LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

IAS ಅಧಿಕಾರಿ ಗ್ಯಾನೇಂದ್ರ ಕುಮಾರ್ ಯಾವಾಗ ಬರ್ತಾರೆ ಗೊತ್ತಿಲ್ಲ: ಪ್ರಿಯಾಂಕ್ ಖರ್ಗೆ

Advertisement
Advertisement
Advertisement

ಬೆಂಗಳೂರು: ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್  ನಾಳೆ ಬರ್ತಾರಾ? ನಾಡಿದ್ದು ಬರ್ತಾರಾ ಅಂತ ಗೊತ್ತಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ  ಮಾತಾಡಿದ ಅವರು, ಗ್ಯಾನೇಂದ್ರ ಕುಮಾರ್ ಮಿಸ್ಸಿಂಗ್ ಇದ್ದಾರೆ ಎಂದು ಮಾಧ್ಯಮಗಳಲ್ಲಿ ಬಂದಿತ್ತು. ಹೀಗಾಗಿ ಪರಿಶೀಲನೆ ಮಾಡಿದಾಗ ಲಿಖಿತ ಮೂಲಕ ಅರ್ಜಿ ಬರೆದುಕೊಟ್ಟಿರೋದು ಗೊತ್ತಾಗಿದೆ. ಅರ್ಜಿಯಲ್ಲಿ ನಾನು ತುರ್ತಾಗಿ ಮನೆಗೆ ಹೋಗಬೇಕು‌. ತಂದೆಗೆ ಹುಷಾರಿಲ್ಲ ಅಂತ ಬರೆದಿದ್ದಾರೆ. ಅದನ್ನ ನಾನು ಹೇಳಿದ್ದೆ.ಅವರ ಅಧಿಕೃತ ನಂಬರ್ ಆಫ್ ಇತ್ತು. ಖಾಸಗೀ ನಂಬರ್‌ನಿಂದ ಮಾಡಿದಾಗ ಎರಡು ದಿನಗಳಲ್ಲಿ ಬರ್ತೀನಿ ಎಂದಿದ್ದರು. ಶನಿವಾರ ಇದು ನಡೆದಿರೋದು. ನಾಳೆ ಬರ್ತಾರಾ? ನಾಡಿದ್ದು ಬರ್ತಾರಾ ಎಂಬ ಮಾಹಿತಿ ಇಲ್ಲ ಎಂದರು. 

ಮಿಸ್ಸಿಂಗ್ ಆಗಿದ್ದಾರೆ, ಓಡಿ ಹೋಗಿದ್ದಾರೆ ಎಂದು ವರದಿ ಬರುತಿತ್ತು. ಆದರೆ ಅವರು ಲೀವ್ ಹಾಕಿದ್ದಾರೆ. ಅವರ ಲೆಟರ್ ಮತ್ತು ಸರ್ಕಾರಕ್ಕೆ ಮಾಹಿತಿ ಕೊಟ್ಟ ಹಿನ್ನಲೆಯಲ್ಲಿ ಹೇಳ್ತಾ ಇದ್ದೇವೆ ಎಂದರು.

ಇಡಿ ದಾಳಿ ಮಾಡಿದೆ. KPSC ಪ್ರಕರಣದ ಬಗ್ಗೆ ಸರ್ಕಾರ ರಾಜೀ ಆಗಲ್ಲ. ಯಾರು ಉಪ್ಪು ತಿಂದಿದ್ದಾರೆ ನೀರು ಕುಡಿಯಲೇಬೇಕು. KPSC ಅಧ್ಯಕ್ಷ ಇರಬಹುದು, ಕಂಟ್ರೋಲರ್ ಇರಬಹುದು ಯಾರೇ ಸಿಬ್ಬಂದಿ ಇದ್ದರೂ ನೀರು ಕುಡಿಯಬೇಕು. ಯುವಕ ಭವಿಷ್ಯ ಜೊತೆ ಚೆಲ್ಲಾಟ ಮಾಡೊ ಅಧಿಕಾರಿ ಯಾರಿಗೂ ಸರ್ಕಾರ, ಕಾನೂನು ಕೊಟ್ಟಿಲ್ಲ. ಅಧ್ಯಕ್ಷ, IAS ಅಧಿಕಾರಿ ಯಾರೇ ಇದ್ದರೂ ಕಾನೂನು ಮೇಲಿಲ್ಲ. ಏನೇ ತನಿಖೆ ಇದ್ದರೂ ಅವರು ಎದುರಿಸುತ್ತಾರೆ. ಅಧಿಕಾರಿಗಳು ಎಲ್ಲಿಗೆ ಹೋಗ್ತಾರೆ ಇಂಡಿಯಾದಲ್ಲೇ ಇರಬೇಕು ಅಲ್ಲವಾ? ಎಂದರು.

ಎಸ್ಕೇಪ್ ಆಗಿರೋದು ಅನುಮಾನಕ್ಕೆ ಕಾರಣ ಆಗಿರೋದು ಒಪ್ಪುತ್ತೇನೆ. ಸಾಂದರ್ಭಿಕ ಸಂದರ್ಭ ನೋಡಿದ್ರೆ ಅನುಮಾನ ಬರುತ್ತದೆ. ಅವರು ಪತ್ರನೂ ಬರೆದಿದ್ದಾರೆ. ಅವರ ಇಲಾಖೆ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ. ಅವರೇ ಬರ್ತೀನಿ ಅಂತ ಸರ್ಕಾರಕ್ಕೆ ಹೇಳಿದ್ದಾರೆ. ನಾವು ಮಾನಿಟರ್ ಮಾಡ್ತಾ ಇದ್ದೇವೆ. ಇಡಿ ಅವರು ಪತ್ರ ಬರೆದಿದ್ದಾರೆ ಸಹಕಾರ ಕೊಡಿ ಅಂತ. ಸಂಪೂರ್ಣವಾಗಿ ಸಹಕಾರ ಕೊಡ್ತಾ ಇದ್ದೇವೆ. KPSC ವಿಚಾರದಲ್ಲಿ ಯಾವುದೇ ವಿನಾಯ್ತಿ ಇಲ್ಲ. ಯಾವುದೇ ರಾಜೀ ಇಲ್ಲ. ಯಾರಾದ್ರೂ ಅಕ್ರಮ ಮಾಡಿದ್ರೆ ಕ್ರಮ ತೆಗೆದುಕೊಳ್ತೀವಿ ಅಂತ ತಿಳಿಸಿದರು. 

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
NIA ची देशभरात छापेमारी, पुणे शहरातही शिजत होता भयंकर कट? दहशतवाद प्रकरणात…ಐಪಿಸಿ ಕಂಪನಿಯಿಂದ 83 ಸಾವಿರ ಕೋಟಿ ರೂ. ಹೂಡಿಕೆಗೆ ಒಲವು: ಎಂ.ಬಿ ಪಾಟೀಲ್ಹಾವೇರಿ ಜಿಲ್ಲೆಗೆ 2 ತಿಂಗಳು ಪ್ರಮೋದ್ ಮುತಾಲಿಕ್ ಪ್ರವೇಶ ನಿರ್ಬಂಧಕಾವೇರಿ ತೀರ್ಥೋದ್ಭವ ಆಚರಣೆಗೆ 2 ಕೋಟಿ ರೂ. ಅನುದಾನ – ಡಿಕೆಶಿ ಘೋಷಣೆಭೀಮಾ ನದಿಯಲ್ಲಿ ಸ್ನಾನ ಮಾಡಲು ಹೋದ ಯುವಕ ನಾಪತ್ತೆಇನ್‌ಸ್ಟಾ ಪ್ರೇಯಸಿಗೆ ಎಂಗೇಜ್‌ಮೆಂಟ್; ಆರನೇ ಮಹಡಿಯಿಂದ ಜಿಗಿಯಲು ಮುಂದಾದ ಅಪ್ರಾಪ್ತಕೋಲಾರದಲ್ಲಿ 1,71,034 ಮತದಾರರು ಕರಡು ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೆ: ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ರಾಜ್ಯದ 224 ಕ್ಷೇತ್ರಗಳಲ್ಲಿ ಅಂತರ್ಜಲ ಹೆಚ್ಚಳಕ್ಕೆ ಶಿರಪುರ ಮಾದರಿ: ಅಜಯ್ ಸಿಂಗ್ಅವ್ರು IAS ಮಾಡಿದ್ರೆ ಜನ ನನ್ನನ್ನು 6 ಬಾರಿ ಶಾಸಕನನ್ನಾಗಿ ಮಾಡಿದ್ದಾರೆ: ಹಾಸನ ಡಿಸಿ ವಿರುದ್ಧ ರೇವಣ್ಣ ಕಿಡಿಕಂಟ್ರಾಕ್ಟರ್ ಆಗಿ ಅದಾನಿ ಸಿಎಂ ಭೇಟಿಯಾಗಿದ್ದಾರೆ: ಪ್ರಿಯಾಂಕ್ ಖರ್ಗೆ