LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಾಲೇಜು ಯುವತಿ ಮೇಲೆ ಅತ್ಯಾಚಾರ ಆರೋಪ

ಬೆಂಗಳೂರು: ನಗರದ ಮಡಿವಾಳ  ಪ್ರದೇಶದಲ್ಲಿ ಕಾಲೇಜು ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ.

ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯಾಗಿರೋ ಯುವತಿ, ಓದಿನ ಜೊತೆಗೆ ಮೋಮೋಸ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಮೋಮೋಸ್ ಅಂಗಡಿ ಮಾಲೀಕರಾದ ಅತುಲ್, ಗೋಷ್ ಎಂಬವರು ಮೇ 11ರಂದು ಯುವತಿಯನ್ನು ಪಾರ್ಟಿಗೆ ಆಹ್ವಾನ ಮಾಡಿದ್ದರು. ಈ ವೇಳೆ ಮೋಮೋಸ್ ಅಂಗಡಿಯನ್ನು ಮಾರಾಟ ಮಾಡಲು ಮುಂದಾಗಿರೋ ವಿಚಾರ ತಿಳಿಸಿ ಹೈನಾಸ್ ಎಂಬ ಮಧ್ಯವರ್ತಿಯನ್ನು ಕರೆದಿದ್ದಾರೆ. ಅಂಗಡಿ ಮಾರಾಟದ ವಿಚಾರ ಚರ್ಚೆ ಮಾಡಿ ನಾಲ್ಕು ಜನ ಪಾರ್ಟಿ ಮಾಡಿದ್ದಾರೆ. 

ಪಾರ್ಟಿ ಬಳಿಕ ಗೋಷ್ ಮತ್ತು ಅತುಲ್ ಊಟ ತರಲು ಹೋಗಿದ್ದ ವೇಳೆ, ಹೈನಾಸ್ ಎಂಬ ಮತ್ತೊಬ್ಬ ವ್ಯಕ್ತಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಆದರೆ ಪೊಲೀಸರು, ಆರೋಪಿಯನ್ನು ಬಂಧಿಸದೇ ಯುವತಿ ಮೇಲೆಯೇ ಅನುಮಾನಪಡುತ್ತಿದ್ದಾರೆ ಎಂದು ಸಂತ್ರಸ್ತ ಯುವತಿ ಪೊಲೀಸರ ಮೇಲೆ ಆರೋಪ ಮಾಡಿದ್ದಾಳೆ. ಘಟನೆ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Advertisement

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಲಮುರಿ ಕಾವೇರಿ ನದಿಯಲ್ಲಿ ಇಬ್ಬರು ಯುವಕರು ಜಲಸಮಾಧಿಸಿದ್ದರಾಮಯ್ಯ ಮುಸ್ಲಿಮರ ಓಲೈಕೆ ಈ ಮಟ್ಟಕ್ಕೆ ಮಾಡುತ್ತಿರೋದು ಅತಿರೇಕ ಆಗ್ತಿದೆ – ಯತ್ನಾಳ್ಸಮಗ್ರ ನೀರಾವರಿಗಾಗಿ ಸತದ ಮೂರನೇ ದಿನಕ್ಕೆ ಪ್ರತಿಭಟನೆ ದುಬಾರೆ ದುರಂತ – ಇಬ್ಬರು ಅರಣ್ಯ ಅಧಿಕಾರಿಗಳ ವಿರುದ್ಧ ಉಪ ಲೋಕಾಯುಕ್ತ ಕೇಸ್ಬಡವರ ಮತಗಳನ್ನು ತೆಗೆಯಲು SIR ಮೂಲಕ ಸಂಚು: ಡಿಕೆಶಿ ಕಿಡಿಬೆಳಗಾವಿ| ಮನೆಯಲ್ಲಿ ಗುಂಡು ಹಾರಿಸಿಕೊಂಡು ವೈದ್ಯ ದಿನೇಶ್ ಭಟ್ಕಳ್ ಆತ್ಮಹತ್ಯೆ51 ಸಾವಿರ ಅತಿಥಿ ಶಿಕ್ಷಕರ ನೇಮಕಾತಿಗೆ ಸರ್ಕಾರ ಆದೇಶ!ಕಾಲೇಜು ಯುವತಿ ಮೇಲೆ ಅತ್ಯಾಚಾರ ಆರೋಪಸಿದ್ದರಾಮಯ್ಯ-ಡಿಕೆಶಿ ನಡುವೆ ಖರ್ಗೆ ಜಗಳ ಮಾಡಿಸ್ತಿದ್ದಾರೆ – ರಾಧಾಮೋಹನ್ ದಾಸ್ಕೇರಳಂ ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಕಾಂಗ್ರೆಸ್‌ ನಾಯಕ ತಿರುವಾಂಚೂರ್ ರಾಧಾಕೃಷ್ಣನ್ ಆಯ್ಕೆ