LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಶಿವಮೊಗ್ಗದ ಮುಪ್ಪಾನೆ – ಹಲ್ಕೆ ನಡುವಿನ ಲಾಂಚ್ ಸೇವೆ ಪುನಾರಂಭ

Advertisement
Advertisement

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಲಿಂಗನಮಕ್ಕಿ ಜಲಾಶಯದಲ್ಲಿ ಶರಾವತಿ ಹಿನ್ನೀರಿನ ಮಟ್ಟ ಏರಿಕೆಯಾದ ಹಿನ್ನೆಲೆ ಮುಪ್ಪಾನೆ ಮತ್ತು ಹಲ್ಕೆ ನಡುವಿನ ಲಾಂಚ್  (ಜಲಸಾರಿಗೆ ಬೋಟ್‌) ಸೇವೆ ಪುನಾರಂಭಗೊಂಡಿದೆ.

ಮಳೆ ಕೊರತೆಯಿಂದ ಲಿಂಗನಮಕ್ಕಿ ಡ್ಯಾಂ ಹಿನ್ನೀರು ಕನಿಷ್ಠ ಮಟ್ಟಕ್ಕೆ ಇಳಿದಿತ್ತು. ಇದರಿಂದ ನೀರಿನ ಆಳದಲ್ಲಿನ ಮರದ ಕಾಂಡಗಳು ಲಾಂಚ್‌ ತಳಭಾಗಕ್ಕೆ ತಗಲುವ ಸಾಧ್ಯತೆ ಇತ್ತು. ವಾಹನ ಇಳಿಸುವ ಪ್ಲಾಟ್‌ಫಾರ್ಮ್ ಜಾಗದಲ್ಲೂ ಲಾಂಚ್ ಕೆಳಭಾಗ ನೆಲಕ್ಕೆ ತಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಜನರ ಸುರಕ್ಷತೆಯ ದೃಷ್ಟಿಯಿಂದ ಜೂನ್ 2 ರಂದು ತಾತ್ಕಾಲಿಕವಾಗಿ ಮುಪ್ಪಾನೆ – ಹಲ್ಕೆ ನಡುವಿನ ಲಾಂಚ್ ಸೇವೆ ಸ್ಥಗಿತಗೊಳಿಸಲಾಗಿತ್ತು.

ಈಗ ಹಿನ್ನೀರಿನ ಮಟ್ಟ ಹೆಚ್ಚಳವಾಗಿರುವುದರಿಂದ ಇಂದಿನಿಂದ ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆ ಲಾಂಚ್ ಸೇವೆಯನ್ನ ಪುನಾರಂಭ ಮಾಡಿದೆ. 

ಕರೂರು ಮತ್ತು ಭಾರಂಗಿ ಹೋಬಳಿಯ ಸಂಪರ್ಕದ ಅತಿ ಮುಖ್ಯ ಮಾರ್ಗವಾದ ಮುಪ್ಪಾನೆ ಲಾಂಚ್‌ ತುಮರಿ, ಸಿಗಂದೂರು ಮತ್ತು ಭಾರಂಗಿ ಹೋಬಳಿ ಜನರಿಗೆ ಹೆಚ್ಚು ಅನುಕೂಲ ಕಲ್ಪಿಸುತ್ತದೆ. 

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತುಲೈಗಿಂಕ ಕಿರುಕುಳ ಪ್ರಕರಣದಲ್ಲಿ ಖುಲಾಸೆ – ಹೆಚ್.ಡಿ ರೇವಣ್ಣಗೆ ಸುಪ್ರೀಂಕೋರ್ಟ್ ನೋಟಿಸ್ವಿದೇಶಾಂಗ ನೀತಿ ಟ್ರಂಪ್‌ಗೆ ಅಡವಿಟ್ಟ ಮೋದಿ: ಪ್ರಿಯಾಂಕ್‌ ಟೀಕೆಪೋಕ್ಸೋ ಪ್ರಕರಣ – ವಚನಾನಂದ ಸ್ವಾಮೀಜಿಗೆ ಜಾಮೀನು ಮಂಜೂರುಬಿಡದಿ ಟೌನ್‌ಶಿಪ್‌ ಜಟಾಪಟಿ – ಸರ್ವೆಗೆ ಬಂದ ಅಧಿಕಾರಿಗಳಿಗೆ ಪೊರಕೆ ಏಟು!ಶಿವಮೊಗ್ಗದ ಮುಪ್ಪಾನೆ – ಹಲ್ಕೆ ನಡುವಿನ ಲಾಂಚ್ ಸೇವೆ ಪುನಾರಂಭನೇಪಾಳದಲ್ಲಿ ಬೆಳಗಾವಿ ಯುವಕನ ಬರ್ಬರ ಹತ್ಯೆ – ರೂಮ್‌ಮೇಟ್‌ನಿಂದಲೇ ಕೃತ್ಯಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಕಂಡು ಪತಿಯೂ ನೇಣಿಗೆ ಶರಣು – ಪ್ರಾಣಬಿಟ್ಟ ನವದಂಪತಿರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣ: ತನಿಖಾ ವರದಿ ಸಲ್ಲಿಸುವಂತೆ ಸುಪ್ರೀಂ ಆದೇಶಚಲಿಸುತ್ತಿದ್ದ ಟ್ರೈನ್‌ನಲ್ಲಿ ಪೂಜೆ – 3 ಲಕ್ಷಕ್ಕೂ ಹೆಚ್ಚಿನ ಬೆಲೆಗೆ ಖಾಸಗಿ ಕೋಚ್ ಬುಕ್ ಆಗಿತ್ತು: ರೈಲ್ವೇ ಇಲಾಖೆ ಸ್ಪಷ್ಟನೆ