LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ – ಪರಾರಿಯಾಗಲು ಯತ್ನಿಸಿದ ವ್ಯಕ್ತಿ ಜಾರಿಬಿದ್ದು ಸಾವು

Advertisement
Advertisement
Advertisement

ಚಿಕ್ಕಮಗಳೂರು: ಜೂಜು ಅಡ್ಡೆ ಮೇಲೆ ಪೊಲೀಸರು  ದಾಳಿ ನಡೆಸಿದ ವೇಳೆ ಪರಾರಿಯಾಗಲು ಯತ್ನಿಸಿದ ವ್ಯಕ್ತಿ ಜಾರಿಬಿದ್ದು ಸಾವನ್ನಪ್ಪಿದ ಘಟನೆ ಎನ್.ಆರ್.ಪುರ ತಾಲೂಕಿನ ಕಡಬಗೆರೆ ಸಮೀಪದ ಕಾಫಿತೋಟದಲ್ಲಿ ನಡೆದಿದೆ.

ಗುಡ್ಡೆಕೊಪ್ಪ ಗ್ರಾಮದ ರಮೇಶ್ (35) ಮೃತ ದುರ್ದೈವಿ. ಬಾಸಾಪುರ ಅರಣ್ಯ ಪ್ರದೇಶದಲ್ಲಿ ಕಳೆದ ರಾತ್ರಿ ಗುಂಪೊಂದು ಅಂದರ್-ಬಾಹರ್ ಆಡುತ್ತಿತ್ತು. ಈ ವೇಳೆ ಖಚಿತ ಮಾಹಿತಿ ಮೇರೆಗೆ ಬಾಳೆಹೊನ್ನೂರು ಪೊಲೀಸರು ದಾಳಿ ನಡೆಸಿದ್ದರು. ಅಲ್ಲಿದ್ದ 9 ಜನ ಪರಾರಿಯಾಗಲು ಯತ್ನಿಸಿದ್ದು, ಅದರಲ್ಲಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ರಮೇಶ್‌ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಜಾರಿಬಿದ್ದು, ತಲೆಗೆ ಬಂಡೆ ಬಡಿದು ಸಾವನ್ನಪ್ಪಿದ್ದಾನೆ. 

ರಮೇಶ್ ಕಳೆದ ರಾತ್ರಿ ಮನೆಗೆ ಹೋಗದ ಕಾರಣ ಮನೆಯವರು ಕೂಡ ಆತಂಕಕ್ಕೀಡಾಗಿದ್ದರು. ಇಂದು (ಆ.29) ಹುಡುಕಾಡುವಾಗ ಗ್ರಾಮದಂಚಿನ ಅರಣ್ಯ ಪ್ರದೇಶದಲ್ಲಿ ತಲೆಯಿಂದ ರಕ್ತಸ್ರಾವವಾಗಿ ರಮೇಶ್ ಮೃತದೇಹ ಪತ್ತೆಯಾಗಿತ್ತು. ಬಾಳೆಹೊನ್ನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅರಣ್ಯದಿಂದ ಓಡಿಹೋದ ಏಳು ಜನರಲ್ಲಿ ಮೃತ ರಮೇಶ್ ಇದ್ದನೋ,‌ಇಲ್ಲವೋ ಎಂಬ ಆಧಾರದಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ‌ವಶಕ್ಕೆ ಪಡೆದ ಇಬ್ಬರು ಆತ ಇದ್ದನೆಂದು ಹೇಳಿದ್ದಾರಂತೆ. 

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸೇತುವೆ ಮೇಲೆ 3 ವರ್ಷದ ಮಗು ಬಿಟ್ಟು ನದಿಗೆ ಹಾರಿದ ದಂಪತಿ – ಅನಾಥವಾದ ಕಂದಮ್ಮಮರಕ್ಕೆ ಕಟ್ಟಿ ಹಲ್ಲೆ, ಬೆಂಕಿ ಹಚ್ಚಿ ಚಿತ್ರಹಿಂಸೆ – ಎರಡು ತಿಂಗಳು ನರಳಿ ಇನ್ಸ್ಟಾ ಇನ್‌ಫ್ಲ್ಯೂಯೆನ್ಸರ್‌ ಸಾವುಬೈಕ್ ಬೆನ್ನಟ್ಟಿ ಬಂದು ಗುಂಡಿನ ದಾಳಿ – ಆಪ್ ನಾಯಕನ ಬರ್ಬರ ಹತ್ಯೆ ಗ್ಯಾನೇಂದ್ರ ಬೆನ್ನಲ್ಲೇ ಸಿಐಡಿ ಮತ್ತೊಂದು ಬೇಟೆ – ಸಹಾಯ ಮಾಡಿದ್ದ ಮಧ್ಯವರ್ತಿ ವಶಕ್ಕೆಚಿಕ್ಕಮಗಳೂರಲ್ಲಿ ಆಹಾರ ಇಲಾಖೆ ಅಧಿಕಾರಿಗಳ ದಾಳಿ – 30 ಕೆಜಿ ನಕಲಿ ನಾಟಿ ತುಪ್ಪ ಪತ್ತೆಕಲಬುರಗಿ ಪಾಲಿಕೆ ಮೇಯರ್‌ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜಯನೇಪಾಳ ಜಲಪ್ರಳಯ – ಸುರಕ್ಷಿತವಾಗಿ ಬೆಂಗಳೂರಿಗೆ ವಾಪಸ್ ಆದ 54 ಮಂದಿ ಕನ್ನಡಿಗರುನೇಪಾಳ ಜಲಪ್ರಳಯ – ಸುರಕ್ಷಿತವಾಗಿ ಬೆಂಗಳೂರಿಗೆ ವಾಪಸ್ ಆದ 54 ಮಂದಿ ಕನ್ನಡಿಗರುಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ – ಪರಾರಿಯಾಗಲು ಯತ್ನಿಸಿದ ವ್ಯಕ್ತಿ ಜಾರಿಬಿದ್ದು ಸಾವುಈ ಬಾರಿ ದಸರಾ ಮೆರವಣಿಗೆಯ ರೂಪವನ್ನೇ ಬದಲಾಯಿಸುತ್ತೇವೆ: ಸಿಎಂ