LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರಧಾನ್‌ ರಾಜೀನಾಮೆ ಬಗ್ಗೆ ನಾಳೆಯವರೆಗೆ ಕೇಂದ್ರ ಸಮಯ ಕೇಳಿದೆ: ಸಿಜೆಪಿ

Advertisement
Advertisement

ನವದೆಹಲಿ: ಮೂರು ಬೇಡಿಕೆಯ ಪೈಕಿ ಕೇಂದ್ರ ಸರ್ಕಾರ ನಮ್ಮ ಎರಡು ಬೇಡಿಕೆಯನ್ನು ಒಪ್ಪಿಕೊಂಡಿದೆ ಎಂದು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಹೇಳಿದೆ.

ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್  ಅವರು ದೆಹಲಿಯ ಕಾನ್‌ಸ್ಟಿಟ್ಯೂಷನ್‌ ಕ್ಲಬ್‌ನಲ್ಲಿ ಸಿಜೆಪಿಯ ಮುಖ್ಯ ವಕ್ತಾರ ಸೌರವ್ ದಾಸ್ ಮತ್ತು ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಅವರೊಂದಿಗೆ ಎರಡನೇ ಸುತ್ತಿನ ಸಭೆ ನಡೆಸಿದರು.

ಈ ವೇಳೆ ಸಿಜೆಪಿ ಧರ್ಮೇಂದ್ರ ಪ್ರಧಾನ್‌ ಅವರನ್ನು ಸಂಪುಟದಿಂದ ತೆಗೆಯಬೇಕು, ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಹಾಕಲಾಗಿರುವ ಕೇಸ್‌ಗಳನ್ನು ಹಿಂದಕ್ಕೆ ಪಡೆಯಬೇಕು ಮತ್ತು ಮತ್ತು ಆತ್ಮಹತ್ಯೆ ಮಾಡಿಕೊಂಡಿರುವ ನೀಟ್‌ ವಿದ್ಯಾರ್ಥಿಗಳ ಕುಟುಂಬಕ್ಕೆ 1 ಕೋಟಿ ಪರಿಹಾರ ಕೊಡಬೇಕೆಂಬ ಬೇಡಿಕೆಯನ್ನು ಮುಂದಿರಿಸಿತು.

ಸಭೆಯ ಬಳಿಕ ಮಾತನಾಡಿದ ವಕ್ತಾರರು, ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ಬಿಟ್ಟು ಉಳಿದ ಎರಡು ಬೇಡಿಕೆ ಈಡೇರಿಸುವ ಸರ್ಕಾರ ಸಕಾರತ್ಮಕವಾಗಿ ಸ್ಪಂದಿಸಿದೆ. ನಾಳೆ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ ಎಂದು ಹೇಳಿದರು.

ಅಶುತೋಷ್ ರಂಕಾ ಪ್ರತಿಕ್ರಿಯಿಸಿ, ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ನಮ್ಮ ಬೇಡಿಕೆಯ ಮೇರೆಗೆ ಸರ್ಕಾರ ನಾಳೆ ಮಧ್ಯಾಹ್ನದವರೆಗೆ ಸಮಯ ಕೇಳಿದೆ. ಸರ್ಕಾರ ಶೀಘ್ರದಲ್ಲೇ ಅವರನ್ನು ವಜಾಗೊಳಿಸುತ್ತದೆ ಎಂದು ನಾವು ಭಾವಿಸುತ್ತೇವೆ. ಆತ್ಮಹತ್ಯೆಯಿಂದ ಸಾವನ್ನಪ್ಪಿದ ನೀಟ್ ಆಕಾಂಕ್ಷಿಗಳ ಕುಟುಂಬಗಳಿಗೆ ಮತ್ತು ಎಫ್‌ಐಆರ್‌ಗಳನ್ನು ಹಿಂಪಡೆಯುವುದು, ವಿದ್ಯಾರ್ಥಿಗಳ ಮೇಲಿನ ಕಾನೂನು ಪ್ರಕರಣಗಳು ಎಂಬ ಎರಡು ಬೇಡಿಕೆಗಳಿಗೆ ಸರ್ಕಾರ ತಾತ್ವಿಕವಾಗಿ ಒಪ್ಪಿಗೆ ನೀಡಿದೆ ಎಂದು ಹೇಳಿದರು.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದಲ್ಲಿ ಭಾರೀ ಅಕ್ರಮ – ಸರ್ಕಾರಕ್ಕೆ 768 ಕೋಟಿ ನಷ್ಟ, ತನಿಖಾ ವರದಿ ಬಹಿರಂಗಬಿಡದಿಗೆ ಹೊರಟಿದ್ದ ನೂರಾರು ರೈತರನ್ನ ಕೊಡಗಿನ ಗಡಿಭಾಗದಲ್ಲೇ ತಡೆದ ಪೊಲೀಸರುಬಿಯರ್ ಸಾಗಿಸುತ್ತಿದ್ದ ಲಾರಿ ಪಲ್ಟಿ – 15 ಲಕ್ಷ ಮೌಲ್ಯದ ಮದ್ಯ ಮಣ್ಣುಪಾಲುಖೋಟಾ ನೋಟು ಚಲಾವಣೆಗೆ ಯತ್ನ – ಇಬ್ಬರು ಅರೆಸ್ಟ್‌SIR ಕರ್ತವ್ಯದಲ್ಲಿದ್ದ ಶಿಕ್ಷಕಿ ಹೃದಯಾಘಾತಕ್ಕೆ ಬಲಿಲೋಕಸಭೆಯಲ್ಲಿ ಮತ್ತೆ ʻನೀಟ್‌ʼ ಗದ್ದಲ – ಸೋಮವಾರದವರೆಗೆ ಕಲಾಪ ಮುಂದೂಡಿಕೆಪ್ರಧಾನ್‌ ರಾಜೀನಾಮೆ ಬಗ್ಗೆ ನಾಳೆಯವರೆಗೆ ಕೇಂದ್ರ ಸಮಯ ಕೇಳಿದೆ: ಸಿಜೆಪಿಪತ್ನಿ ಚೆನ್ನಮ್ಮ ನಿಧನದಿಂದ ದುಃಖದಲ್ಲಿದ್ದಾಗ ಸಾಂತ್ವನ ಹೇಳಿದ ನಾಡಿನ ಜನತೆ, ಪಕ್ಷದ ಕಾರ್ಯಕರ್ತರಿಗೆ ಹೆಚ್‌ಡಿಡಿ ಕೃತಜ್ಞತೆಕೌಟುಂಬಿಕ ಕಲಹಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ – ಪತಿ, ಮಾವ ಪೊಲೀಸರ ವಶಕ್ಕೆಕೂಲಿ ವಿಚಾರಕ್ಕೆ ಗಲಾಟೆ, ಮಾಲೀಕನಿಂದ ಫೈರಿಂಗ್‌ – ಮಗುವಿನ ತಲೆಗೆ ಹೊಕ್ಕ ಗುಂಡು