LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿರಾಜಪೇಟೆಯಲ್ಲಿ ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಬಲಿ – ಗ್ರಾಮಸ್ಥರಿಂದ ಪ್ರತಿಭಟನೆ

Advertisement
Advertisement

ಮಡಿಕೇರಿ: ಕಾಡಾನೆ ದಾಳಿಗೆ ವಿರಾಜಪೇಟೆಯ ಯಡೂರು ಗ್ರಾಮದಲ್ಲಿ ಕೂಲಿ ಕಾರ್ಮಿಕರೊಬ್ಬರು ಬಲಿಯಾಗಿದ್ದಾರೆ.

ಯಡೂರು ಗ್ರಾಮದ ಅಣ್ಣಪ್ಪ (40) ಕಾಡಾನೆ ದಾಳಿಗೆ ಬಲಿಯಾದ ಕಾರ್ಮಿಕ. ಹಸುವನ್ನು ಹುಡುಕಲು ಅಣ್ಣಪ್ಪ ಕಾಫಿತೋಟಕ್ಕೆ ತೆರಳಿದ್ದರು. ಈ ವೇಳೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಇದರಿಂದ ಅವರ ಸೊಂಟ ಮತ್ತು ಬೆನ್ನಿಗೆ ತೀವ್ರ ಪೆಟ್ಟಾಗಿತ್ತು. ಅವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಅವರು ಸಾವನ್ನಪ್ಪಿದ್ದಾರೆ. ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಶಾಸಕ ಎ.ಎಸ್. ಪೊನ್ನಣ್ಣ ಅವರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದು, ಸರ್ಕಾರದ ಪರಿಹಾರ ಧನವನ್ನೂ ವಿತರಿಸಿದ್ದಾರೆ. ಇನ್ನೊಂದೆಡೆ, ಈ ದುರಂತವನ್ನು ಖಂಡಿಸಿ ವಿರಾಜಪೇಟೆ ತಾಲೂಕಿನ ಒಂಟಿಯಂಗಡಿಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಹೋರಾಟಕ್ಕೆ ಜನ ಬೆಂಬಲ ಸೂಚಿಸಿದ್ದಾರೆ.

ಪ್ರತಿಭಟನಾಕಾರರು, ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸ್ಪಷ್ಟ ಭರವಸೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಘಟನೆಯ ಬಳಿಕ ಯಡೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಭೀತಿ ಮನೆ ಮಾಡಿದೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಶಾಮುಕ್ತ ಸಮಾಜಕ್ಕೆ ಯುವಜನತೆ ಸಂಕಲ್ಪ ಅಗತ್ಯ: ನಾಗರತ್ನಾಪ್ರಬಲ ಭೂಕಂಪನವು ನೆಲವನ್ನು ನಡುಗಿಸಿತು; ಇಲ್ಲಿಯವರೆಗೆ 132 ಜನರು ಸಾವನ್ನಪ್ಪಿದ್ದಾರೆ, 1500 ಕ್ಕೂ ಹೆಚ್ಚು ಮನೆಗಳು ನಾಶपक्ष कसा फुटतो, हे अमित शहांना कळणार, आता दयामया नाही; संजय राऊतांचं ओपन चँलेजಮಕ್ಕಳ ಹತ್ಯೆಗೆಂದೇ ಬೆಂಗ್ಳೂರಿನ ಸ್ಟಾರ್‌ ಹೋಟೆಲ್‌ನಲ್ಲಿ ರೂಮ್‌ ಬುಕ್‌ ಮಾಡಿದ್ದ ತಂದೆ ಇಮ್ರಾನ್‌?ನದಿಗೆ ರಾಸಾಯನಿಕ ತ್ಯಾಜ್ಯ – 3 ಕೈಗಾರಿಕೆ ಮುಚ್ಚಲು ಈಶ್ವರ ಖಂಡ್ರೆ ಸೂಚನೆಜೆಡಿಎಸ್ ಪಾದಯಾತ್ರೆಯಲ್ಲಿ ರೈತರು ಯಾರೂ ಇಲ್ಲ: ಡಿಕೆಶಿನಿದ್ದೆಗಣ್ಣಿನಲ್ಲಿ ಚಾಲಕನ ಯಡವಟ್ಟು – ಮನೆಗೆ ಡಿಕ್ಕಿ ಹೊಡೆದು ಮರಳು ಲಾರಿ ಪಲ್ಟಿವಿರಾಜಪೇಟೆಯಲ್ಲಿ ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಬಲಿ – ಗ್ರಾಮಸ್ಥರಿಂದ ಪ್ರತಿಭಟನೆಮಂಡ್ಯದಲ್ಲಿ ಜೈಲ್ ಭರೋ ಚಳವಳಿ – ಹೆದ್ದಾರಿ ತಡೆದ ಮಹಿಳಾ ಪ್ರತಿಭಟನಾಕಾರರನ್ನ ಹೊತ್ತೊಯ್ದ ಪೊಲೀಸರುಚಲಿಸುತ್ತಿದ್ದಾಗಲೇ ಕಳಚಿದ KSRTC ಬಸ್‌ ಚಕ್ರ – ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ