LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗುಟ್ಕಾ ನಿಷೇಧ ವಿರೋಧಿಸಿ ದಾವಣಗೆರೆ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ – ಪ್ರತಿಭಟನಾಕಾರರು ಪೊಲೀಸ್ ವಶಕ್ಕೆ

Advertisement
Advertisement
Advertisement

ದಾವಣಗೆರೆ: ರಾಜ್ಯ ಸರ್ಕಾರ ಗುಟ್ಕಾ ನಿಷೇಧ ಆದೇಶ ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿ ಅಡಿಕೆ ಬೆಳೆಗಾರರು ಹಾಗೂ ಬಿಜೆಪಿ ಮುಖಂಡರು ದಾವಣಗೆರೆ ಎಸಿ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪಾದಯಾತ್ರೆಯ ನೇತೃತ್ವ ವಹಿಸಿದ್ದ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ, ಪರಿಷತ್ ಸದಸ್ಯ ಮಾಡಾಳ್ ಮಲ್ಲಿಕಾರ್ಜುನ್  ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆ.26 ರಿಂದ ಅಯಾ ಕ್ಷೇತ್ರಗಳಿಂದ ಪಾದಯಾತ್ರೆ ನಡೆಸಿದ ಬಿಜೆಪಿ ನಾಯಕರು, ಇಂದು ದಾವಣಗೆರೆಗೆ ಆಗಮಿಸಿ ಪ್ರತಿಭಟನೆ ನಡೆಸಿದ್ದಾರೆ. ಎಸಿ ಕಚೇರಿಗೆ ಮುತ್ತಿಗೆ ಹಾಕಿ, ರಸ್ತೆ ತಡೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸಿಗರೇಟ್ ಹಾಗೂ ಮದ್ಯಪಾನ ಲಾಭಿಗೆ ಮಣಿದು ಗುಟ್ಕಾ ನಿಷೇಧ ಮಾಡಲು ಸರ್ಕಾರ ಹೊರಟಿದೆ. ಇದರಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ. 

ಎಸಿ ಕಚೇರಿ ಮುತ್ತಿಗೆ ವೇಳೆ, ಪೊಲೀಸರ ಹಾಗೂ ಹೋರಾಟಗಾರರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಬ್ಯಾರಿಕೇಡ್‌ಗಳನ್ನು ಕೆಡವಿ ಅಡಿಕೆ ಬೆಳೆಗಾರರು ಹಾಗೂ ಬಿಜೆಪಿ ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದಾರೆ. ಇದರಿಂದ ಪೊಲೀಸರು ಬಿಜೆಪಿ ಮುಖಂಡರು ಹಾಗೂ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.

ವಶಕ್ಕೆ ಪಡೆದ ಪ್ರತಿಭಟನಾಕಾರರನ್ನು ಬಿಡುವಂತೆ ಪೊಲೀಸ್ ವಾಹನದ ಮುಂದೆ ಕೂತು ರೈತರು ಪ್ರತಿಭಟನೆ ಮಾಡಿದ್ದಾರೆ. ವಶಕ್ಕೆ ಪಡೆದ ನಾಯಕರನ್ನು ಹಾಗೂ ರೈತರನ್ನು ಕೆಳಗೆ ಇಳಿಸುವಂತೆ ಪಟ್ಟು ಹಿಡಿದಿದ್ದಾರೆ. ಇದೇ ವೇಳೆ ಪ್ರತಿಭಟನಾಕಾರರು ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.

ಸೋಮವಾರ (ಆ.31) ದಾವಣಗೆರೆ ಬಂದ್‌ಗೆ ಅಡಿಕೆ ಬೆಳೆಗಾರರು ಹಾಗೂ ಬಿಜೆಪಿ ನಾಯಕರು ಕರೆ ನೀಡಿದ್ದಾರೆ. ಈ ಬಗ್ಗೆ ಎಸಿ ಕಚೇರಿ ಬಳಿ ನಡೆಯುತ್ತಿರುವ ಪ್ರತಿಭಟನಾ ಸಭೆಯಲ್ಲಿ ನಿರ್ಣಯಕೈಗೊಳ್ಳಲಾಗಿದೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪತ್ನಿ ಕೊಂದು ತಾನೂ ನೇಣಿಗೆ ಶರಣಾದ ಪತಿ‌ಪಾಕ್‌ನ ಐಎಸ್‌ಐಗೆ ಸೂಕ್ಷ್ಮ ಮಾಹಿತಿ, ಸಿಮ್‌ಗಳನ್ನು ರವಾನಿಸುತ್ತಿದ್ದ ದಂಪತಿ ಅರೆಸ್ಟ್‌ಯುವತಿಯರ ಒಳಉಡುಪು, ಸ್ಯಾನಿಟರಿ ಪ್ಯಾಡ್‌ ಕಳ್ಳತನ; ವಿಚಿತ್ರವಾಗಿ ಜೋಡಿಸಿ ಲೈಂಗಿಕತೃಪ್ತಿ ಪಡ್ತಿದ್ದ ಕಾಮುಕರಾತ್ರಿ ಹೊತ್ತು ಗ್ರಾಮಕ್ಕೆ ನುಗ್ಗಿ ಕುರಿ, ನಾಯಿ ಹೊತ್ತೊಯ್ಯುತ್ತಿದ್ದ ಚಿರತೆ ಸೆರೆ; ನಿಟ್ಟುಸಿರು ಬಿಟ್ಟ ಜನಹನೂರು ಎನ್‌ಕೌಂಟರ್ ಪ್ರಕರಣ – ಸರ್ಕಾರಕ್ಕೆ ಮ್ಯಾಜಿಸ್ಟ್ರೇಟ್ ತನಿಖಾ ವರದಿ ಸಲ್ಲಿಕೆನಾಗೇಂದ್ರ ರಾಜೀನಾಮೆ; ವ್ಯಕ್ತಿಯಲ್ಲ ವ್ಯವಸ್ಥೆ ವಿರುದ್ಧ ನಮ್ಮ ಹೋರಾಟ: ಸಿ‌.ಸಿ ಪಾಟೀಲಫುಡ್‌ ಪ್ರೊಸೆಸಿಂಗ್‌ ಘಟಕಗಳ ಮೇಲೆ ಅಧಿಕಾರಿಗಳ ದಾಳಿ; 1,033 ಕೆಜಿ ಆಹಾರ ಪದಾರ್ಥ ಸೀಜ್ಜಮೀನಿಗಾಗಿ 20 ವರ್ಷಗಳಿಂದ ಅಲೆದಾಟ – ಕಾರ್ಗಿಲ್‌ ಯುದ್ಧದಲ್ಲಿ ಹೋರಾಡಿದ್ದ ಯೋಧನಿಂದ ಆತ್ಮಹತ್ಯೆಗೆ ಯತ್ನ101 ತಾಲೂಕುಗಳಲ್ಲಿ ಬರ; ವಿಬಿಜಿ ರಾಮ್ ಜಿ ಯೋಜನೆಯಲ್ಲಿ 15 ದಿನದೊಳಗೆ ಕೂಲಿ ಪಾವತಿಗೆ ಈಶ್ವರ ಖಂಡ್ರೆ ಸೂಚನೆಸಾಕು ನಾಯಿಯನ್ನು ಕಚ್ಚಿದ ಬೀದಿನಾಯಿಗೆ ಗುಂಡಿಕ್ಕಿ ಹತ್ಯೆ – ಆರೋಪಿ ಅರೆಸ್ಟ್‌