LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಲಬುರಗಿ ಪಾಲಿಕೆ ಮೇಯರ್‌ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜಯ

Advertisement
Advertisement
Advertisement
ಕಲಬುರಗಿ: ಇಲ್ಲಿನ ಮಹಾನಗರ ಪಾಲಿಕೆಯ ಅಧಿಕಾರದ ಗದ್ದುಗೆಗೆ ಕಾಂಗ್ರೆಸ್‌  ಮತ್ತೊಮ್ಮೆ ಏರಿದ್ದು, ಮೇಯರ್‌ ಹಾಗೂ ಉಪ ಮೇಯರ್‌ ಎರಡೂ ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ.
 
ಮೇಯರ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅಜ್ಮಲ್ ಗೋಳಾ ಅವರು 35 ಮತಗಳನ್ನು ಪಡೆದು 24ನೇ ಮೇಯರ್‌ ಆಗಿ ಆಯ್ಕೆಯಾದರು. ಉಪ ಮೇಯರ್‌ ಆಗಿ ಕಾಂಗ್ರೆಸ್‌ನ ಫರನಾ ಖುಸ್ರೋ ಜಾಗೀರದಾರ್ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಪಾಲಿಕೆಯಲ್ಲಿ ಕಾಂಗ್ರೆಸ್‌ ಪಾಳಯದಲ್ಲಿ ಸಂಭ್ರಮ ಮನೆಮಾಡಿದೆ. 
 
ಬಿಜೆಪಿ ಅಭ್ಯರ್ಥಿ ಗುರುರಾಜ್ ಪಟ್ಟಣ ಅವರು 26 ಮತಗಳನ್ನು ಪಡೆದರೆ, ಜೆಡಿಎಸ್‌ ಅಭ್ಯರ್ಥಿ ಅಲಿಮ್ ಪಟೇಲ್ ಅವರಿಗೆ ಮೂರು ಮತಗಳು ಲಭಿಸಿದವು. ಅಜ್ಮಲ್ ಗೋಳಾ ಅವರು 35 ಮತಗಳೊಂದಿಗೆ ಸ್ಪಷ್ಟ ಬಹುಮತ ಸಾಧಿಸಿ ಮೇಯರ್‌ ಸ್ಥಾನವನ್ನು ಅಲಂಕರಿಸಿದರು.
 
ಮೇಯರ್‌ ಹಾಗೂ ಉಪ ಮೇಯರ್‌ ಎರಡೂ ಸ್ಥಾನಗಳು ಅಲ್ಪಸಂಖ್ಯಾತ ಸಮುದಾಯಕ್ಕೆ ಒಲಿದಿರುವುದು ಚುನಾವಣೆಯ ಪ್ರಮುಖ ಅಂಶವಾಗಿದೆ. ಶಾಸಕ ಖನೀಜ್ ಫಾತಿಮಾ ಅವರ ಆಪ್ತರಾಗಿರುವ ಅಜ್ಮಲ್ ಗೋಳಾ ಅವರಿಗೆ ಮೇಯರ್‌ ಪಟ್ಟ ಒಲಿದಿದೆ. ಈ ಮೂಲಕ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಜಿಲ್ಲೆಯಲ್ಲಿ ಕಾಂಗ್ರೆಸ್‌ ಮತ್ತೆ ಪಾಲಿಕೆ ಅಧಿಕಾರದ ಚುಕ್ಕಾಣಿ ಹಿಡಿದಿದೆ.
 
23ನೇ ಮೇಯರ್‌ ವರ್ಷಾ ಜಾನೆ ಹಾಗೂ ಉಪ ಮೇಯರ್‌ ತೃಪ್ತಿ ಇಲಾಖೆ ಅವರ ಅವಧಿ ಪೂರ್ಣಗೊಂಡ ಹಿನ್ನೆಲೆ ಚುನಾವಣೆ ನಡೆಯಿತು. ಪ್ರಾದೇಶಿಕ ಆಯುಕ್ತೆ ಜಾಹೀರಾ ನಸ್ಸೀಮ್ ಅವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಭಾಗವಹಿಸಿದ್ದರು.
 
ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಖನೀಜ್ ಫಾತಿಮಾ, ಬಸವರಾಜ ಮತ್ತಿಮಡು, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ನಮೋಶಿ, ಬಿ.ಜಿ. ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ್, ಚಂದ್ರಶೇಖರ್ ಪಾಟೀಲ್ ಹಾಗೂ ಜಗದೇವ ಗುತ್ತೇದಾರ್ ಪಾಲ್ಗೊಂಡಿದ್ದರು. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಗೈರಾಗಿದ್ದರು.
 
ಅಜ್ಮಲ್ ಗೋಳಾ ಹಾಗೂ ಫರನಾ ಖುಸ್ರೋ ಜಾಗೀರದಾರ್ ಆಯ್ಕೆಯಾಗುತ್ತಿದ್ದಂತೆ ಕಾಂಗ್ರೆಸ್‌ ಕಾರ್ಯಕರ್ತರು ಪಾಲಿಕೆ ಆವರಣದ ಹೊರಗೆ ವಿಜಯೋತ್ಸವ ಆಚರಿಸಿದರು.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸೇತುವೆ ಮೇಲೆ 3 ವರ್ಷದ ಮಗು ಬಿಟ್ಟು ನದಿಗೆ ಹಾರಿದ ದಂಪತಿ – ಅನಾಥವಾದ ಕಂದಮ್ಮಮರಕ್ಕೆ ಕಟ್ಟಿ ಹಲ್ಲೆ, ಬೆಂಕಿ ಹಚ್ಚಿ ಚಿತ್ರಹಿಂಸೆ – ಎರಡು ತಿಂಗಳು ನರಳಿ ಇನ್ಸ್ಟಾ ಇನ್‌ಫ್ಲ್ಯೂಯೆನ್ಸರ್‌ ಸಾವುಬೈಕ್ ಬೆನ್ನಟ್ಟಿ ಬಂದು ಗುಂಡಿನ ದಾಳಿ – ಆಪ್ ನಾಯಕನ ಬರ್ಬರ ಹತ್ಯೆ ಗ್ಯಾನೇಂದ್ರ ಬೆನ್ನಲ್ಲೇ ಸಿಐಡಿ ಮತ್ತೊಂದು ಬೇಟೆ – ಸಹಾಯ ಮಾಡಿದ್ದ ಮಧ್ಯವರ್ತಿ ವಶಕ್ಕೆಚಿಕ್ಕಮಗಳೂರಲ್ಲಿ ಆಹಾರ ಇಲಾಖೆ ಅಧಿಕಾರಿಗಳ ದಾಳಿ – 30 ಕೆಜಿ ನಕಲಿ ನಾಟಿ ತುಪ್ಪ ಪತ್ತೆಕಲಬುರಗಿ ಪಾಲಿಕೆ ಮೇಯರ್‌ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜಯನೇಪಾಳ ಜಲಪ್ರಳಯ – ಸುರಕ್ಷಿತವಾಗಿ ಬೆಂಗಳೂರಿಗೆ ವಾಪಸ್ ಆದ 54 ಮಂದಿ ಕನ್ನಡಿಗರುನೇಪಾಳ ಜಲಪ್ರಳಯ – ಸುರಕ್ಷಿತವಾಗಿ ಬೆಂಗಳೂರಿಗೆ ವಾಪಸ್ ಆದ 54 ಮಂದಿ ಕನ್ನಡಿಗರುಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ – ಪರಾರಿಯಾಗಲು ಯತ್ನಿಸಿದ ವ್ಯಕ್ತಿ ಜಾರಿಬಿದ್ದು ಸಾವುಈ ಬಾರಿ ದಸರಾ ಮೆರವಣಿಗೆಯ ರೂಪವನ್ನೇ ಬದಲಾಯಿಸುತ್ತೇವೆ: ಸಿಎಂ