LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಐಪಿಸಿ ಕಂಪನಿಯಿಂದ 83 ಸಾವಿರ ಕೋಟಿ ರೂ. ಹೂಡಿಕೆಗೆ ಒಲವು: ಎಂ.ಬಿ ಪಾಟೀಲ್

Advertisement
Advertisement
Advertisement

ಬೆಂಗಳೂರು: ಡಿಜಿಟಲ್ ಮೂಲಸೌಕರ್ಯ, ನವೀಕರಿಸಬಹುದಾದ ಇಂಧನ ಮತ್ತು ಗ್ರೀನ್ ಹೈಡ್ರೋಜನ್ ವಲಯಗಳಲ್ಲಿ ಹೆಸರಾಗಿರುವ ಲಕ್ಸಂಬರ್ಗ್ ಮೂಲದ ಇನ್ನೋವೇಶನ್ ಪ್ಲಾಟ್‌ಫಾರಂ ಕ್ಯಾಪಿಟಲ್  ಕಂಪನಿಯು ರಾಜ್ಯದಲ್ಲಿ ಒಟ್ಟು ಮೂರು ಹಂತಗಳಲ್ಲಿ 83 ಸಾವಿರ ಕೋಟಿ ರೂ. ಬಂಡವಾಳ ಹೂಡಲು ಆಸಕ್ತಿ ತೋರಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್  ತಿಳಿಸಿದ್ದಾರೆ.

ಸೋಮವಾರ ತಮ್ಮನ್ನು ಇಲ್ಲಿ ಭೇಟಿಯಾದ ಕಂಪನಿಯ ಉನ್ನತ ಮಟ್ಟದ ನಿಯೋಗದ ಜೊತೆ ಅವರು ಮಾತುಕತೆ ನಡೆಸಿದರು. ಕಂಪನಿಯ ವ್ಯವಸ್ಥಾಪಕ ಪಾಲುದಾರ ಗುರುಶರಣ್ ಸಿಂಗ್ ಕುಂದನ್ ಈ ನಿಯೋಗದ ನೇತೃತ್ವ ವಹಿಸಿದ್ದರು. 

 ಈ ಬಗ್ಗೆ ಮಾಹಿತಿ ನೀಡಿರುವ ಸಚಿವರು, ಐಪಿಸಿ ಕಂಪನಿಯು ಬೆಂಗಳೂರು-ತುಮಕೂರು ಇಂಟಿಗ್ರೇಟೆಡ್ ಗ್ರೀನ್ ಹೈಡ್ರೋಜನ್ ಮತ್ತು ಕ್ರಮವಾಗಿ 2,500 ಮೆಗಾವ್ಯಾಟ್ ಐಟಿ ಲೋಡ್ ಮತ್ತು 1,000 ಮೆಗಾವ್ಯಾಟ್ ಸಾಮರ್ಥ್ಯದ ಹೈಪರ್ ಸ್ಕೇಲ್ ಡೇಟಾ ಕೇಂದ್ರಗಳನ್ನು ಸ್ಥಾಪಿಸುವ ಪ್ರಸ್ತಾವನೆಯನ್ನು ಮುಂದಿಟ್ಟಿವೆ. ಇದಕ್ಕಾಗಿ ಕಂಪನಿಯು ಮೊದಲ ಹಂತದಲ್ಲಿ 17,114 ಕೋಟಿ ರೂ. ಹೂಡಿಕೆ ಮಾಡಲು ಬಯಸಿದೆ ಎಂದಿದ್ದಾರೆ. 

ಕಂಪನಿಯು ಮೊದಲ ಹಂತದಲ್ಲಿ ತಲಾ 200 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಡೇಟಾ ಕೇಂದ್ರಗಳನ್ನು ಮತ್ತು 500 ಮೆಗಾವ್ಯಾಟ್ ಸಾಮರ್ಥ್ಯದ ಗ್ರೀನ್ ಹೈಡ್ರೋಜನ್ ಸ್ಥಾವರ ಮತ್ತು ಇಂಧನ ಸಂಕೀರ್ಣವನ್ನು ಸ್ಥಾಪಿಸಲಿದೆ. ಇದಕ್ಕಾಗಿ ಕಂಪನಿಯು 1,000 ಎಕರೆ ಜಾಗ ಕೇಳಿದೆ. ಇದರಲ್ಲಿ ಅದು ಎರಡೂ ಸೌಕರ್ಯಗಳಿಗೆ ತಲಾ 400 ಎಕರೆ ಬಳಸುವ ಉದ್ದೇಶ ಹೊಂದಿದೆ. ಉಳಿದ 200 ಎಕರೆಯು ಸುರಕ್ಷತೆ ಮತ್ತು ಪರಿಸರ ಸಂರಕ್ಷಣೆಗಾಗಿ ಮೀಸಲಿರಲಿದೆ. ಜೊತೆಗೆ 13 ಎಂಎಲ್‌ಡಿ ನೀರು ಅಗತ್ಯವಿದೆ ಎಂದು ಕಂಪನಿಯ ಪ್ರತಿನಿಧಿಗಳು ತಿಳಿಸಿದ್ದಾರೆ. ಇದರಲ್ಲಿ ಶೇಕಡ 85ರಷ್ಟನ್ನು ಸಂಸ್ಕರಿತ ಮೂಲಗಳಿಂದ ಕೊಡುವ ಚಿಂತನೆ ಇದೆ ಎಂದು ಅವರು ವಿವರಿಸಿದ್ದಾರೆ. 

ನಿಯೋಗದಲ್ಲಿ ಕಂಪನಿಯ ಸಿಇಒ ಪ್ರದೀಪ್ ಕಾರಟಗಿ, ವ್ಯವಸ್ಥಾಪಕ ಪಾಲುದಾರರಾಗಿರುವ ಜೇಮ್ಸ್ ಕೋಲ್ಟರ್, ವ್ಯವಸ್ಥಾಪಕ ನಿರ್ದೇಶಕರಾಗಿರುವ ಎಡ್ಸಾ ಕ್ಯಾಬ್ರೆರ, ಕಾರ್ಪೊರೇಟ್ ವ್ಯವಹಾರಗಳ ಭಾರತೀಯ ಮುಖ್ಯಸ್ಥ ಡಿ ಕೆ ಅರ್ಜುನ್ ಮುಂತಾದವರಿದ್ದರು.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
NIA ची देशभरात छापेमारी, पुणे शहरातही शिजत होता भयंकर कट? दहशतवाद प्रकरणात…ಐಪಿಸಿ ಕಂಪನಿಯಿಂದ 83 ಸಾವಿರ ಕೋಟಿ ರೂ. ಹೂಡಿಕೆಗೆ ಒಲವು: ಎಂ.ಬಿ ಪಾಟೀಲ್ಹಾವೇರಿ ಜಿಲ್ಲೆಗೆ 2 ತಿಂಗಳು ಪ್ರಮೋದ್ ಮುತಾಲಿಕ್ ಪ್ರವೇಶ ನಿರ್ಬಂಧಕಾವೇರಿ ತೀರ್ಥೋದ್ಭವ ಆಚರಣೆಗೆ 2 ಕೋಟಿ ರೂ. ಅನುದಾನ – ಡಿಕೆಶಿ ಘೋಷಣೆಭೀಮಾ ನದಿಯಲ್ಲಿ ಸ್ನಾನ ಮಾಡಲು ಹೋದ ಯುವಕ ನಾಪತ್ತೆಇನ್‌ಸ್ಟಾ ಪ್ರೇಯಸಿಗೆ ಎಂಗೇಜ್‌ಮೆಂಟ್; ಆರನೇ ಮಹಡಿಯಿಂದ ಜಿಗಿಯಲು ಮುಂದಾದ ಅಪ್ರಾಪ್ತಕೋಲಾರದಲ್ಲಿ 1,71,034 ಮತದಾರರು ಕರಡು ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೆ: ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ರಾಜ್ಯದ 224 ಕ್ಷೇತ್ರಗಳಲ್ಲಿ ಅಂತರ್ಜಲ ಹೆಚ್ಚಳಕ್ಕೆ ಶಿರಪುರ ಮಾದರಿ: ಅಜಯ್ ಸಿಂಗ್ಅವ್ರು IAS ಮಾಡಿದ್ರೆ ಜನ ನನ್ನನ್ನು 6 ಬಾರಿ ಶಾಸಕನನ್ನಾಗಿ ಮಾಡಿದ್ದಾರೆ: ಹಾಸನ ಡಿಸಿ ವಿರುದ್ಧ ರೇವಣ್ಣ ಕಿಡಿಕಂಟ್ರಾಕ್ಟರ್ ಆಗಿ ಅದಾನಿ ಸಿಎಂ ಭೇಟಿಯಾಗಿದ್ದಾರೆ: ಪ್ರಿಯಾಂಕ್ ಖರ್ಗೆ