ಯುವಶಕ್ತಿಯ ಉಜ್ವಲ ಭವಿಷ್ಯಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಪ್ರಿಯಾಂಕಾ ಜಾರಕಿಹೊಳಿ

Apr 9, 2024 - 12:42
Apr 9, 2024 - 12:43
 71
Google  News Join WhatsApp Join Telegram View ePaper

ಯುವಶಕ್ತಿಯ ಉಜ್ವಲ ಭವಿಷ್ಯಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಪ್ರಿಯಾಂಕಾ ಜಾರಕಿಹೊಳಿ

Panchayat Swaraj Samachar News Desk.

ಬೆಳಗಾವಿ: ತಾಲೂಕಿನ ಗ್ರಾಮಗಳಾದ ಕುರಿಹಾಳ,ಬೋಡಕೇನಹಟ್ಟಿ, ಅಲತಗಾ,ಗೌಂಡವಾಡ,ಗ್ರಾಮಗಳಲ್ಲಿ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಅಧಿಕೃತ ಅಭ್ಯರ್ಥಿಯಾದ ಪ್ರಿಯಾಂಕಾ ಜಾರಕಿಹೊಳಿ ಭರ್ಜರಿ ಪ್ರಚಾರ ಮಾಡಿದರು.

ಮತದಾರರಿಗೆ 60 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಕಾಂಗ್ರೆಸ ದೇಶಕ್ಕಾಗಿ ಏನು ನೀಡಿದೆ ಎಂಬುದನ್ನು ಪ್ರಿಯಾಂಕ ಜಾರಕಿಹೊಳಿ ಮತದಾರರಿಗೆ ತಿಳಿಸಿದರು‌. ಚಿಕ್ಕೋಡಿ ಲೋಕಸಭಾ ಕ್ಷೇತ್ರ ಇಲ್ಲಿನ ಯುವಕರಿಗೆ ಯುವತಿರಿಗೆ ಹೆಚ್ಚಿನ ಉದ್ಯೋಗವಕಾಶಗಳು ಮತ್ತು ಶಿಕ್ಷಣದ ಕ್ಷೇತ್ರದಲ್ಲಿ ಅತಿ ಹೆಚ್ಚು ಕಾರ್ಯ ನಿರ್ವಹಿಸಲಿದ್ದೇವೆ ಅಭಿವೃದ್ಧಿವೆ ನಮ್ಮ ಮೂಲ ಮಂತ್ರವಾಗಲಿದೆ ಎಂದರು.

ಇದೇ ಸಂದರ್ಭದಲ್ಲಿ ಗ್ರಾಮದ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಛತ್ರಪತಿ ಶಿವಾಜಿ ಮಹಾರಾಜ ಹಾಗೂ ಛತ್ರಪತಿ ಸಂಭಾಜಿ ಮಹಾರಾಜರ ಪೂಜೆ ಸಲ್ಲಿಸಿ ಅಭಿವಾದನ ಮಾಡಿದರು.

ಕಾಂಗ್ರೆಸ್ ಮುಖಂಡ ಹಾಗೂ ಬಹುಜನ ಸಮಾಜದ ನಾಯಕರಾದ ಮಲ್ಲೇಶ್ ಚೌಗಲೆ ಮಾತನಾಡಿ ಚಿಕ್ಕೋಡಿಯ ಲೋಕಸಭಾ ಕ್ಷೇತ್ರಕ್ಕೆ ಒಬ್ಬ ಯುವ ಹಾಗೂ ವಿದ್ಯಾವಂತ ಹಾಗೂ ಸಾಮಾಜಿಕ ಶಿಕ್ಷಣ ರಾಜಕೀಯ ಕ್ಷೇತ್ರಗಳಲ್ಲಿ ತಮ್ಮ ಸಣ್ಣ ವಯಸ್ಸಿನಲ್ಲಿಯೇ ಅತಿ ಹೆಚ್ಚು ಸಾಧನೆ ಮಾಡಿದ ಪ್ರಿಯಾಂಕ ಜಾರಕಿಹೊಳಿ ಅವರಿಗೆ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಲೋಕಸಭಾ ಸದಸ್ಯರನ್ನಾಗಿ ಆಯ್ಕೆ ಮಾಡಿ ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಒಬ್ಬ ಹೊಸ ಪ್ರತಿಭಾವಂತ ಸಂಸದರು ಅತಿ ಹೆಚ್ಚು ಮತಗಳಿಂದ ಚುನಾಯಿಸಿ ಈ ಕ್ಷೇತ್ರದ ಅಭಿವೃದ್ಧಿಗೆ ಮುನ್ನಡೆ ಬರೆಯಬೇಕಾಗಿದೆ ಎಂದರು.

ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಅರುಣ್ ಕಟಾಬಳಿ ಅವರು ಮಾತನಾಡಿ ಕೇಂದ್ರ ಸರ್ಕಾರದ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನೆ ಮಾಡುತ್ತದೆ ಕಾಂಗ್ರೆಸ್ ಈ ದೇಶವನ್ನು ಹೊಸದಾಗಿ ಕಟ್ಟಿದೆ ಈಗಿರುವ ಡ್ಯಾಂ, ಶಾಲೆ, ಆಸ್ಪತ್ರೆಗಳು , ಕಾರ್ಖಾನೆಗಳು, ಅನೇಕರಂಗಗಳಲ್ಲಿ ಕಾಂಗ್ರೆಸ್ ಸಾಧನೆ ಮರೆದಿದೆ ಅದಕ್ಕಾಗಿ ಇಂದು ಈಶ್ವ ಗುರು ಸ್ಥಾನಕ್ಕೆ ಬಂದು ನಿಂತಿದೆ. 

ಕಾಂಗ್ರೆಸ್ ಮುಖಂಡರಾದ ಭಾವು ಗಡಕರಿ ಮಾತನಾಡಿ ಯಮಕನ ಮರಡಿ ಕ್ಷೇತ್ರ ಹಾಗೂ ಗ್ರಾಮೀಣ ಕ್ಷೇತ್ರಗಳಲ್ಲಿ ಕಾಂಗ್ರೆಸ್ಸಿನ ಶಾಸಕರು ಮತ್ತು ಮಂತ್ರಿಗಳು ಈ ಎರಡು ಕ್ಷೇತ್ರಗಳನ್ನು ಒಂದು ಮಾದರಿ ಕ್ಷೇತ್ರನಾಗಿ ಮಾಡಿದ್ದಾರೆ ಎಂಬುದು ನಮ ಎಲ್ಲರಿಗೂ ತಿಳಿದಿರುವ ವಿಷಯ.

 ಆಡಳಿತ ಪಕ್ಷದಲ್ಲಿ ಇದ್ದಾಗ ಇಲ್ಲದಿದ್ದಾಗ ಸರ್ಕಾರದಿಂದ ಅನುದಾನ ತರುವುದರಲ್ಲಿ ಎಂದು ಹಿಂದೆ ಸರಯಲ್ಲಿಲಾ ಆದ ಕಾರಣಕ್ಕಾಗಿ ಇವೆರಡು ಕ್ಷೇತ್ರಗಳು ಅತಿ ಹೆಚ್ಚು ಅಭಿವೃದ್ಧಿ ಪಥದಲ್ಲಿ ಸಾಗುತ್ತಿವೆ ಎಂದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಅರುಣ್ ಕಟಬಳಿ, ಕಾಂಗ್ರೆಸ್ ಮುಖಂಡ ಹಾಗೂ ಬಹುಜನ ಸಮಾಜದ ನಾಯಕರಾದ ಮಲ್ಲೇಶ್ ಚೌಗಲೆ , ಕಾಂಗ್ರೆಸ್ ಮುಖಂಡರಾದ ಬಾವು ಗಡಕರಿ, ಗ್ರಾಮ ಪಂಚಾಯತ್ ಸದಸ್ಯರಾದ ಚೇತನ್ ಕಾಂಬಳೆ,

ಕಾಕತಿ ಗ್ರಾಮ ಪಂಚಾಯತ್ ಸದಸ್ಯರಾದ ಜ್ಯೋತಿ ಗವಿ, ಅಲತಗಾ ಗ್ರಾಮ ದೇವಸ್ಥಾನದ ಕಮಿಟಿ ಸದಸ್ಯರುಗಳು ಗಡು, ಸುಭರಾವ ಗೋರೆ,ಪಾಂಡು, ಹಾಗೂ ಅಪರ ಸಂಖ್ಯೆಯಲ್ಲಿ ಗ್ರಾಮದ ಹಿರಿಯರು ಹಾಗೂ ಸ್ವಸಹಾಯ ಸಂಘದ ಪದಾಧಿಕಾರಿಗಳು ಪಕ್ಷದ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Google News Join Facebook Live 24/7 Help Desk

Tags: