ಬಿಜೆಪಿಯ 50-60 ಪರ್ಸೆಂಟ್ ಜನರು ನನ್ನ ಜೊತೆ ನಿಂತಿದ್ದಾರೆ: ಈಶ್ವರಪ್ಪ

May 7, 2024 - 11:21
 15
Google  News Join WhatsApp Join Telegram View ePaper

ಬಿಜೆಪಿಯ 50-60 ಪರ್ಸೆಂಟ್ ಜನರು ನನ್ನ ಜೊತೆ ನಿಂತಿದ್ದಾರೆ: ಈಶ್ವರಪ್ಪ

Panchayat Swaraj Samachar News Desk.

ಶಿವಮೊಗ್ಗ: ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಜನ ಬೆಂಬಲ ಸಿಕ್ಕಿದೆ. ಬಿಜೆಪಿಯ 50-60 ಪರ್ಸೆಂಟ್ ಜನರು ನನ್ನ ಜೊತೆ ನಿಂತಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂರಕ್ಕೆ ನೂರು ಗೆಲ್ತೀನಿ ಎನ್ನುವ ವಿಶ್ವಾಸ ನನಗಿದೆ. ನಾನು ಕಣದಿಂದ ಹಿಂದೆ ಸರಿಯುವ ಮಾತೇ ಇಲ್ಲ, ಗೆದ್ದೇ ಗೆಲ್ತೀನಿ. ನನ್ನ ಸಂಖ್ಯೆ 8, ಕಬ್ಬನ್ನ ಹಿಡಿದಿರೋ ರೈತ ನನ್ನ ಗುರುತು, ನನ್ನನ್ನ ಗೆಲ್ಲಿಸಿ. ಮೋದಿಯನ್ನ ಪ್ರಧಾನಿ ಮಾಡಲು ನನಗೆ ಮತ ನೀಡಿ, ನನ್ನನ್ನ ಗೆಲ್ಲಿಸಿ ಎಂದು ಜನರಲ್ಲಿ ಮನವಿ ಮಾಡಿದರು. 

ಶಿವಮೊಗ್ಗ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿರುವ ಈಶ್ವರಪ್ಪ, ಕುಟುಂಬ ಸಮೇತರಾಗಿ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು. ಪುತ್ರ, ಸೊಸೆ, ಪತ್ನಿ ಜೊತೆ ಬಂದು ಮತದಾನ ಮಾಡಿದರು. ನಗರದ ಸೈನ್ಸ್ ಕಾಲೇಜು ಆವರಣದ ಮತಗಟ್ಟೆಯಲ್ಲಿ ಮತದಾನ ಮಾಡಿದ ಈಶ್ವರಪ್ಪಗೆ ಬೆಂಬಲಿಗರು ಕೂಡ ಸಾಥ್ ನೀಡಿದರು.

Google News Join Facebook Live 24/7 Help Desk

Tags: