LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಶಾಮುಕ್ತ ಸಮಾಜಕ್ಕೆ ಯುವಜನತೆ ಸಂಕಲ್ಪ ಅಗತ್ಯ: ನಾಗರತ್ನಾ

Advertisement
Advertisement

ಬಾಗಲಕೋಟೆ: ಮಾದಕ ವಸ್ತುಗಳ ಸೇವನೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದ್ದು ನಶೆಯ ಚಟದಿಂದ ವ್ಯಕ್ತಿತ್ವವನ್ನು ಮಾತ್ರವಲ್ಲದೆ ಕುಟುಂಬದ ಭವಿಷ್ಯವನ್ನೂ ಸಂಕಷ್ಟಕ್ಕೆ ದೂಡುತ್ತಾರೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿವಿಯ ಸಂಚಾಲಕರಾದ ನಾಗರತ್ನಾ ಬಿ.ಕೆ ಹೇಳಿದರು.

ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಎನ್‌ಎಸ್‌ಎಸ್ ಘಟಕ, ಎನ್‌ಸಿಸಿ ಘಟಕ ಹಾಗೂ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ನಶಾಮುಕ್ತ ಪ್ರತಿಜ್ಞಾ ಮಹಾ ಅಭಿಯಾನ’ ಜಾಗೃತಿ ಕಾರ್ಯಕ್ರಮವನ್ನು ಇಳಕಲ್ ಮಹಾಂತ್ ಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಹಿಂಸಾಚಾರ, ಅನಾಚಾರ, ಅನ್ಯಾಯ ಸೇರಿದಂತೆ ಹಲವಾರು ಅಪರಾಧಗಳು ಮತ್ತು ದುಷ್ಚಟಗಳು ತಲೆದೂರಿದ್ದು ಇಂತಹ ಸಮಸ್ಯೆಗಳಿಂದ ಮುಕ್ತವಾದ ಶಾಂತಿಯುತ ಹಾಗೂ ನಶಾಮುಕ್ತ ಸಮಾಜವನ್ನು ನಿರ್ಮಿಸುವ ಅಗತ್ಯವಿದೆ ಎಂದರು.

ಸಕಾರಾತ್ಮಕವಾಗಿ ಯೋಚಿಸುವ ವಿಧಾನವನ್ನು ರಾಜಯೋಗ ಎಂದು ಕರೆಯಲಾಗುತ್ತದೆ. ನಶಾಮುಕ್ತರಾಗದಿದ್ದರೆ ಸಮಾಜದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಎಲ್ಲಿ ದೃಢಸಂಕಲ್ಪ ಇರುತ್ತದೆಯೋ ಅಲ್ಲಿ ಯಶಸ್ಸು ಖಚಿತ. ಆದ್ದರಿಂದ ಜೀವನದಲ್ಲಿ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಅರಿತುಕೊಂಡು ಸರಿಯಾದ ಮಾರ್ಗದಲ್ಲಿ ಸಾಗಬೇಕು. ಯುವಕರು ಸಕರಾತ್ಮಕ ಯೋಚನೆಗಳಲ್ಲಿ ತೊಡಗಿಕೊಳ್ಳಬೇಕು. ದಿನನಿತ್ಯ ಧ್ಯಾನವನ್ನು ಮಾಡುತಿದ್ದರೆ ದೈಹಿಕವಾಗಿ, ಮಾನಸಿಕವಾಗಿ, ಆರೋಗ್ಯವಾಗಿ ಜೀವನವನ್ನು ನಡೆಸಲು ಸಾಧ್ಯ. ಯುವಶಕ್ತಿಯು  ದುಶ್ಚಟಗಳಿಗೆ ಬಲಿಯಾಗದಂತೆ ನಶಾ ಮುಕ್ತರನ್ನಾಗಿ ಮಾಡುವುದು ಶಿಕ್ಷಕರ, ಪೋಷಕರ ಕರ್ತವ್ಯವಾಗಿದೆ. ಎಂದರು. ಇದೇ ವೇಳೆ ವಿದ್ಯಾರ್ಥಿಗಳಿಗೆ ನಶೆಯ ವ್ಯಸನಕ್ಕೆ ಒಳಗಾಗದೇ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವಂತೆ ಪ್ರತಿಜ್ಞಾ ಬೋಧನೆ ಮಾಡಿದರು.

news_1786436436_0_925.webp

ಪ್ರಾಚಾರ್ಯರಾದ ಎಸ್. ಆರ್. ಮುಗನೂರಮಠ ಮಾತನಾಡಿ ಎಲ್ಲ ಜೀವಿಗಳಲ್ಲಿಯೂ ದೇವರ ಬಿಂಬವಿದೆ ಅದು ಕಾಣಿಸಲು ದೇಹವನ್ನು ವ್ಯಸನಗಳಿಂದ ಅಶುದ್ಧ ಮಾಡದೇ ಶುದ್ಧವಾಗಿ ಇಟ್ಟುಕೊಳ್ಳಬೇಕು. ಅಂತರಂಗದ ಅರಿವಿಲ್ಲದಿದ್ದರೆ ದೇಹದ ಅಸ್ತಿತ್ವಕ್ಕೂ ಅರ್ಥವಿಲ್ಲ. ಎಲ್ಲ ಜೀವಿಗಳಲ್ಲೂ ದೇವರ ಬಿಂಬವಿದೆ. ಆದ್ದರಿಂದ ಮಾದಕ ದ್ರವ್ಯಗಳ ವ್ಯಸನಕ್ಕೆ ಒಳಗಾಗಿ ನಮ್ಮ ದೇಹ ಹಾಗೂ ಮನಸ್ಸುಗಳನ್ನು ಮಲೀನಗೊಳಿಸಬಾರದು. ಋಣಾತ್ಮಕ ಹಾಗೂ ವ್ಯರ್ಥ ಚಿಂತನೆಗಳನ್ನು ತೊರೆದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಯುವಕರಲ್ಲಿ ಕೆಟ್ಟ ಆಕರ್ಷಣೆಗಳಿಗೆ ಒಳಗಾಗಬಾರದು. ಇಂಟರ್‌ನೆಟ್ ಹಾಗೂ ಮೊಬೈಲ್‌ನ ಅತಿಯಾದ ಬಳಕೆಯ ಚಟ ಹೆಚ್ಚುತ್ತಿದೆ, ಇಂತಹ ಚಟಗಳಿಂದ ದೂರವಿದ್ದು, ಉತ್ತಮ ಚಿಂತನೆ ಹಾಗೂ ಸಕಾರಾತ್ಮಕ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಘಟಕ 1 ಮತ್ತು 2ರ ಕಾರ್ಯಕ್ರಮಾಧಿಕಾರಿಗಳಾದ ಡಾ. ಎಂ. ಎಚ್. ವಡ್ಡರ, ಡಾ. ವಿರೂಪಾಕ್ಷಿ ಎನ್. ಬಿ. ಲೆಫ್ಟಿನೆಂಟ್ ಎಂ.ಎಂ. ದೇವನಾಳ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಶಾಮುಕ್ತ ಸಮಾಜಕ್ಕೆ ಯುವಜನತೆ ಸಂಕಲ್ಪ ಅಗತ್ಯ: ನಾಗರತ್ನಾಪ್ರಬಲ ಭೂಕಂಪನವು ನೆಲವನ್ನು ನಡುಗಿಸಿತು; ಇಲ್ಲಿಯವರೆಗೆ 132 ಜನರು ಸಾವನ್ನಪ್ಪಿದ್ದಾರೆ, 1500 ಕ್ಕೂ ಹೆಚ್ಚು ಮನೆಗಳು ನಾಶपक्ष कसा फुटतो, हे अमित शहांना कळणार, आता दयामया नाही; संजय राऊतांचं ओपन चँलेजಮಕ್ಕಳ ಹತ್ಯೆಗೆಂದೇ ಬೆಂಗ್ಳೂರಿನ ಸ್ಟಾರ್‌ ಹೋಟೆಲ್‌ನಲ್ಲಿ ರೂಮ್‌ ಬುಕ್‌ ಮಾಡಿದ್ದ ತಂದೆ ಇಮ್ರಾನ್‌?ನದಿಗೆ ರಾಸಾಯನಿಕ ತ್ಯಾಜ್ಯ – 3 ಕೈಗಾರಿಕೆ ಮುಚ್ಚಲು ಈಶ್ವರ ಖಂಡ್ರೆ ಸೂಚನೆಜೆಡಿಎಸ್ ಪಾದಯಾತ್ರೆಯಲ್ಲಿ ರೈತರು ಯಾರೂ ಇಲ್ಲ: ಡಿಕೆಶಿನಿದ್ದೆಗಣ್ಣಿನಲ್ಲಿ ಚಾಲಕನ ಯಡವಟ್ಟು – ಮನೆಗೆ ಡಿಕ್ಕಿ ಹೊಡೆದು ಮರಳು ಲಾರಿ ಪಲ್ಟಿವಿರಾಜಪೇಟೆಯಲ್ಲಿ ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಬಲಿ – ಗ್ರಾಮಸ್ಥರಿಂದ ಪ್ರತಿಭಟನೆಮಂಡ್ಯದಲ್ಲಿ ಜೈಲ್ ಭರೋ ಚಳವಳಿ – ಹೆದ್ದಾರಿ ತಡೆದ ಮಹಿಳಾ ಪ್ರತಿಭಟನಾಕಾರರನ್ನ ಹೊತ್ತೊಯ್ದ ಪೊಲೀಸರುಚಲಿಸುತ್ತಿದ್ದಾಗಲೇ ಕಳಚಿದ KSRTC ಬಸ್‌ ಚಕ್ರ – ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ