ಬೆಂಗಳೂರು: ರಾಜಧಾನಿಯಲ್ಲಿ ಶಂಕಿತ ಉಗ್ರನ ಬಂಧನವಾಗಿದೆ. ಪಶ್ಚಿಮ ಬಂಗಾಳ ಮೂಲದ ಅಸಾಫುಲ್ ಮಲ್ಲಿಕ್ ಎಂಬಾತನನ್ನು ಸೆರೆ ಹಿಡಿಯಲಾಗಿದೆ.
ಪಾಕಿಸ್ತಾನ ಸೇನೆಯಿಂದ ನಡೆಯುವ ದೌರ್ಜನ್ಯ, ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ವಿವಾದ, ಇಸ್ರೇಲ್ ದೇಶಕ್ಕೆ ಪಾಕಿಸ್ತಾನ ಸೇನೆ ಸಹಾಯ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದ. ಅಲ್ಲದೇ, ಮುಸ್ಲಿಮರಿಗೆ ಭಾರತದಲ್ಲಿ ತೊಂದರೆ ಆದರೆ ಇಲ್ಲಿಯೂ ಪ್ರತೀಕಾರಕ್ಕೆ ಮಲ್ಲಿಕ್ ತೀರ್ಮಾನಿಸಿದ್ದ.
ಪಾಕಿಸ್ತಾನ ಸೇನೆ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಟಿಟಿಪಿ ಎಂಬ ಉಗ್ರ ಸಂಘಟನೆ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಅಫ್ಘಾನಿಸ್ತಾನ ಮೂಲದ ಇಮ್ರಾನ್ ಸೈದರ್ ಎಂಬಾತನ ಪರಿಚಯ ಮಾಡಿಕೊಂಡಿದ್ದ. ಟಿಟಿಪಿ ಸದಸ್ಯನಾಗಿದ್ದ ಅಪ್ಘಾನಿಸ್ತಾನದ ಇಮ್ರಾನ್ ಸೈದರ್. ಆತನ ಮೂಲಕ TTP ಸಂಘಟನೆ ಸೇರಿ ಪಾಕಿಸ್ತಾನ ಸೇನೆ ಮೇಲೆ ಪ್ರತೀಕಾರಕ್ಕೆ ಸಂಚು. ಇಮ್ರಾನ್ ಸೈದರ್ ಸಹಾಯ ಪಡೆದು ಅಫ್ಘಾನಿಸ್ತಾನಕ್ಕೆ ಹೋಗಲು ಪ್ಲ್ಯಾನ್ ಮಾಡಿದ್ದ.
ವೀಸಾಗೆ ಅಪ್ಲೈ ಮಾಡಿ ಹಾಜರಾತಿ ತೊಂದರೆ ಮತ್ತು ಕುಟುಂಬದ ಸಲುವಾಗಿ ಮನಸು ಬದಲಿಸಿದ್ದ. ಬಂಧಿತನ ಫೇಸ್ಬುಕ್ ಮತ್ತು ವಾಟ್ಸಾಪ್, ಮೊಬೈಲ್ ಫೋನ್ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಇಮ್ರಾನ್ ಸೈದರ್ ಜೊತೆ ಚಾಟಿಂಗ್ ಮಾಡಿರುವುದು ಬೆಳಕಿಗೆ ಬಂದಿದೆ. ಹಲವು ಬಾರಿ ವಾಯ್ಸ್ ಕಾಲ್, ಆಡಿಯೋ ರೆಕಾರ್ಡಿಂಗ್ ಮೂಲಕ ಸಂಭಾಷಣೆ ನಡೆದಿದೆ. ಸದ್ಯ ಅಸಾಪುಲ್ ಮಲ್ಲಿಕ್ ವಿರುದ್ಧ ಹೆಬ್ಬಗೋಡಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಆರೋಪಿ ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಹೆಬ್ಬಗೋಡಿ ಬಳಿ ಖಾಸಗಿ ಕಂಪನಿಯಲ್ಲಿ ಸೆಕ್ಯುರಿಟಿ ಆಗಿದ್ದ.




