LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗಣಪತಿ ಮೆರವಣಿಗೆ ವಿಚಾರಕ್ಕೆ ಧಮ್ಕಿ – ಇನ್ಸ್‌ಪೆಕ್ಟರ್‌ ಧನಂಜಯ್ ಪರ ಯತೀಂದ್ರ ಬ್ಯಾಟಿಂಗ್

Advertisement

ಮೈಸೂರು: ಜಿಲ್ಲೆಯ ಟಿ.ನರಸೀಪುರ ಇನ್ಸ್‌ಪೆಕ್ಟರ್‌ ಧಮ್ಕಿ ವಿಚಾರದ ಬಗ್ಗೆ 5 ದಿನಗಳ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ  ಮೌನ ಮುರಿದಿದ್ದು, ಧನಂಜಯ್ ಪರ ಬ್ಯಾಟಿಂಗ್ ಮಾಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇನ್ಸ್‌ಪೆಕ್ಟರ್‌ ಧನಂಜಯ್ ಯಾವುದೇ ತಪ್ಪು ಮಾಡಿಲ್ಲ. ಅವರು ಬುದ್ಧಿವಾದ ಹೇಳಿದ್ದಾರೆ. ಬುದ್ಧಿವಾದ ಹೇಳುವ ದಾಟಿ ಸ್ವಲ್ಪ ಬದಲಾಗಿದೆ ಅಷ್ಟೇ. ಅದನ್ನ ಬಿಟ್ಟು ಬೇರೆ ಯಾವುದೇ ತಪ್ಪು ಮಾಡಿಲ್ಲ. ತಪ್ಪೇ ಮಾಡದ ಇನ್ಸ್‌ಪೆಕ್ಟರ್‌ ಮೇಲೆ ಕ್ರಮ ಯಾಕೆ ತೆಗೆದುಕೊಳ್ಳಬೇಕು ಎಂದು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ಮಸೀದಿ ಮುಂದೆ ಯಾಕೆ ಪಟಾಕಿ ಹೊಡೆಯಬೇಕು? ನಮ್ಮ ದೇವಸ್ಥಾನದ ಮುಂದೆ ಅವರು ಬಂದು ಪಟಾಕಿ ಹೊಡೆದರೆ ನಾವು ಸುಮ್ಮನಿರುತ್ತೇವಾ? ಚರ್ಚ್, ಮಸೀದಿ, ದೇವಸ್ಥಾನ ಮುಂದೆ ಪಟಾಕಿ ಹೊಡೆಯಬಹುದು ಅಂತ ಎಲ್ಲಿದೆ ಕಾನೂನು? ಯಾರೇ ತಪ್ಪು ಮಾಡಿದರೂ ತಪ್ಪೇ. ಈ ನಿಯಮ ಎಲ್ಲಾ ಧರ್ಮದವರಿಗೂ ಅನ್ವಯವಾಗುತ್ತದೆ. ಅನುಮತಿ ಪಡೆದುಕೊಂಡೇ ಮೆರವಣಿಗೆ ಹೋಗಬೇಕು. ಯಾವ ರಸ್ತೆಗೆ ಬೇಕಾದರೂ ಹೋಗಲು ಅನುಮತಿ ಇಲ್ಲದೆ ಬಿಡಲು ಆಗಲ್ಲ. ಅನುಮತಿ ಪಡೆದುಕೊಂಡರೆ ಪೊಲೀಸರು ಭದ್ರತೆ ಮಾಡಿಕೊಡುತ್ತಾರೆ. ಅನುಮತಿ ಇಲ್ಲದೆ ಹೋಗಿ ಏನಾದರೂ ಹೆಚ್ಚು-ಕಡಿಮೆ ಆದರೆ ಯಾರು ಹೊಣೆ? ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿಯವರು ರಣಹದ್ದುಗಳು:
ಬಿಜೆಪಿಯವರು ರಣಹದ್ದುಗಳಂತೆ ಕೋಮು ಗಲಭೆ ಆಗುವುದನ್ನೇ ಕಾಯುತ್ತಾರೆ. ಕೋಮುಗಲಭೆ ಆಗಬೇಕು, ಯಾರದ್ದಾದರೂ ಸಾವಾಗಬೇಕು. ಅದರ ಲಾಭ ಬಿಜೆಪಿ ಪಡೆಯಬೇಕು ಎನ್ನುವುದೇ ಬಿಜೆಪಿಯವರ ಪ್ಲ್ಯಾನ್. ಯಾವುದೇ ಕಡೆ ಕೋಮು ಗಲಭೆಯಾದರೂ ಅದರ ಚುನಾವಣಾ ಲಾಭ ಬಿಜೆಪಿಗೆ ಆಗಿದೆ. ಹೀಗಾಗಿ ಬಿಜೆಪಿಗೆ ಕೋಮು ಗಲಭೆ ಬಗ್ಗೆ ಆಸಕ್ತಿ ಜಾಸ್ತಿ. ನರಸೀಪುರದಲ್ಲಿ ಅದೇ ಕೆಲಸ ಮಾಡಲು ಬಂದಿದ್ದಾರೆ ಎಂದು ಕಿಡಿಕಾರಿದ್ದಾರೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೈಲಿನಲ್ಲಿ ಮೊಬೈಲ್‌ ಬಳಕೆ, ಪ್ರದೋಷ್‌ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಬೇಡಿ – ದರ್ಶನ್‌ ಅರ್ಜಿಗಣೇಶ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ 6 ಬಾಲಕರು ದುರ್ಮರಣಪ್ರೀತಿಸಿ ಮದುವೆ – ಲಾಡ್ಜ್‌ನಲ್ಲಿ ಹೆಂಡತಿಯನ್ನು ಉಸಿರುಗಟ್ಟಿಸಿ ಕೊಂದು ಗಂಡ ಪರಾರಿಭಟ್ಕಳದಲ್ಲಿ ಗಣಪತಿ ವಿಸರ್ಜನೆ ವೇಳೆ ಮಸೀದಿ, ಮದರಸಾ ಮೇಲೆ ಕಲ್ಲು ತೂರಾಟಗಣಪತಿ ಮೆರವಣಿಗೆ ವಿಚಾರಕ್ಕೆ ಧಮ್ಕಿ – ಇನ್ಸ್‌ಪೆಕ್ಟರ್‌ ಧನಂಜಯ್ ಪರ ಯತೀಂದ್ರ ಬ್ಯಾಟಿಂಗ್ಬಡವರಿಗೆ ನಿವೇಶನ; ತಿಂಗಳಾಂತ್ಯದೊಳಗೆ ಭೂಮಿ ಗುರುತಿಸುವ ಕಾರ್ಯ ಪೂರ್ಣಗೊಳಿಸಿ: ಪರಮೇಶ್ವರ್ಧ್ವನಿವರ್ಧಕಕ್ಕೆ ಅನುಮತಿ ನೀಡದ ಪೊಲೀಸರು; ಗೌರಿ-ಗಣೇಶನನ್ನು ನಡುರಸ್ತೆಯಲ್ಲೇ ಬಿಟ್ಟು ತೆರಳಿದ ಗ್ರಾಮಸ್ಥರುಮರ ಬಿದ್ದು ಕಾಡಾನೆ ಮರಿಗೆ ಗಂಭೀರ ಗಾಯ – ಮರಿಯಾನೆ ಎಬ್ಬಿಸಲು ತಾಯಿಯಾನೆ ಪರದಾಟಬೆಳಗಾವಿ ಗ್ರಾಮ ಪಂಚಾಯಿತಿಯಲ್ಲಿ ತಂದೆ, ಮಗಳ ಬರ್ಬರ ಹತ್ಯೆಪಪ್ಪಾಯ ಹಣ್ಣಿನಲ್ಲಿ ಮೂಡಿದ ಗಣೇಶಾಕೃತಿ – ರೈತ ಕುಟುಂಬದಲ್ಲಿ ಸಂತಸ