ಕಾಂಗ್ರೆಸ್ ವಿಜಯಕ್ಕೆ ಪ್ರಾರ್ಥಿಸಿ ದೇವಸ್ಥಾನಗಳಿಗೆ ಬೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Mar 28, 2024 - 18:25
 37
Google  News Join WhatsApp Join Telegram Live

ಕಾಂಗ್ರೆಸ್ ವಿಜಯಕ್ಕೆ ಪ್ರಾರ್ಥಿಸಿ ದೇವಸ್ಥಾನಗಳಿಗೆ ಬೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Panchayat Swaraj Samachar News Desk.

ಬೆಳಗಾವಿ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬಹುಮತದಿಂದ ಜಯಗಳಿಸುವಂತೆ ಮತ್ತು ಬೆಳಗಾವಿ ಮತಕ್ಷೇತ್ರದಿಂದ ಸ್ಪರ್ಧಿಸಿದ ಮೃಣಾಲ ಹೆಬ್ಬಾಳ್ಕರ್ ಗೆಲ್ಲುವಂತೆ ಪ್ರಾರ್ಥಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗುರುವಾರ ವಿವಿಧ ಮಠಗಳಿಗೆ ಬೇಟಿ ನೀಡಿ ಪ್ರಾರ್ಥಿಸಿದರು.

ಗೋಕಾಕ ನಗರದ ಶ್ರೀ ಶೂನ್ಯ ಸಂಪಾದನಮಠಕ್ಕೆ ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದರು.

ಈ ಸಮಯದಲ್ಲಿ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ, ಲೋಕಸಭಾ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ್, ಸ್ಥಳೀಯ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದರು.

ಗೋಕಾಕ ತಾಲೂಕಿನ ಕಲ್ಲೋಳಿ ಗ್ರಾಮದ ಹನುಮಾನ ಹಾಗೂ ಮಹಾಲಕ್ಷ್ಮೀ ದೇವಸ್ಥಾನಕ್ಕೆ ತೆರಳಿ, ದರ್ಶನ ಆಶೀರ್ವಾದ ಪಡೆದು, ಸರ್ವರ ಒಳಿತಿಗಾಗಿ ಪ್ರಾರ್ಥಿಸಿದರು.

ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ್ ಮತ್ತಿತರರು ಇದ್ದರು.

Google News Join Facebook Live 24/7 Help Desk

Tags: