LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

2ನೇ ಮಗು ಪಡೆದರೆ ₹25 ಸಾವಿರ ಪ್ರೋತ್ಸಾಹಧನ: ನಾಯ್ಡು

Advertisement

ಅಮರಾವತಿ: ಆಂಧ್ರಪ್ರದೇಶದಲ್ಲಿ ಕುಸಿಯುತ್ತಿರುವ ಜನನ ಪ್ರಮಾಣ ಹೆಚ್ಚಿಸಲು ಎರಡನೇ ಮಗು ಪಡೆಯುವ ದಂಪತಿಗೆ ₹25 ಸಾವಿರ 'ಜನನ ಪ್ರೋತ್ಸಾಹಧನ' ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.


ಗುರುವಾರ ಅಧಿವೇಶನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು, 'ರಾಜ್ಯದಲ್ಲಿ ಪ್ರಸ್ತುತ ಒಟ್ಟು ಫಲವಂತಿಕೆ ದರ 1.5ರಷ್ಟಿದ್ದು, ಇದು ನಿಗದಿತ ಮಟ್ಟಕ್ಕಿಂತ ಕಡಿಮೆಯಿದೆ.




ಇದನ್ನು 2.1ಕ್ಕೆ ಏರಿಸುವುದು ಸರ್ಕಾರದ ಉದ್ದೇಶವಾಗಿದೆ' ಎಂದು ಹೇಳಿದ್ದಾರೆ.





'ನಾವು ಹೊಸ ವಿಧಾನವನ್ನು ಪರಿಶೀಲಿಸುತ್ತಿದ್ದೇವೆ. ಎರಡನೇ ಮಗು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯುವ ಪೋಷಕರಿಗೆ ಹೆರಿಗೆಯ ಸಮಯದಲ್ಲಿಯೇ ₹25 ಸಾವಿರ ನೀಡಲಾಗುವುದು. ಇದು ದೊಡ್ಡ ಮಟ್ಟದ ಬದಲಾವಣೆ ತರಲಿದೆ. ಇದು ಸಾಧ್ಯವಾದರೆ, ತುಂಬಾ ಉಪಯುಕ್ತವಾಗಲಿದೆ' ಎಂದು ನಾಯ್ಡು ತಿಳಿಸಿದ್ದಾರೆ.





'ವಯಸ್ಸಾದ ಜನರಿಂದಾಗಿ ಅನೇಕ ದೇಶಗಳು ವಿವಿಧ ಸವಾಲುಗಳನ್ನು ಎದುರಿಸುತ್ತಿವೆ. ರಾಜ್ಯ ಸರ್ಕಾರವು ಮಾರ್ಚ್‌ ಅಂತ್ಯದ ವೇಳೆಗೆ ಜನಸಂಖ್ಯಾ ನಿರ್ವಹಣೆಯ ಕುರಿತು ನೀತಿಯನ್ನು ರೂಪಿಸಿ ಏಪ್ರಿಲ್‌ನಿಂದ ಜಾರಿಗೆ ತರಲು ಚಿಂತನೆ ನಡೆಸಿದೆ' ಎಂದಿದ್ದಾರೆ.



Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೂರ್ನಾಲ್ಕು ದಿನಗಳಿಂದ ಮಳೆ ಬರುತ್ತಿರುವುದರಿಂದ ಆಶಾಭಾವ ಮೂಡಿದೆ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೂಳಿಬೆಂಗಳೂರಲ್ಲಿ ರೌಡಿಶೀಟರ್‌ಗಳ ಮನೆ ಮೇಲೆ ದಾಳಿ – ಮಾರಕಾಸ್ತ್ರಗಳು ಪತ್ತೆಕೊಡಗು ಜಿಲ್ಲೆಯಾದ್ಯಂತ ಉತ್ತಮ ಮಳೆ – ಹಾರಂಗಿ ಜಲಾಶಯಕ್ಕೆ 1,470 ಕ್ಯೂಸೆಕ್ ಒಳಹರಿವುರಾಜ್ಯದ ಹಲವೆಡೆ 2-3 ದಿನ ಮಳೆ ಮುನ್ಸೂಚನೆ; 3 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆಕರ್ತವ್ಯದ ವೇಳೆ ನೌಕಾಪಡೆಯ ಯೋಧ ಹುತಾತ್ಮಜೈಶ್‌ ಉಗ್ರರ ಜೊತೆ ನಂಟು; ಗುಜರಾತಲ್ಲಿ 8 ಮಂದಿ ಅರೆಸ್ಟ್‌ಪತಿಯ ಕೊಂದು ಬಾತ್ ರೂಂನಲ್ಲೇ ಹೂತಿದ್ದ ಪತ್ನಿಬಿಎಲ್‌ಒಗಳೇ ಒಂದು ಅರ್ಜಿಗೆ 50 ರೂಪಾಯಿ ಕೊಟ್ಟು ಕೆಲ ಕಾರ್ಯಕರ್ತರಿಂದ ಭರ್ತಿ ಮಾಡಿಸ್ತಿದ್ದಾರೆ: ಸಾ.ರಾ.ಮಹೇಶ್ ಆರೋಪಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ ಆಸ್ಪತ್ರೆಗೆ ದಾಖಲುSIR ಪ್ರಕ್ರಿಯೆಗೆ ತೆರಳುತ್ತಿದ್ದಾಗ ಅಪಘಾತ – ವಿಎ ಸಾವು ಬದುಕಿನ ನಡುವೆ ಹೋರಾಟ