್ ಹೇಗೆ ಚಾಲನೆಯಾಯಿತು ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಟೈರ್ ಬ್ಲಾಸ್ಟ್, ಕಾರಿನ ಮೇಲೆ ಟ್ರಕ್‌ ಪಲ್ಟಿ – ತಪ್ಪಿದ ಭಾರೀ ಅನಾಹುತಈಗ ಚುನಾವಣೆ ಎದುರಿಸಲು ಟನ್‌ಗಟ್ಟಲೆ ಹಣ ಬೇಕು: ಸಿದ್ದರಾಮಯ್ಯಕ್ರಿಕೆಟ್ ಅಕಾಡೆಮಿಯಲ್ಲಿ ಪಿಚ್ ರೋಲರ್ ಹರಿದು 8 ವರ್ಷದ ಬಾಲಕ ದುರ್ಮರಣಬಂಡೆ ತಬ್ಬಿ ಬೆಂಗಳೂರಿಗರ ಪ್ರತಿಭಟನೆ – ಲಾಲ್‌ಬಾಗ್‌ ಉಳಿಸಲು ಬೃಹತ್‌ ಅಭಿಯಾನKPSC ಬಗ್ಗೆ ಸಾರ್ವಜನಿಕರಿಗೆ ಅಸಹ್ಯಕರ ಭಾವನೆ ಮೂಡಿದೆ: ಹೆಚ್‌ಡಿಕೆಪ್ರಮೋಷನ್ ನೀಡುವುದಾಗಿ 50 ಸಾವಿರ ರೂ. ಲಂಚ – ಸೆಲ್ಫಿ ವೀಡಿಯೋ ಮಾಡಿಟ್ಟು ಬ್ಯಾಂಕ್ ಸಿಬ್ಬಂದಿ ಆತ್ಮಹತ್ಯೆಜೈಲಿನೊಳಗೆ ಕೈದಿಗಳ ನಡುವೆ ಮಾರಾಮಾರಿ; ಜಗಳ ಬಿಡಿಸಲು ಹೋದ ಸಿಬ್ಬಂದಿ ಮೇಲೆಯೇ ಹಲ್ಲೆಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್‌ನನ್ನು ಕೆಪಿಎಸ್‌ಸಿಗೆ ನೇಮಕ ಮಾಡಿದ್ದು ಬಿಜೆಪಿ: ಬಿಕೆ ಹರಿಪ್ರಸಾದ್ಸರ್ವರ್ ಡೌನ್ – ಪಡಿತರ ಸಿಗದೆ ಬೆಳಗಾವಿ ಜಿಲ್ಲೆಯಾದ್ಯಂತ ಕಾರ್ಡುದಾರರ ಪರದಾಟಬೆಂಗಳೂರಲ್ಲಿ 7ನೇ ಮಹಡಿಯಿಂದ ಬಿದ್ದು ಟೆಕ್ಕಿ ಸಾವು, ಯುವಕನ ಸ್ಥಿತಿ ಗಂಭೀರ