ಬೆಳಗಾವಿ ನಗರದ ಚಾವಟಗಲ್ಲಿ ರಹವಾಸಿಗಳಿಗೆ ಎಲ್ & ಟಿ ಕಂಪನಿ ನೀಡುತ್ತಿರುವ ತೊಂದರೆ ಅಷ್ಟಿಷ್ಟಲ್ಲ ಎಲ್ಲಿ ನೋಡಿದಲ್ಲಿ ಅವ್ಯವಸ್ಥೆಯ ಕೂಡಿರುವ ರಸ್ತೆಗಳು ಗುಂಡಿಗಳು ಹಾಗೂ ಮಣ್ಣಿನ ಕೆಸರು ಗಳಿಂದ ಜನ ಬೇಸತ್ತು ಹೋಗಿದ್ದಾರೆ ಅದರಲ್ಲಿ ಕೂಡ ತಿಂಗಳಿನಲ್ಲಿ ನೀರಿನ ಅಭಾವ ಸ್ಥಳೀಯರಿಗೆ ಕಷ್ಟದ ಜೀವನ ನಡೆಸಲು ಅನಿವಾರ್ಯತೆಯನ್ನು ತಂದಿಟ್ಟಿದೆ. ಒಂದು ಗಂಟೆಗೆ ನೀರು ಬಿಟ್ಟುರು ಅದರಲ್ಲಿ ಹೆಚ್ಚಿನ ನೀರಿನ ಪ್ರಮಾಣ ಇರುವುದಿಲ್ಲ ಹಾಗೂ ನೀರಿನ ಶುದ್ಧತೆ ಕೂಡ ಇರುವುದಿಲ್ಲ ಇದರಿಂದ ಕುಟುಂಬದ ಆರೋಗ್ಯ ಸಮಸ್ಯೆ ಎದುರಾಗುತ್ತಾ ಇದೆಎಂದು ಗ್ರಹಿಣಿಯರು ತಮ್ಮ ನೋವನ್ನು ಕೇಳೋರು ಯಾರು ಇಲ್ಲ ಎಂದು ತಮ್ಮ ಸಮಸ್ಯೆ ಗಳನ್ನು ಹೇಳಿ ಕೊಳ್ಳುತ್ತಿದ್ದಾರೆ
ಮಹಾನಗರ ಪಾಲಿಕೆ ಈ ಕಡೆ ಗಮನ ಕೊಡಬೇಕಾಗಿ ಸ್ಥಳೀಯರ ಬೇಡಿಕೆಯಾಗಿದೆ ಹಾಗೂ ಮಹಾನಗರ ಪಾಲಿಕೆ ಸದಸ್ಯರು ಎಲ್ಲಿದ್ದಾರೆ ಎಂದು ಮತ ನೀಡಿದ ಮತದಾರರು ಕೇಳುತ್ತಿದ್ದಾರೆ ಶಾಸಕರಿಗೂ ಕೂಡ ನಮ್ಮ ಸಮಸ್ಯೆಗಳನ್ನು ತಲ್ಪಿಸಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ
ವರದಿ ರತ್ನಾಕರ ಗೌಂಡಿ ಪಂಚಾಯತ್ ಸ್ವರಾಜ್ ಸಮಾಚಾರ ಬೆಳಗಾವಿ




