ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಅತಿ ಹೆಚ್ಚು ಮತಗಳನ್ನು ಕಾಂಗ್ರೆಸ್ ಪಕ್ಷ ಪಡೆಯಲಿದೆ

Mar 31, 2024 - 16:11
 146
Google  News Join WhatsApp Join Telegram Live

ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಅತಿ ಹೆಚ್ಚು ಮತಗಳನ್ನು ಕಾಂಗ್ರೆಸ್ ಪಕ್ಷ ಪಡೆಯಲಿದೆ

Panchayat Swaraj Samachar News Desk.

ಬೆಳಗಾವಿ: ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಬೆಳಗಾವಿ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಕೊರೇಗಲ್ಲಿ, ವಡಗಾಂವ ,ಮಾಜಿಗಾಂವ, ಅನಗೋಳ ,ಪ್ರಕಾಶ್ ಥೇಟರ್, ಶಹಪುರ್ ಮುಂತಾದ ಭಾಗಗಳಲ್ಲಿ ಮತಯಾಚನೆ ರ್ಯಾಲಿ ಮಾಡದರು. ಈ ಸಂದರ್ಭದಲ್ಲಿ ಗೋವಾ ವೇಸ್ ಹತ್ತಿರ ಇರುವ ಸಿಖ್ ಗುರುದ್ವಾರಕ್ಕೆ ಭೇಟಿ ನೀಡಿ ಸಿಖ ಗುರುಗಳ ಆಶೀರ್ವಾದ ಪಡೆದರು.

 ಈ ಸಂದರ್ಭದಲ್ಲಿ ಗುರುದ್ವಾರ ಕಮಿಟಿ ಅವರಿಗೆ ಸ್ವಾಗತ ಕೋರಿ ಅವರ ಚುನಾವಣೆಯಲ್ಲಿ ಯಶಸ್ವಿಯಾಗಲೆಂದು ಸಿಖ್ ಗುರುಗಳಲ್ಲಿ ಪ್ರಾರ್ಥನೆ ಮಾಡಿ ಹಾರೈಸಿದರು. ಇದೇ ಸಂದರ್ಭದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗುರುದ್ವಾರ ಕಮಿಟಿಗೆ ಧನ್ಯವಾದಗಳು ತಿಳಿಸಿದರು.

ಮಜಗಾವ್ ಪ್ರದೇಶದಲ್ಲಿ ಪ್ರಚಾರ ಪ್ರಾರಂಭಿಸಿದ ಮೃಣಾಲ್ ಹೆಬ್ಬಾಳ್ಕರ್ ಪಂಚಾಯತ್ ಸ್ವರಾಜ್ ಸಮಾಚಾರದೊಂದಿಗೆ ಮಾತನಾಡಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ ಪಕ್ಷ ಈ ಬಾರಿ ಅತಿ ಹೆಚ್ಚು ಮತಗಳನ್ನು ಪಡೆಯಲಿದೆ ಮಾನ್ಯ ಮುಖ್ಯಮಂತ್ರಿಗಳ ಸಿದ್ದರಾಮಯ್ಯನವರ ಕಾಂಗ್ರೆಸ್ ಪಕ್ಷದ ಸರ್ಕಾರ 5 ಗ್ಯಾರಂಟಿಗಳನ್ನು ನೀಡಿರುವುದು ಜನರಲ್ಲಿ ಒಂದು ಭರವಸೆಯನ್ನು ಮೂಡಿಸಿದೆ. ನಾವು ಅತಿ ಹೆಚ್ಚು ಮತಗಳ ಅಂತರದಲ್ಲಿ ಕಾಂಗ್ರೆಸ್ ಪಕ್ಷ ಜಯಶಾಲಿಯಾಗಲಿದೆ ಹೇಳಿದರು.

 ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ ದಕ್ಷಿಣ ಮತಕ್ಷೇತ್ರದಲ್ಲಿ ಈ ಬಾರಿ ದಾಖಲೆ ಮತಗಳು ಕಾಂಗ್ರೆಸ್ ಪಕ್ಷದ ಪಾಲಾಗಲಿವೆ ಜೂನ್ 4ನೇ ತಾರೀಕಿಗೆ ಇದರ ಫಲಿತಾಂಶ ನಿಮಗೆ ತಿಳಿಯಲಿದೆ ಎಂದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಹಾಗೂ ಬೆಳಗಾವಿ ಗ್ರಾಮೀಣ ಜನರಲ್ ಸೆಕ್ರೆಟರಿ ಪ್ರದೀಪ್ ಎಂ.ಜಿ‌. ಕೆ. ಪಿ. ಸಿ ಸದಸ್ಯರಾದ ಮಲಗೌಡ ಪಾಟೀಲ್, ಎಸ್ ಎಂ ಬೆಳವಟ್ಕರ್ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಕಾಂಗ್ರೆಸ್ ಪಕ್ಷದ ಮಹಿಳಾ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು

Google News Join Facebook Live 24/7 Help Desk

Tags: