LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿಕಸಿತ ಭಾರತಕ್ಕಾಗಿ ಶ್ರಮಿಸೋಣ: ಮೂಗನೂರಮಠ

Advertisement
Advertisement
Advertisement

ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಸ್ವತಂತ್ರ ದಿನಾಚರಣೆ

ಬಾಗಲಕೋಟೆ: ಸರ್ವೋತ್ತಮ ಆಡಳಿತ, ಸುಭದ್ರ ರಾಜ್ಯ ನಿರ್ಮಾಣಕ್ಕಾಗಿ ಜ್ಞಾನ, ಕೌಶಲ್ಯ ಮತ್ತು ಸದ್ಗುಣಗಳಿಂದ ಹೋರಾಡುವುದರ ಮೂಲಕ ಸ್ವತಂತ್ರ ಭಾರತವನ್ನು ವಿಕಸಿತ ಭಾರತವನ್ನಾಗಿ ಮಾಡುವ ಹೊಣೆಗಾರಿಕೆ ಪ್ರತಿಯೊಬ್ಬ ಪ್ರಜೆಯ ಮೇಲಿದೆ ಎಂದು ಪ್ರಾಚಾರ್ಯರಾದ ಎಸ್. ಆರ್ ಮೂಗನೂರಮಠ ಹೇಳಿದರು.

ಬಿವಿವಿ ಸಂಘದ ಬಸವೇಶ್ವರ ಕಲಾಹಾವಿದ್ಯಾಲಯದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಮಾಡಿ ಮಾತನಾಡಿದರು. ಹೋರಾಟಗಾರರ ಪ್ರಾಣ ಬಲಿದಾನದಿಂದ ಬಂದ ಸ್ವಾತಂತ್ರ್ಯ ಭಾರತವನ್ನು ವಿಕಸಿತ ಭಾರತವನ್ನಾಗಿ ಮಾಡುವ ಹೊಣೆ ನಮ್ಮದಾಗಿದೆ. ಒಂದು ನೂರಾ ಐವತ್ತು ವರ್ಷಗಳ ಹಿಂದೆ ಬಂಗಾಳದಲ್ಲಿ ಬಂಕಿಮಚಂದ್ರ ಚಟರ್ಜಿ ಅವರಿಂದ ಆನಂದ ಮಠ ಕಾದಂಬರಿಯಲ್ಲಿ ರಚಿಸಿದ ವಂದೇ ಮಾತರಂ ಗೀತೆಗೆ ರಾಷ್ಟ್ರಗೀತೆಗೆ ಸಮಾನವಾದ ಗೌರವಾದರಗಳನ್ನು ನೀಡಲಾಗುತ್ತಿರುವುದು ಸಂತಸದ ಸಂಗತಿ. ಈ ಗೀತೆಯನ್ನು ಭಾರತೀಯರು ಒಟ್ಟಾಗಿ ಹಾಡುವುದರ ಮೂಲಕ ಭಾಷೆ, ಜಾತಿ, ಜನಾಂಗ ಮತ್ತು ಧರ್ಮಗಳ ಭಿನ್ನತೆಗಳನ್ನು ತೊಡೆದುಹಾಕುವ ಮೂಲಕ ಪವಿತ್ರ ಕಾರ್ಯಕ್ಕೆ ಕಂಕಣ ಭದ್ದಾರಗಬೇಕು ಎಂದರು.

ಇಂದು ಏಐ ಮತ್ತು ಡಿಜಿಟಲ್ ಮಾಧ್ಯಮಗಳ ಜೊತೆಯಾಗಿ ನಾವೆಲ್ಲರೂ ಒಂದು ಎಂಬ ಮನೋಭಾವನೆ ಬೆಳಸಿಕೊಳ್ಳಬೇಕಿದೆ. ಹೋರಾಟಗಾರರು ಶತಪ್ರಯತ್ನಗಳಿಂದ ನಮಗೆ ತಂದು ಕೊಟ್ಟ ಸ್ವಾತಂತ್ರ್ಯವನ್ನು ವ್ಯರ್ಥವಾಗಲು ಬೀಡುವುದಿಲ್ಲ ಎಂದು ನಿರಂತರ ಅಭ್ಯಾಸ, ಪ್ರಾಮಾಣಿಕತೆ ಮತ್ತು ನಿಷ್ಕಾಮ ಸೇವಾ ಕಾರ್ಯದ ಮೂಲಕ ಖಚಿತ ಪಡಿಸಬೇಕಿದೆ. ಜ್ಞಾನವರ್ಧನೆ, ಐಕ್ಯತೆ, ಸಮಾಜ ಅಭಿವೃದ್ಧಿ ಸೇವೆಗಳ ಶಪಥಗಳನ್ನು ಮಾಡಿ 2047ರ ಸ್ವಾತಂತ್ರ್ಯ ದಶಮಾನೋತ್ಸವದ ಹೊತ್ತಿಗೆ ಸಂಪೂರ್ಣ ವಿಕಸಿತ ಭಾರತ ಕಟ್ಟುವಲ್ಲಿ ಯಶಸ್ವಿಯಾಗುವ ಕೆಲಸವನ್ನು ವಿದ್ಯಾರ್ಥಿಗಳು ಇಂದಿನಿಂದಲೇ ಕೈಗೊಳ್ಳಬೇಕು ಎಂದು ಕರೆ ಕೊಟ್ಟರು.

ದೇಶದಲ್ಲಿ ಶಿಕ್ಷಣ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಡಿಜಿಟಲ್ ಇಂಡಿಯಾ, ಯುಪಿಐ, ಆಧಾರ, ಡಿಜಿಟಲ್ ಕ್ಲಾಸ್ ರೂಮ್ ಇತ್ಯಾದಿ ಬೆಳವಣಿಗೆಯಿಂದ ಜಗತ್ತು ನಮ್ಮೆಡೆಗೆ ನೋಡುತ್ತಿದ್ದು ನಮ್ಮಿಂದ ಕಂಪ್ಯೂಟರ್ ಜ್ಞಾನವನ್ನು ಅಪೇಕ್ಷಿಸುತ್ತಿದೆ. ದೇಶದಲ್ಲಿ ಶೆ. 60%ರಷ್ಟು ಮೂವತೈದು ವರ್ಷದೊಳಗಿನ ಯುವಕರಿಂದ ತುಂಬಿದ್ದು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

ಇದೇ ವೇಳೆ ಎನ್.ಸಿಸಿಯಲ್ಲಿ ಸಾಧನೆಗೈದ ಕೆಡೆಟ್ ಗಳಿಗೆ ಬ್ಯಾಡ್ಜ್ ಮತ್ತು ಸರ್ಟಿಫಿಕೇಟ್ ಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಭೋದಕ, ಭೋದಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಕಸಿತ ಭಾರತಕ್ಕಾಗಿ ಶ್ರಮಿಸೋಣ: ಮೂಗನೂರಮಠನೈಜಿರಿಯಾದ ಕತ್ತಲಲ್ಲಿ ಕಾರಿನ ಬಾಗಿಲು ಬಡಿದ ಮಕ್ಕಳು ಇಂದು ವೈದ್ಯರು: ಸದ್ಗುರು ಶ್ರೀ ಮಧುಸೂದನ ಸಾಯಿಅಂಡಮಾನ್‌ ಸಮುದ್ರದಲ್ಲಿ ಅತಿ ದೊಡ್ಡ ತ್ರಿವರ್ಣ ಧ್ವಜ ಅನಾವರಣ – ಆರ್‌.ಅಶೋಕ್‌ ಪುತ್ರ ಶರತ್‌ಗೆ ಸನ್ಮಾನತಿರಂಗ ಯಾತ್ರೆಯಲ್ಲಿ ಗಮನ ಸೆಳೆದ ಈಸೂರು ದಂಗೆಯ ಸ್ತಬ್ಧಚಿತ್ರ80ನೇ ಸ್ವಾತಂತ್ರ‍್ಯ ದಿನಾಚರಣೆ – ಮಾಣೆಕ್ ಷಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಸಿಎಂ ಡಿಕೆಶಿಬೆಂಗಳೂರಲ್ಲಿ ಶಂಕಿತ ಉಗ್ರನ ಬಂಧನ80ನೇ ಸ್ವಾತಂತ್ರ್ಯೋತ್ಸವದ ಮುನ್ನಾದಿನ ದೇಶವನ್ನುದ್ದೇಶಿಸಿ ರಾಷ್ಟ್ರಪತಿ ಮಾಡಿದ ಭಾಷಣದ ಪೂರ್ಣ ಪಾಠ..ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿಗೆ ಗೌರವ ವಂದನೆ – ರಾಷ್ಟ್ರಗೀತೆಗೂ ಮುನ್ನ ಮೊಳಗಿದ ವಂದೇ ಮಾತರಂ ಗೀತೆಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ ಹರಿದ ಕಾವೇರಿ ನೀರುಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಧ್ವಜಾರೋಹಣ ನೆರವೇರಿಸಿದ ಡಿಕೆಶಿ