LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ʻಗೌರಿ ಲಂಕೇಶ್ʼ ಕೊಲೆ ಕೇಸ್‌ ಆರೋಪಿಯಿಂದ ಹುಬ್ಬಳ್ಳಿ ನೂತನ ಪೊಲೀಸ್‌ ಆಯುಕ್ತರಿಗೆ ಸನ್ಮಾನ

Advertisement
Advertisement
Advertisement

ಹುಬ್ಬಳ್ಳಿ: ಹುಬ್ಬಳ್ಳಿ – ಧಾರವಾಡ  ಅವಳಿ ನಗರದ ನೂತನ ಪೊಲೀಸ್ ಆಯುಕ್ತ ಭೂಷಣ ಬೋರಸೆ ಅವರು ಅಧಿಕಾರ ಸ್ವೀಕರಿಸುವ ವೇಳೆ ಗಾಂಜಾ ಹಾಗೂ ಕೊಲೆ ಪ್ರಕರಣದ ಆರೋಪಿಗಳಿಬ್ಬರು ಸನ್ಮಾನ ಮಾಡಿರೋದು ಭಾರೀ ವಿವಾದಕ್ಕೆ ಕಾರಣವಾಗಿದೆ.

ಮಾದಕವಸ್ತು ಸಾಗಾಟ ಮತ್ತು ಕೊಲೆ ಪ್ರಕರಣದ ಆರೋಪಿ ಖೇತ್‌ಸಿಂಗ್ ರಾಜಪುರೋಹಿತ ಸನ್ಮಾನ ಮಾಡಿದ್ದಾನೆ. ಅಲ್ಲದೇ ಗೌರಿ ಲಂಕೇಶ್ ಕೊಲೆ ಪ್ರಕರಣದ ಆರೋಪಿ ಅಮಿತ್ ಬದ್ದಿಯೂ ಕೂಡ ಆಯುಕ್ತರಿಗೆ ಸನ್ಮಾನ ಮಾಡಿದ್ದು, ಹೂಗುಚ್ಛ ನೀಡುವ ಫೋಟೋ ವೈರಲ್‌ ಆಗಿದೆ.

ಭೂಷಣ್ ಬೋರಸೆ ಅವರು ಅಧಿಕಾರ ಸ್ವೀಕರಿಸುವ ವೇಳೆ ಹೂಗುಚ್ಛ ನೀಡಿ ಸನ್ಮಾನ ಮಾಡಲಾಗಿದ್ದು ಆಯುಕ್ತರ ಕಚೇರಿಗೆ ಇಂಥವರು ಪ್ರವೇಶಿಸಿದ್ದು ಹೇಗೆ ಅನ್ನೋ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. 

ಇನ್ನು ಆರೋಪಿ ಖೇತ್‌ಸಿಂಗ್ ಮೇಲೆ ಎನ್‌ಡಿಪಿಎಸ್ ಕಾಯ್ದೆ ಅಡಿ ಕೇಸ್ ದಾಖಲಾಗಿದೆ. ಇಂಥವರು ದೊಡ್ಡ ಹುದ್ದೆ ಹೊಂದಿದವರೊಂದಿಗೆ ದೋಸ್ತಿ ಕುದುರಿಸಲು ಸನ್ಮಾನ ಮಾಡಿದ್ದಾರೆ. ರೌಡಿಶೀಟರ್‌ಗಳು, ಪಾತಕಿಗಳು ಸನ್ಮಾನದ ಮೂಲಕ ಮೆಚ್ಚುಗೆ ಪಡೆಯಲು ಯತ್ನಿಸಿದ್ದಾರೆ. ಹೊಸದಾಗಿ ಆಯುಕ್ತರಾಗಿ ಬಂದವರ ಬಳಿ ಇಂಥವರ ಬಗ್ಗೆ ಮಾಹಿತಿ ಇರುವುದಿಲ್ಲ. ಆದರೆ, ಪೊಲೀಸ್ ಆಯುಕ್ತಾಲಯದ ಸಿಬ್ಬಂದಿ ಕಣ್ಣು ಮುಚ್ಚಿ ಕುಳಿತಿದ್ದಾರಾ? ಅನ್ನೋದು ಸಾರ್ವಜನಿಕರ ಪ್ರಶ್ನೆ.

ಅಧಿಕಾರ ವಹಿಸಿಕೊಂಡ ಕೂಡಲೇ ಡ್ರಗ್ ಪೆಡ್ಲರ್‌ಗಳ ವಿರುದ್ಧ ಗುಡುಗಿದ್ದ ಬೋರಸೆ, ಇದೀಗ ಆರೋಪಿಗಳಿಂದಲೇ ಸನ್ಮಾನ ಸ್ವೀಕರಿಸಿದ ಫೋಟೋಗಳು ವೈರಲ್ ಆಗಿರೋದು ಚರ್ಚೆಗೆ ಗ್ರಾಸವಾಗಿದೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಧ್ಯಪ್ರದೇಶದಲ್ಲಿ ವಿಷಪೂರಿತ ಮದ್ಯ ಸೇವಿಸಿ 9 ಮಂದಿ ಸಾವು200ಕ್ಕೂ ಹೆಚ್ಚು ಅಲ್ಪಸಂಖ್ಯಾತ ಮತದಾರರ ಹೆಸರು ಅಳಿಸುವ ಹುನ್ನಾರ – ಬಿಜೆಪಿ ಏಜೆಂಟ್‌ ಬಂಧನಚಲಿಸುತ್ತಿದ್ದ ಕಾರಿಗೆ ಹಿಂಬದಿಯಿಂದ ಮತ್ತೊಂದು ಕಾರು ಡಿಕ್ಕಿ – ಮಹಿಳೆ ಸಾವು, ನಾಲ್ವರಿಗೆ ಗಾಯತಗಡಿನ ಮನೆಗೆ ಬೆಂಕಿ; ಕ್ಷಣಾರ್ಧದಲ್ಲಿ ಸುಟ್ಟು ಕರಕಲಾದ ಗೃಹೋಪಯೋಗಿ ವಸ್ತುಗಳುಇರಾನ್-ಇಸ್ರೇಲ್-ಅಮೆರಿಕ ಯುದ್ಧದ ಎಫೆಕ್ಟ್; ಬೆಂಗಳೂರಿನಲ್ಲಿ ಡ್ರೈ ಫ್ರೂಟ್ಸ್ ಬೆಲೆ ಗಗನಕ್ಕೆಬೆಂಗಳೂರಲ್ಲಿ ಅಹಿಂದ ಸಮಾವೇಶ ಮಾಡುತ್ತಿಲ್ಲ: ಯತೀಂದ್ರ ಸಿದ್ದರಾಮಯ್ಯವಿಟ್ಲಪಿಂಡಿ ಉತ್ಸವ ವೇಳೆ ರಥದಿಂದ ಕೆಳಗೆ ಬಿದ್ದ ಕೃಷ್ಣನ ಮಣ್ಣಿನ ಮೂರ್ತಿಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತದಿಂದ ಮುಖ್ಯ ಶಿಕ್ಷಕ ಸಾವುಸಚಿವ ಬಾಲಕೃಷ್ಣರ ಕಾರು ತಡೆದು, ದೃಷ್ಟಿ ತೆಗೆದು ಊಟಕ್ಕೆ ಕರೆದ ವೃದ್ಧೆಸರ್ಕಾರಿ ಗೋಮಾಳ, ಕೆರೆ ಜಾಗ ಒತ್ತುವರಿ ಆರೋಪ – ನಾಲ್ಕು ಲಾರಿ, ಟ್ರ‍್ಯಾಕ್ಟರ್ ಸೀಜ್