ಕೆಲ ದೇಶಗಳ ನೌಕಾ ನೆಲೆಗಳು ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ. ಇದರ ಎಫೆಕ್ಟ್ ಇದೀಗ ಬೆಂಗಳೂರಿನ ಡ್ರೈ ಫ್ರೂಟ್ಸ್ ಮಾರುಕಟ್ಟೆ ಮೇಲೂ ಬಿದ್ದಿದೆ. ಡ್ರೈ ಫ್ರೂಟ್ಸ್ ಸಪ್ಲೈ ಕಡಿಮೆಯಾಗಿದ್ದು, ಬೆಲೆಗಳು ಶೇ.30ರಿಂದ 40ರಷ್ಟು ಏರಿಕೆಯಾಗಿದೆ.
ಇರಾನ್ ಸೇರಿದಂತೆ ಮಧ್ಯಪ್ರಾಚ್ಯ ದೇಶಗಳಿಂದ ರಾಜ್ಯಕ್ಕೆ ಬರುತ್ತಿದ್ದ ಡ್ರೈ ಫ್ರೂಟ್ಸ್ ಸಪ್ಲೈ ಬಹುತೇಕ ಸ್ಥಗಿತವಾಗಿದೆ. ಕಳೆದ ಮೂರು ತಿಂಗಳಿನಿಂದ ಬೆಂಗಳೂರಿಗೆ ಬರುತ್ತಿದ್ದ ಡ್ರೈ ಫ್ರೂಟ್ಸ್‌ನಲ್ಲಿ ಕೊರತೆ ಎದುರಾಗಿದೆ.
ಇರಾನ್ ಸೇರಿದಂತೆ ಮಧ್ಯಪ್ರಾಚ್ಯದ ಹಲವು ದೇಶಗಳು ಡ್ರೈಫ್ರೂಟ್ಸ್ ಉತ್ಪಾದನೆಗೆ ಹೆಸರುವಾಸಿಯಾಗಿವೆ. ಆದರೆ, ಸುಮಾರು ಮೂರು ತಿಂಗಳ ಹಿಂದೆ ನಡೆದ ಇರಾನ್-ಇಸ್ರೇಲ್-ಅಮೆರಿಕ ಯುದ್ಧದ ಎಫೆಕ್ಟ್‌ನಿಂದ ಇರಾನ್‌ನ ಬಂದರ್ ಅಬ್ಬಾಸ್ ಸೇರಿದಂತೆ ಹಲವು ನೌಕಾ ನೆಲೆಗಳು ಹಾನಿಗೊಳಗಾಗಿವೆ. ಇವು ಇನ್ನೂ ಸಂಪೂರ್ಣವಾಗಿ ಸಹಜ ಸ್ಥಿತಿಗೆ ಬಂದಿಲ್ಲ ಎನ್ನಲಾಗುತ್ತಿದೆ.
ಹೀಗಾಗಿ ಇರಾನ್, ಸೌದಿ, ಟುನೀಷಿಯಾ ಸೇರಿದಂತೆ ಮಧ್ಯಪ್ರಾಚ್ಯದ ದೇಶಗಳಿಂದ ಬೆಂಗಳೂರಿಗೆ ಆಮದಾಗುತ್ತಿದ್ದ ಬಹುತೇಕ ಡ್ರೈ ಫ್ರೂಟ್ಸ್ ಸಪ್ಲೈ ಸ್ಥಗಿತವಾಗಿದೆ. ಇನ್ನು ಕೆಲ ಸ್ಥಳಗಳಿಂದ ಬರುತ್ತಿದ್ದ ಸಪ್ಲೈ ಪ್ರಮಾಣವೂ ಕಡಿಮೆಯಾಗಿದೆ. ಇದರ ಜೊತೆಗೆ ಡ್ರೈ ಫ್ರೂಟ್ಸ್‌ನ್ನು ಬೆಂಗಳೂರಿಗೆ ತರಲು ಸುತ್ತಿಕೊಂಡು ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಶಿಪ್ಪಿಂಗ್ ಲೈನ್ ಚಾರ್ಜ್ ಕೂಡ ಡಬಲ್ ಆಗಿದೆ. ಒಂದು ಕಂಟೇನರ್‌ಗೆ ಈ ಹಿಂದೆ 1,500 ಡಾಲರ್ ಇದ್ದ ಚಾರ್ಜ್ ಇದೀಗ 4,000 ಡಾಲರ್‌ಗೆ ಏರಿಕೆಯಾಗಿದೆ. ಇದರ, ಪರಿಣಾಮ ಡ್ರೈ ಫ್ರೂಟ್ಸ್ ಬೆಲೆಯಲ್ಲಿ ಶೇ.30ರಿಂದ 40ರಷ್ಟು ಏರಿಕೆಯಾಗಿದೆ.




