LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವೇತನ ಹೆಚ್ಚಳಕ್ಕೆ ಆಗ್ರಹಿಸಿ ಚಾಲಕರ ಸ್ಟ್ರೈಕ್‌ – ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಸಂಚಾರ ಸ್ಥಗಿತ?

Advertisement
Advertisement

ಬೆಂಗಳೂರು: ಕತ್ರಿಗುಪ್ಪೆಯ ಕಾಮಾಕ್ಯ ಎಲೆಕ್ಟ್ರಿಕಲ್ ಡಿಪೋ 13ರಲ್ಲಿ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಚಾಲಕರ ಪ್ರತಿಭಟನೆ ನಡೆಸಿದ್ದಾರೆ. ಇದರ ಪರಿಣಾಮ 100ಕ್ಕೂ ಹೆಚ್ಚು ಬಿಎಂಟಿಸಿ  ಇವಿ ಬಸ್‌ಗಳ ಕಾರ್ಯಚರಣೆ ಸ್ಥಗಿತಗೊಂಡಿತ್ತು. ಮಾತುಕತೆ ಬಳಿಕ ಬಸ್‌ ಸೇವೆ ಪುನರಾರಂಭಗೊಂಡಿದೆ.ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಚಾಲಕರು ವೇತನ ಹೆಚ್ಚಳಕ್ಕೆ ಆಗ್ರಹಿಸಿದ್ದಾರೆ. ಬೇರೆ ಡಿಪೋಗಳಲ್ಲಿ ಚಾಲಕರಿಗೆ ದಿನಕ್ಕೆ 950 ರೂ. ನೀಡಲಾಗುತ್ತಿದೆ. ಆದರೆ ನಮಗೆ 850 ರೂ. ನಿಗದಿ ಮಾಡಲಾಗಿದೆ. ಹೀಗಾಗಿ ನಮಗೂ 950 ರೂ. ನೀಡಿ ಎಂದು ಪಟ್ಟು ಹಿಡಿದ್ದಾರೆ. 

ಚಾಲಕರು ಕಾರ್ಯಾಚರಣೆ ನಿಲ್ಲಿಸಿದ್ದರಿಂದ ಬೆಳಗ್ಗೆಯಿಂದ ಇವಿ ಬಸ್‌ಗಳು ಡಿಪೋದಿಂದ ಹೊರಬಂದಿಲ್ಲ. ಪರಿಣಾಮ ಕಾಮಾಕ್ಯ ಡಿಪೋದಿಂದ ಬನಶಂಕರಿ, ಎಲೆಕ್ಟ್ರಾನಿಕ್ ಸಿಟಿ, ಏರ್‌ಪೋರ್ಟ್ ಮಾರ್ಗದಲ್ಲಿ ಸಂಚರಿಸ್ತಿದ್ದ ಬಸ್‌ಗಳು ಕಡಿಮೆಯಾಗಿ ಪ್ರಯಾಣಿಕರು ಪರದಾಡುತ್ತಿದ್ದಾರೆ.

ಮಾತುಕತೆ ಬಳಿ ಸೇವೆ ಪುನರಾರಂಭ:
ವಿದ್ಯುತ್ ಬಸ್‌ಗಳ ಚಾಲಕರು ಇಂದು ಯಾವುದೇ ಮುನ್ಸೂಚನೆ ನೀಡದೆ ತಾತ್ಕಾಲಿಕವಾಗಿ ಮುಷ್ಕರ ಕೈಗೊಂಡಿದ್ದರು. ವಿಷಯ ತಿಳಿದ ತಕ್ಷಣ ಮುಖ್ಯ ಸಂಚಾರ ವ್ಯವಸ್ಥಾಪಕರಾದ ಆಂಥೋನಿ ಜಾರ್ಜ್, ವೋಲ್ವೋ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಡಿಪೋಗೆ ಭೇಟಿ ನೀಡಿ, EV ಬಸ್‌ಗಳ ನಿರ್ವಾಹಕರೊಂದಿಗೆ ಮಾತುಕತೆ ನಡೆಸಿದರು.

ಮಾತುಕತೆಯ ಸಂದರ್ಭದಲ್ಲಿ, ಡಿಪೋ-13ರ ಎಲ್ಲಾ EV ಚಾಲಕರ ಜುಲೈ ತಿಂಗಳ ವೇತನವನ್ನು ಈಗಾಗಲೇ ಪಾವತಿಸಲಾಗಿದ್ದು, ವೇತನಕ್ಕೆ ಸಂಬಂಧಿಸಿದ ಎಲ್ಲಾ ಭತ್ಯೆಗಳು, ಪ್ರೋತ್ಸಾಹಧನ ಹಾಗೂ ಇತರ ಪಾವತಿಗಳನ್ನೂ ಇತ್ಯರ್ಥಪಡಿಸಲಾಗಿದೆ ಎಂದು ಕಂಪನಿಯ ವ್ಯವಸ್ಥಾಪಕರು ದೃಢಪಡಿಸಿದರು.

ಹೆಚ್ಚುವರಿ ಬೇಡಿಕೆಗಳಿಗೆ ಸಂಬಂಧಿಸಿದಂತೆ ಚಾಲಕರು ತಾತ್ಕಾಲಿಕ ಮುಷ್ಕರ ಕೈಗೊಂಡಿದ್ದರು. ಅಧಿಕಾರಿಗಳ ಮನವೊಲಿಕೆ ಹಾಗೂ ಮಾತುಕತೆಯ ನಂತರ ಚಾಲಕರು ಕರ್ತವ್ಯಕ್ಕೆ ಹಾಜರಾಗಿದ್ದು, ಮೊದಲ ಪಾಳಿಯ ಬಸ್‌ಗಳ ಕಾರ್ಯಾಚರಣೆ ಆರಂಭಗೊಂಡಿದ್ದು, ಸಾಮಾನ್ಯ ಪಾಳಿಯ ಬಸ್‌ಗಳ ಕಾರ್ಯಾಚರಣೆಯೂ ಪುನರಾರಂಭಗೊಂಡಿದೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವೇತನ ಹೆಚ್ಚಳಕ್ಕೆ ಆಗ್ರಹಿಸಿ ಚಾಲಕರ ಸ್ಟ್ರೈಕ್‌ – ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಸಂಚಾರ ಸ್ಥಗಿತ?ಪ್ರಜ್ವಲ್ ರೇವಣ್ಣ ಸೆಲ್‌ನಲ್ಲಿ ಮೊಬೈಲ್ ಪತ್ತೆ – ಜೈಲಾಧಿಕಾರಿ ಸಸ್ಪೆಂಡ್, SPಗೆ ಶೋಕಾಸ್ ನೋಟಿಸ್ಶಿವಗಂಗೆ ಟೆಕ್ಕಿ ಮಿಸ್ಸಿಂಗ್ ಕೇಸ್‌: ಪ್ಲ್ಯಾನ್ ಮಾಡಿಯೇ ಅದ್ವೈತ್ ನಾಪತ್ತೆ ?ತಮಿಳುನಾಡಿಗೆ ನೀರು ಬಿಟ್ರೆ ನಾನೇ ಹೋರಾಟ ಮಾಡ್ತೀನಿ: ಗಣಿಗ ರವಿಕುಮಾರ್ಜೈಲಲ್ಲಿ ಮೊಬೈಲ್ ಪತ್ತೆ | ಪ್ರಜ್ವಲ್ ರೇವಣ್ಣ ವಿರುದ್ಧ FIR – ಸಿಸಿಬಿ ಇನ್ಸ್‌ಪೆಕ್ಟರ್‌ ನೀಡಿದ ದೂರಿನಲ್ಲೇನಿದೆ?ಶಿವಂ ಅಸೋಸಿಯೇಟ್ಸ್, ಅಂಗ ಸಂಸ್ಥೆಗಳಿಂದ ಸುಮಾರು 2110 ಕೋಟಿ ವಂಚನೆ: ಇಡಿಡಿಕೆಶಿ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ – ಯಾರಿಗೆ ಯಾವ ಖಾತೆ?ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್. ಚಂದ್ರಶೇಖರನ್ ದಿಢೀರ್‌ ರಾಜೀನಾಮೆಯತೀಂದ್ರಗೆ ಆರೋಗ್ಯ ಇಲಾಖೆ? – ವಕ್ಫ್ ಖಾತೆಗೆ ಖಾದರ್‌ ಬೇಡಿಕೆವಾಟಾಳ್ ಕರೆ ನೀಡಿದ ‘ಕರ್ನಾಟಕ ಬಂದ್’ಗೆ ನಮ್ಮ ಬೆಂಬಲವಿಲ್ಲ: ಕರವೇ ಪ್ರವೀಣ್ ಶೆಟ್ಟಿ