ಚಿಕ್ಕೋಡಿ ತಾಲೂಕಿನ ಕಲ್ಲೋಳಿ ಗ್ರಾಮದ ಸಮೀಪ ರಾಧಾಕೃಷ್ಣ ನೀರು ಸರಬರಾಜು ಯೋಜನೆಯನ್ನು ಸ್ಥಾಪಿಸಲು ಮಹಾರಾಷ್ಟ್ರ ಸರ್ಕಾರವು ಸದ್ದಿಲ್ಲದೆ ತೀವ್ರ ಸಿದ್ಧತೆ ನಡೆಸುತ್ತಿದೆ ನಮ್ಮ ಗಡಿ ಭಾಗದ ಕೃಷಿ ಅಂತರ್ಜಲ ಕುಡಿಯುವ ನೀರು ಮತ್ತು ಪರಿಸರ ಮೇಲೆ ಅತ್ಯಂತ ಮಾರಕ ಹಾಗೂ ಗಂಭೀರ ಪರಿಣಾಮ ಬೀರುವುದು
ಈ ಯೋಜನೆಯು ಕರ್ನಾಟಕ ಸಾರ್ವಜನಿಕರ ತೆರಿಗೆ ಹಣಕ್ಕೆ ಹಾಗೂ ಕೃಷಿಕರ ಬದುಕಿಗೆ ದೊಡ್ಡ ಪ್ರಮಾಣದ ಹೊಡೆತ ಬೀಳಲಿದೆ ಚಿಕ್ಕೋಡಿ ನಿಪ್ಪಾಣಿ ತಾಲೂಕುಗಳ ರೈತರು ದಶಕಗಳ ಕಾಲದ ನೀರಾವರಿ ಕನಸನ್ನು ನನಸು ಮಾಡಲು ಕರ್ನಾಟಕ ಸರ್ಕಾರ ಈಗಾಗಲೇ ಪ್ರಮಾಣದ ಬೃಹತ್ ಯೋಜನೆ ಯಾದ ಮಹಾಲಕ್ಷ್ಮಿ ಏತ ನೀರಾವರಿ ಯೋಜನೆ ಜಾರಿಗೊಳಿಸಿದ್ದು ಇದರ ಕಾಮಗಾರಿಯು ಅಂತಿಮ. ಹಂತದಲ್ಲಿದ್ದು ಇಂತಹ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರ ಸರ್ಕಾರವು ಇದೇ ಜಲ ಮೂಲದಿಂದ ನೀರನ್ನು ಎತ್ತಲು ಆರಂಭಿಸಿದ್ದಾರೆ ನಮ್ಮ ಯೋಜನೆ ಸಂಪೂರ್ಣ ನಿರುಪಾಲಾಗುತ್ತದೆ ಮತ್ತು ನಮ್ಮ ಭಾಗದ ರೈತ ಬಾಂಧವರಿಗೆ ಘೋರ ಪ್ರಮಾಣದ ಅನ್ಯಾಯವಾಗುತ್ತದೆ. ಈಗಾಗಲೇ ಕೃಷ್ಣಾ ದೂದಂಗ ಮತ್ತು ವೇದಗಂಗಾ ನದಿ ಪಾತ್ರದ ಹಳ್ಳಿಗಳು ಬೇಸಿಗೆಯಲ್ಲಿ ಭೀಕರ ಜಲಕ್ಷ್ಮವನ್ನು ಎದುರಿಸುತ್ತಿದ್ದು. ಕರ್ನಾಟಕ ಸರ್ಕಾರವು ತಕ್ಷಣವೇ ಕಾನೂನಾತ್ಮಕವಾಗಿ ಮಧ್ಯಪ್ರವೇಶಿಸಿ ಮಹಾರಾಷ್ಟ್ರದ ಹಿತ್ತಲಕರಂಜಿ ನಗರ ರಾಧಾಕೃಷ್ಣ ನೀರು ಸರಬರಾಜು ಈ ಯೋಜನೆಯನ್ನು ತಡೆಯೊಡಬೇಕಾಗಿ ಪ್ರತಿಭಟಿಸಲಾಯಿತು
ಈ ಸಂದರ್ಭದಲ್ಲಿ
1) ಪರಮಪೂಜ್ಯ ಶ್ರೀ ಸಂಪಾದನ ಮಹಾಸ್ವಾಮಿಗಳು ಚಿರಮೂರ್ತಿ ಮಠ ಚಿಕ್ಕೋಡಿ
2) ಪ್ರೊಫೆಸರ್ ಎಸ್ ವೈ ಅಂಜಿ
3) ಮಾದೇವ ತಳವಾರ್ ರಾಜ್ಯಾಧ್ಯಕ್ಷರು ಕಿತ್ತೂರು ಕರ್ನಾಟಕ ಸೇನೆ
4) ಮಹೇಶ್ ಹೀಗೆಹಳ್ಳಿ ಯುವ ಘಟಕದ ರಾಜ್ಯಾಧ್ಯಕ್ಷರು
5) ನಾಗೇಶ್ ಮಾಳಿ
6) ರೇಣುಕಾ ಕಾಡುಪುರೇ
7) ಸುರೇಶ್ ಬ್ಯಾಕುಡೆ
ಈ ಸಂದರ್ಭದಲ್ಲಿ ರೈತ ಮುಖಂಡರು ಗ್ರಾಮಸ್ಥರು ಕಿತ್ತೂರು ಕರ್ನಾಟಕ ಸೇನೆಯ ಕಾರ್ಯಕರ್ತರು ಭಾಗಿಯಾಗಿದ್ದರು




