ಬೆಳಗಾವಿ ನಗರದಲ್ಲಿ ವಾಸಿಸುವ ಶ್ರೀ ಪ್ರವೀಣ ಪಾಟೀಲ ಅವರನ್ನು 33 ವರ್ಷ್ ಕನ್ನಡ ನಾಡು ನುಡಿಗಾಗಿ ಹೋರಾಟದಲ್ಲಿ ಇತಿಹಾಸವಿರುವ ಕನ್ನಡ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷರಾದ ಕೆ ಮಂಜುನಾಥ್ ದೇವ ಅವರು ಕನ್ನಡ ಜಾಗೃತಿ ವೇದಿಕೆಯ ನೂತನ ಬೆಳಗಾವಿ ಜಿಲ್ಲಾಧ್ಯಕ್ಷರಾಗಿ ಶ್ರೀ ಪ್ರವೀಣ ಪಾಟೀಲ ಅವರನ್ನು ಆಯ್ಕೆ ಮಾಡಿ ಅಭಿನಂದನೆಗಳು ಸಲ್ಲಿಸಿದ್ದಾರೆ.
ಶ್ರೀ ಪ್ರವೀಣ ಪಾಟೀಲ ಅವರು ವೃತ್ತಿಯಲ್ಲಿ ಪತ್ರಕರ್ತರು ಹಾಗೂ ಸುಮಾರು ವರ್ಷಗಳಿಂದ ಕನ್ನಡ ನಾಡು, ನುಡಿ, ಭಾಷೆಗಾಗಿ ಹೋರಾಟ ಮಾಡಿದವರು ಹಾಗೂ ಜನರ ಕಷ್ಟ ಸುಖದಲ್ಲಿ ಭಾಗಿಯಾದವರು, ಯುವಕರೊಂದಿಗೆ ಬೆರೆತು ಸಾಕಷ್ಟು ಸಲಹೆ ಸೂಚನೆ, ಮಾರ್ಗದರ್ಶನ ಮಾಡುವುದರ ಜೊತೆಗೆ ಕನ್ನಡ ನಾಡು ನುಡಿಗಾಗಿ ಅನೇಕ ಹೋರಾಟಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ತಮ್ಮ್ ಹೋರಾಟದ ಮೂಲಕ ಯುವ ಜನರ ಮನಸ್ಸನ್ನು ಗೆದ್ದು ಅವರ ಕಷ್ಟ ಸುಖದಲ್ಲಿ ಭಾಗಿಯಾಗಿದ್ದಾರೆ
ಇವರಿಗೆ ಬೆಳಗಾವಿ ಯುವ ಜನತೆ ಹಾಗೂ ಕನ್ನಡ ಜಾಗೃತಿ ವೇದಿಕೆ ಪಧಾಧಿಕಾರಿಗಳ ವತಿಯಿಂದ ಅಭಿನಂದನೆಗಳು ಸಲ್ಲಿಸಿದ್ದಾರೆ



