ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಡಾ. ಬಿಆರ್ ಅಂಬೇಡ್ಕರ್ ದಲಿತ ಸಂಘಟನೆಗಳ ಒಕ್ಕೂಟ ರಾಜ್ಯ ಸಮಿತಿ ಬೆಂಗಳೂರು ಬಾಹ್ಯ ಬೆಂಬಲ ಘೋಷಣೆ 

May 2, 2024 - 09:21
 101
Google  News Join WhatsApp Join Telegram Live

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಡಾ. ಬಿಆರ್ ಅಂಬೇಡ್ಕರ್ ದಲಿತ ಸಂಘಟನೆಗಳ ಒಕ್ಕೂಟ ರಾಜ್ಯ ಸಮಿತಿ ಬೆಂಗಳೂರು ಬಾಹ್ಯ ಬೆಂಬಲ ಘೋಷಣೆ 

Panchayat Swaraj Samachar News Desk.

ಬೆಳಗಾವಿ: ರಾಜ್ಯಾದ್ಯಂತ ಕಿತ್ತೂರ್ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಸೇರಿದಂತೆ ಎಲ್ಲ 28 ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಪಕ್ಷ ಐ ಎನ್ ಡಿ ಐ ಎ ರಂಗಕ್ಕೆ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡುವಂತೆ, ಡಾ. ಬಿಆರ್ ಅಂಬೇಡ್ಕರ್ ದಲಿತ ಸಂಘಟನೆ ಒಕ್ಕೂಟ ವತಿಯಿಂದ ಬಾಹ್ಯ ಬೆಂಬಲ ನೀಡುತ್ತೇವೆ ಎಂದಿದೆ‌.

 ಬೆಳಗಾವಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಒಕ್ಕೂಟ ಸಂಘಟನೆಯ ಅಧ್ಯಕ್ಷರಾದ ಶ್ರೀಧರ್ ಕಲವೀರ ಭಾರತೀಯ ಜನತಾ ಪಕ್ಷ ಸಂವಿಧಾನ ಬದಲಾವಣೆ ಕುರಿತು ಮಾತನಾಡುತ್ತಿರುವುದು ಮತ್ತು ದೇಶದಲ್ಲಿ ದ್ವೇಷ ಭಾವನೆ ಬೆಳೆಸುತ್ತಿರುವುದು ಹಾಗೂ ಧರ್ಮ ಜಾತಿಗಳ ನಡುವೆ ದ್ವೇಷ ಹೊತ್ತುತ್ತಿರುವ ಕಾರಣದಿಂದಾಗಿ ರಾಜ್ಯದ ಎಲ್ಲಾ ದಲಿತ ಸಂಘಟನೆಗಳು ಒಮ್ಮತದ ನಿರ್ಣಯದ ಅಂಗವಾಗಿ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳಿಗೆ ಬಾಹ್ಯ ಬೆಂಬಲವನ್ನು ನೀಡಲು ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.

 ಈ ಸಂದರ್ಭದಲ್ಲಿ ಸಮುದಾಯದ ಮುಖಂಡ ಮಲ್ಲೇಶ್ ಚೌಗಲ, ಸುರೇಶ್ ತಳವಾರ, ಮಹದೇವ್ ತಳವಾರ, ಎಂ ಗೋವಿಂದರಾಜ್ ರಾಜ್ಯ ಕಾರ್ಯದರ್ಶಿಗಳು , ಎಂ ಗುರುಮೂರ್ತಿ ಶಿವಮೊಗ್ಗ ರಾಜ್ಯ ಸಂಚಾಲಕರು , ಅಶ್ವಥ್ ನಾರಾಯಣ್ ಅಂತ್ಯಜ ರಾಜ್ಯಾಧ್ಯಕ್ಷರು, ರಾಜಗೋಪಾಲ್ ಡಿ.ಎಸ ಭೀಮ ಆರ್ಮಿ, ಭಾರತ ಏಕತಾ ಮಿಷನ್ ರಾಜ್ಯಾಧ್ಯಕ್ಷರು , ಎ ಗೋಪಾಲ್ ದಲಿತ ಸಂಘರ್ಷ ಸೇನೆ ಬೆಂಗಳೂರು, ರಾಜ್ಯಾಧ್ಯಕ್ಷರು 

ನಾರಾಯಣ್ ದಾಸ್ ,ರಾಜ್ಯ ಸಂಯೋಜಕರು ಕೃಷ್ಣದಾಸ್ ಜಿಲ್ಲಾ ಸಂಚಾಲಕರು ದಲಿತ ಸಂಘರ್ಷ ಸಮಿತಿ ಹಾಸನ್, ಪ್ರಕಾಶ್ ಬೀರಾವರ್ ಭಾರತೀಯ ದಲಿತ ಸಂಘರ್ಷ ಸಮಿತಿ ಚಿತ್ರದುರ್ಗ ನಂದು ಕುಮಾರ್ ರಾಜ್ಯಾಧ್ಯಕ್ಷರು ಜೈ ಭೀಮ್ ಅಂಬೇಡ್ಕರ್ ಸೇನೆ ಜಯಪ್ರಕಾಶ್ ಭಾರತೀಯ ಪ್ರಜಾ ಸಂಘ ಬೆಂಗಳೂರು ಡಿ ಮುಕುಂದನ್ ರಾಜ್ಯಾಧ್ಯಕ್ಷರು ದಲಿತ ಸಂಘ ಸಮಿತಿ ಬೆಂಗಳೂರು.

Google News Join Facebook Live 24/7 Help Desk

Tags: