ಸಂಸತ್ತಿನಲ್ಲಿ ನಿಂತು ಮಾತಾಡುವ ಧೈರ್ಯ ಬಿಜೆಪಿ ಸಂಸದರಿಗಿಲ್ಲ - ಚನ್ನರಾಜ ಹಟ್ಟಿಹೊಳಿ

Mar 26, 2024 - 16:46
 18
Google  News Join WhatsApp Join Telegram Live

ಸಂಸತ್ತಿನಲ್ಲಿ ನಿಂತು ಮಾತಾಡುವ ಧೈರ್ಯ ಬಿಜೆಪಿ ಸಂಸದರಿಗಿಲ್ಲ - ಚನ್ನರಾಜ ಹಟ್ಟಿಹೊಳಿ

Panchayat Swaraj Samachar News Desk.

ಬೆಳಗಾವಿ: ಅತ್ಯಂತ ಮಹತ್ವದ ಲೋಕಸಭೆ ಚುನಾವಣೆ ಬಂದಿದೆ. ದೇಶ, ರಾಜ್ಯ ಸಂಕಷ್ಟದಲ್ಲಿದೆ. ಸಂವಿಧಾನ, ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಇಲ್ಲಿ ನಾವೆಲ್ಲಾ ಪ್ರಜ್ಞಾವಂತರು ಸೇರಿದ್ದೇವೆ. ಬೆಳಗಾವಿ ಉತ್ತರ ಪ್ರಜ್ಞಾವಂತ ಮತದಾರರನ್ನು ಹೊಂದಿರುವ ಕ್ಷೇತ್ರ. ಐದು ವರ್ಷ ಯಾವ ಪಕ್ಷ ದೇಶದ ಚುಕ್ಕಾಣಿ ಹಿಡಿಬೇಕು ಎಂಬುದನ್ನು ನಿರ್ಧರಿಸಲು ಈಗ ಅವಕಾಶ ಬಂದಿದೆ ಎಂದು ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು

ನಗರದ ಗಾಂಧಿ ಭವನದಲ್ಲಿ ಇಂದು ನಡೆದ ಬೆಳಗಾವಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿ ಉತ್ತರ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನಾವು ಲೋಕಸಭೆ ಚುನಾವಣೆಯಲ್ಲಿ ಯೋಚಿಸಿ ಮತ ಹಾಕಬೇಕಿದೆ. ಸಂವಿಧಾನ, ಪ್ರಜಾಪ್ರಭುತ್ವದ ರಕ್ಷಣೆ ಮಾಡೋಣ, ಸರ್ವಾಧಿಕಾರವನ್ನು ತೊಡೆದು ಹಾಕಿ. ಬೆಳಗಾವಿ ಮತ್ತು ಚಿಕ್ಕೋಡಿ ಎರಡೂ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸೋಣ ಎಂದರು‌.

ಬೆಲೆ ಏರಿಕೆ ನೀತಿ, ನಿರುದ್ಯೋಗ ಸಮಸ್ಯೆ ಬಗ್ಗೆ ಯಾರೂ ಮಾತಾಡುತ್ತಿಲ್ಲ. ಇಡಿ, ಐಟಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ದೇಶವನ್ನು ತಪ್ಪು ದಾರಿಗೆ ಇವ್ರು ತೆಗೆದುಕೊಂಡು ಹೋಗುತ್ತಿದ್ದಾರೆ. ಮೋದಿಯನ್ನು ನೋಡಿ ವೋಟ್ ಹಾಕುವಂತೆ ಕೇಳಿಕೊಳ್ಳುವ ಇವರಿಗೆ ಸಂಸತ್ತಿನಲ್ಲಿ ನಿಂತು ಮಾತಾಡುವ ಧೈರ್ಯ ಇಲ್ಲ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿರುವ ತೆರಿಗೆ ಹಣದ ಬಗ್ಗೆ ಪ್ರಶ್ನೆ ಮಾಡುವ ಶಕ್ತಿ ರಾಜ್ಯದ ಸಂಸದರಿಗಿಲ್ಲ. ತಮ್ಮದೇ ಪಕ್ಷದ ಪ್ರಧಾನಮಂತ್ರಿ ಮುಂದೆ ಮಾತಾಡುವ ತಾಕತ್ತು ಬಿಜೆಪಿ ಸಂಸದರಿಗಿಲ್ಲ ಎಂದು ಚನ್ನರಾಜ ಹಟ್ಟಿಹೊಳಿ ಹರಿಹಾಯ್ದರು.

ಕೇಂದ್ರ, ರಾಜ್ಯ ನಾಯಕರು ಒಮ್ಮತದಿಂದ ಯುವಕ ಮೃಣಾಲ್ ಗೆ ಟಿಕೆಟ್ ನೀಡಿದ್ದಾರೆ. ಮೃಣಾಲ್ ಜೊತೆ ನಾವೆಲ್ಲಾ ನಿಂತು ಆಶೀರ್ವಾದ ಮಾಡಿದರೆ ಮುಂದೆ ಜಿಲ್ಲೆಯ ಆಸ್ತಿಯಾಗಲಿದ್ದಾರೆ ಎಂದು ಚನ್ಬರಾಜ ಹಟ್ಟಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ಬೆಳಗಾವಿ ಉತ್ತರ ಶಾಸಕ ಆಸೀಫ್(ರಾಜು) ಸೇಠ್, ಮಾಜಿ ಸಚಿವರಾದ ಎ.ಬಿ.ಪಾಟೀಲ, ಶಶಿಕಾಂತ ನಾಯಿಕ, ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಚಿಕ್ಕೋಡಿ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಬಾರ್ ಅಸೊಸಿಯೇಷನ್ ಅಧ್ಯಕ್ಷ ಎಸ್.ಎಸ್.ಕಿವಡಸಣ್ಣವರ, ಆರ್.ಪಿ.ಪಾಟೀಲ, ಯುವರಾಜ ಕದಂ, ಕಿರಣ ಸಾಧುನವರ್, ಸುನಿಲ್ ಹನಮಣ್ಣವರ್, ಮುಜಮಿಲ್ ದೋನಿ, ಸಿ.ಬಿ.ಪಾಟೀಲ್, ಬೈರೆಗೌಡ ಕಣಬರ್ಗಿ, ಸುಧೀರ್ ಗಡ್ಡೆ, ಮಲ್ಲೇಶ್ ಚೌಗುಲೆ, ರಾಜದೀಪ್ ಕೌಜಲಗಿ, ಸೇವಾದಳ ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.

Google News Join Facebook Live 24/7 Help Desk

Tags: