LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

200ಕ್ಕೂ ಹೆಚ್ಚು ಅಲ್ಪಸಂಖ್ಯಾತ ಮತದಾರರ ಹೆಸರು ಅಳಿಸುವ ಹುನ್ನಾರ – ಬಿಜೆಪಿ ಏಜೆಂಟ್‌ ಬಂಧನ

Advertisement
Advertisement
Advertisement

ರಾಂಚಿ: ಜಾರ್ಖಂಡ್‌ನ ಗೋದ್ಡಾ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಬೂತ್‌ ಮಟ್ಟದ ಏಜೆಂಟ್‌ (BLA) ಒಬ್ಬನನ್ನ ಪೊಲೀಸರು ಬಂಧಿಸಿದ್ದಾರೆ.

ವಿನಯ್‌ ಕುಮಾರ್‌ ಮಂಡಲ್‌ ಬಂಧಿತ ಬಿಜೆಪಿ ಏಜೆಂಟ್‌. ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ವೇಳೆ ಸುಮಾರು 200 ಫಾರ್ಮ್‌-7 ಅರ್ಜಿಗಳನ್ನು ಸಲ್ಲಿಸಿ, ಮತದಾರರ ಹೆಸರುಗಳನ್ನ ಪಟ್ಟಿಯಿಂದ ತೆಗೆದುಹಾಕಲು ಯತ್ನಿಸಿದ ಆರೋಪದ ಮೇಲೆ ಬಂಧಿಸಲಾಗಿದೆ. ಬಳಿಕ ಏಜೆಂಟ್‌ನನ್ನ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಗೋದ್ಡಾ ಬ್ಲಾಕ್‌ನ ಪಚ್ರುಖಿ ಗ್ರಾಮದ ಬೂತ್‌ ಸಂಖ್ಯೆ 231ರ ಬೂತ್‌ ಮಟ್ಟದ ಅಧಿಕಾರಿ (BLO) ಹಾಗೂ ದೂರುದಾರರು ನೀಡಿರುವ ಮಾಹಿತಿಯ ಪ್ರಕಾರ, ವಿನಯ್‌ ಮಂಡಲ್‌ ಸಲ್ಲಿಸಿದ ಎಲ್ಲಾ ಅರ್ಜಿಗಳೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮತದಾರರ ಹೆಸರಿನಲ್ಲಿದ್ದವು. ಹೆಸರುಗಳನ್ನ ಅಳಿಸಲು ಅರ್ಜಿ ಸಲ್ಲಿಸಿದವರಲ್ಲಿ BLO ಸಜಿದಾ ಬೀಬಿ ಹಾಗೂ ಅವರ ಪತಿಯ ಹೆಸರೂ ಸೇರಿವೆ.

ವಿನಯ್‌ ವಿರುದ್ಧ ಸೆಪ್ಟೆಂಬರ್‌ 3ರಂದು ಗೋದ್ಡಾ ಮುಫಸ್ಸಿಲ್‌ ಪೊಲೀಸ್‌ ಠಾಣೆಯಲ್ಲಿ FIR ದಾಖಲಿಸಲಾಗಿತ್ತು. ಆತನನ್ನ ‘BLA 2’ ಎಂದು ಗುರುತಿಸಲಾಗಿದ್ದು, ಭಾರತೀಯ ನ್ಯಾಯ ಸಂಹಿತೆಯ (BNS) ನಕಲಿ ದಾಖಲೆ ಸೃಷ್ಟಿ ಹಾಗೂ ಶಾಂತಿ ಭಂಗಕ್ಕೆ ಪ್ರಚೋದಿಸುವ ಉದ್ದೇಶಪೂರ್ವಕ ಅವಮಾನಕ್ಕೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ, ಮತದಾರರ ಪಟ್ಟಿಯ ಸಿದ್ಧತೆ ವೇಳೆ ಸುಳ್ಳು ಘೋಷಣೆಗೆ ಸಂಬಂಧಿಸಿದ ಜನಪ್ರತಿನಿಧಿತ್ವ ಕಾಯ್ದೆಯ ಸೆಕ್ಷನ್‌ 31ರ ಅಡಿಯಲ್ಲೂ ಪ್ರಕರಣ ದಾಖಲಾಗಿದೆ.

ದೂರುದಾರ ಮುಕ್ಕರಂ ಅನ್ಸಾರಿ ಕೂಡ ಬೂತ್‌ ಸಂಖ್ಯೆ 231ರ ಮತದಾರರಾಗಿದ್ದು, ವಿನಯ್‌ ಸಲ್ಲಿಸಿದ್ದ ಫಾರ್ಮ್‌-7 ಅರ್ಜಿಗಳಲ್ಲಿ ಅವರ ಹೆಸರೂ ಇದೆ ಎನ್ನಲಾಗಿದೆ. ತಮ್ಮ ದೂರಿನಲ್ಲಿ ಅನ್ಸಾರಿ, ಮಂಡಲ್‌ ಫಾರ್ಮ್‌-7 ಸಲ್ಲಿಸಿರುವ ಎಲ್ಲ ಮತದಾರರೂ ನಿಜವಾದ ಮತದಾರರು ಎಂದು ತಿಳಿಸಿದ್ದಾರೆ.

ಅನ್ಸಾರಿ ನೀಡಿದ ಮಾಹಿತಿಯ ಪ್ರಕಾರ, ಮಂಡಲ್‌ ಬೂತ್‌ ಸಂಖ್ಯೆ 231ಕ್ಕೆ ಸೇರಿದ ಮತದಾರರ ಹೆಸರಿನ ಸುಮಾರು 200 ಫಾರ್ಮ್‌-7 ಅರ್ಜಿಗಳನ್ನು BLO ಸಜಿದಾ ಬೀಬಿ ಅವರಿಗೆ ಸಲ್ಲಿಸಿದ್ದರು. ಈ ಅರ್ಜಿಗಳ ಮೂಲಕ ನಮ್ಮ ಹೆಸರುಗಳನ್ನ ಮತದಾರರ ಪಟ್ಟಿಯಿಂದ ತೆಗೆಸುವ ಹುನ್ನಾರ ನಡೆಸಿದ್ದರು. ವಿಷಯ ತಿಳಿದ ಬಳಿಕ ನಾವು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ ಎಂದು ಅವರು ಹೇಳಿದ್ದಾರೆ.

ನಂತರ ಮಂಡಲ್‌ ಅವರನ್ನು ಗ್ರಾಮಕ್ಕೆ ಕರೆಸಿ ಅರ್ಜಿಗಳ ಕುರಿತು ವಿಚಾರಣೆ ನಡೆಸಲಾಯಿತು. ಬಿಜೆಪಿ BLAಗಳ ಸಭೆಯ ಬಳಿಕ ಈ ಫಾರ್ಮ್‌ಗಳನ್ನು ತಮಗೆ ನೀಡಲಾಗಿತ್ತು ಎಂದು ಮಂಡಲ್‌ ಹೇಳಿದ್ದಾಗಿ ಅವರು ತಿಳಿಸಿದ್ದಾರೆ.

ಆಗಸ್ಟ್‌ 29ರಂದು ಮಂಡಲ್‌ ಸುಮಾರು 200 ಫಾರ್ಮ್‌-7 ಅರ್ಜಿಗಳನ್ನು ತಮ್ಮ ಬಳಿ ತಂದಿದ್ದರು ಎಂದು BLO ಸಜಿದಾ ಬೀಬಿ ದೃಢಪಡಿಸಿದ್ದಾರೆ. ಸದ್ಯ ಪ್ರಕರಣದ ತನಿಖೆ ಮುಂದುವರಿದಿದೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಧ್ಯಪ್ರದೇಶದಲ್ಲಿ ವಿಷಪೂರಿತ ಮದ್ಯ ಸೇವಿಸಿ 9 ಮಂದಿ ಸಾವು200ಕ್ಕೂ ಹೆಚ್ಚು ಅಲ್ಪಸಂಖ್ಯಾತ ಮತದಾರರ ಹೆಸರು ಅಳಿಸುವ ಹುನ್ನಾರ – ಬಿಜೆಪಿ ಏಜೆಂಟ್‌ ಬಂಧನಚಲಿಸುತ್ತಿದ್ದ ಕಾರಿಗೆ ಹಿಂಬದಿಯಿಂದ ಮತ್ತೊಂದು ಕಾರು ಡಿಕ್ಕಿ – ಮಹಿಳೆ ಸಾವು, ನಾಲ್ವರಿಗೆ ಗಾಯತಗಡಿನ ಮನೆಗೆ ಬೆಂಕಿ; ಕ್ಷಣಾರ್ಧದಲ್ಲಿ ಸುಟ್ಟು ಕರಕಲಾದ ಗೃಹೋಪಯೋಗಿ ವಸ್ತುಗಳುಇರಾನ್-ಇಸ್ರೇಲ್-ಅಮೆರಿಕ ಯುದ್ಧದ ಎಫೆಕ್ಟ್; ಬೆಂಗಳೂರಿನಲ್ಲಿ ಡ್ರೈ ಫ್ರೂಟ್ಸ್ ಬೆಲೆ ಗಗನಕ್ಕೆಬೆಂಗಳೂರಲ್ಲಿ ಅಹಿಂದ ಸಮಾವೇಶ ಮಾಡುತ್ತಿಲ್ಲ: ಯತೀಂದ್ರ ಸಿದ್ದರಾಮಯ್ಯವಿಟ್ಲಪಿಂಡಿ ಉತ್ಸವ ವೇಳೆ ರಥದಿಂದ ಕೆಳಗೆ ಬಿದ್ದ ಕೃಷ್ಣನ ಮಣ್ಣಿನ ಮೂರ್ತಿಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತದಿಂದ ಮುಖ್ಯ ಶಿಕ್ಷಕ ಸಾವುಸಚಿವ ಬಾಲಕೃಷ್ಣರ ಕಾರು ತಡೆದು, ದೃಷ್ಟಿ ತೆಗೆದು ಊಟಕ್ಕೆ ಕರೆದ ವೃದ್ಧೆಸರ್ಕಾರಿ ಗೋಮಾಳ, ಕೆರೆ ಜಾಗ ಒತ್ತುವರಿ ಆರೋಪ – ನಾಲ್ಕು ಲಾರಿ, ಟ್ರ‍್ಯಾಕ್ಟರ್ ಸೀಜ್