ಬೆಳಗಾವಿ ಕ್ಷೇತ್ರಕ್ಕೆ ನಿವೃತ್ತ ಪೋಸ್ಟ್ ಮಾಸ್ಟರ್ ಬಿಎಸ್ಪಿ ಅಭ್ಯರ್ಥಿ

Apr 11, 2024 - 11:35
 38
Google  News Join WhatsApp Join Telegram Live

ಬೆಳಗಾವಿ ಕ್ಷೇತ್ರಕ್ಕೆ ನಿವೃತ್ತ ಪೋಸ್ಟ್ ಮಾಸ್ಟರ್ ಬಿಎಸ್ಪಿ ಅಭ್ಯರ್ಥಿ

Panchayat Swaraj Samachar News Desk.

ಬೆಳಗಾವಿ: 17ನೇ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಲೋಕಸಭಾ ಮತಕ್ಷೇತ್ರಕ್ಕೆ ಅಂಚೆ ಇಲಾಖೆಯ ಪೋಸ್ಟ್ ಮಾಸ್ಟರ್ ಹುದ್ದೆಯಿಂದ ಸ್ವಯಂ ನಿವೃತ್ತಿ ಘೋಷಣೆ ಮಾಡಿದ ಅಶೋಕ್ ಅಪ್ಪುಗೋಳ ಅವರನ್ನು ಬೆಳಗಾವಿ ಲೋಕಸಭಾ ಮತಕ್ಷೇತ್ರದಿಂದ ಬಿಎಸ್ಪಿ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿಸಲಿದೆ.

ಇಂದು ಬೆಳಗಾವಿಯಲ್ಲಿ ಬಿಎಸ್ಪಿ ಮುಖಂಡ ಗೋಪಿನಾಥ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಅಶೋಕ್ ಅಪ್ಪುಗೋಳ ಭಾರತೀಯ ಅಂಚೆ ಇಲಾಖೆ ಯಲ್ಲಿ 36 ವರ್ಷಗಳ ಸೇವೆ ಸಲ್ಲಿಸಿದ ಇವರು ಬಿ ಎಸ್ ಪಿ ಸಂಸ್ಥಾಪಕ ದಿವಂಗತ ಕಾನ್ಷೀರಾಮ ಅವರ 91ನೇ ಜಯಂತಿಯ ದಿನವಾದ ಮಾರ್ಚ್ 15/ 2024 ರಂದು ಪೋಸ್ಟ್ ಮಾಸ್ಟರ್ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದು ಬಿಎಸ್ಪಿ ಪಕ್ಷವನ್ನು ಸೆರೋದರ ಮುಖಾಂತರ ಹಿಂದುಳಿದ ದಲಿತ ಹಾಗೂ ಒಬಿಸಿ ಸಮುದಾಯಗಳ ಅಭಿವೃದ್ಧಿಗಾಗಿ ಶ್ರಮಿಸಲು ಪಣ ತೊಟ್ಟಿದ್ದಾರೆ.

ಅಶೋಕ್ ಅಪ್ಪುಗೊಳ್ ಅವರ ಅವರ ಮನೆತನದ ಸದಸ್ಯರು ಕೂಡ ದಲಿತ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಲ್ಲದೆ ಇವರ ದೊಡ್ಡಪ್ಪರಾದ ದಿವಂಗತ ವೈಐ.ಎಲ್ ಅಪ್ಪುಗೋಳ ಬೆಳಗಾವಿ ಜಿಲ್ಲಾ ದಲಿತ ಸಂಘರ್ಷ ಸಮಿತಿ ಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ. ದಲಿತ ಹೋರಾಟಗಳಲ್ಲಿ ಸಕ್ರಿಯವಾಗಿ ಇರುವುದರಿಂದ ಇವರಿಗೆ ಬಹುಜನ ಸಮಾಜ ಪಾರ್ಟಿ, ಬೆಳಗಾವಿ ಲೋಕಸಭಾ ಮತಕ್ಷೇತ್ರದ ಅಭ್ಯರ್ಥಿಯಾಗಿ ಮಾಡಿರುವುದು ಪಕ್ಷಕ್ಕೆ ಬಲಬಂದಂತಾಗಿದೆ ಎಂದು ಕೋಪಿನಾಥ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.

ಈ ಸಂದರ್ಭದಲ್ಲಿ ಬಿಎಸ್ಪಿ ಮುಖಂಡ ಗೋಪಿನಾಥ್, ಬಿಎಸ್ಪಿ ಜಿಲ್ಲಾಧ್ಯಕ್ಷರಾದ ಯಮುನಪ್ಪ ಗಂಗಪ್ಪ ತಳವಾರ, ಬೆಳಗಾವಿ ಲೋಕಸಭಾ ಮತಕ್ಷೇತ್ರದ ಬಿಎಸ್ಪಿ ಅಭ್ಯರ್ಥಿಯಾದ ಅಶೋಕ್ ಅಪ್ಪುಗೋಳ, ಉಪಸ್ಥಿತರಿದ್ದರು.

Google News Join Facebook Live 24/7 Help Desk

Tags: