ಜರ್ಮನಿಯಿಂದ ದುಬೈಗೆ ಬಂದಿಳಿದ ಪ್ರಜ್ವಲ್‌ ರೇವಣ್ಣ

May 2, 2024 - 17:05
 35
Google  News Join WhatsApp Join Telegram Live

ಜರ್ಮನಿಯಿಂದ ದುಬೈಗೆ ಬಂದಿಳಿದ ಪ್ರಜ್ವಲ್‌ ರೇವಣ್ಣ

Panchayat Swaraj Samachar News Desk.

ಬೆಂಗಳೂರು: ಜರ್ಮನಿಗೆ ತೆರಳಿದ್ದ ಪ್ರಜ್ವಲ್‌ ರೇವಣ್ಣ ಈಗ ದುಬೈಗೆ ಶಿಫ್ಟ್‌ ಆಗಿದ್ದಾರೆ.

ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಪ್ರಜ್ವಲ್‌ ರೇವಣ್ಣ ಜರ್ಮನಿಗೆ ತೆರಳಿದ್ದರು. ಬುಧವಾರ ವಿಚಾರಣೆಗೆ ಹಾಜರಾಗಲು 7 ದಿನ ಕಾಲಾವಕಾಶ ನೀಡುವಂತೆ ವಿಶೇಷ ತನಿಖಾ ತಂಡದ ಬಳಿ ಮನವಿ ಮಾಡಿದ್ದರು.  

ಈಗ ಜರ್ಮನಿಯಲ್ಲಿದ್ದ ಪ್ರಜ್ವಲ್‌ ರೇವಣ್ಣ ಬುಧವಾರ ರಾತ್ರಿ ದುಬೈಗೆ ಬಂದಿದ್ದಾರೆ. ದುಬೈಗೆ ಬಂದ ಹಿನ್ನೆಲೆಯಲ್ಲಿ ನೇರವಾಗಿ ಪ್ರಜ್ವಲ್‌ ರೇವಣ್ಣ ಶೀಘ್ರವೇ ಬೆಂಗಳೂರಿಗೆ ಬರುತ್ತಾರಾ ಎಂಬ ಪ್ರಶ್ನೆ ಎದ್ದಿದೆ.

ಪ್ರಜ್ವಲ್‌ ರೇವಣ್ಣ ರಾಜತಾಂತ್ರಿಕ ಪಾಸ್‌ಪೋರ್ಟ್‌ ಬಳಸಿ ಜರ್ಮನಿಗೆ ತೆರಳಿದ್ದಾರೆ. ಹೀಗಾಗಿ ಕೂಡಲೇ ಈ ಪಾಸ್‌ಪೋರ್ಟ್‌ ರದ್ದುಪಡಿಸಬೇಕೆಂಬ ಆಗ್ರಹ ಕೇಳಿ ಬಂದಿದೆ.

Google News Join Facebook Live 24/7 Help Desk

Tags: