ಕೆಪಿಎಸ್‌ಸಿ ನೇಮಕಾತಿ ಅಕ್ರಮ ಬಯಲಿಗೆ ಬಾರದೇ ಇರಲು ಸರ್ಕಾರದಿಂದಲೇ ಕಡತ ಕಳ್ಳತನ : ಬಿಜೆಪಿ ಕಿಡಿ

Mar 31, 2024 - 10:11
 13
Google  News Join WhatsApp Join Telegram Live

ಕೆಪಿಎಸ್‌ಸಿ ನೇಮಕಾತಿ ಅಕ್ರಮ ಬಯಲಿಗೆ ಬಾರದೇ ಇರಲು ಸರ್ಕಾರದಿಂದಲೇ ಕಡತ ಕಳ್ಳತನ : ಬಿಜೆಪಿ ಕಿಡಿ

Panchayat Swaraj Samachar News Desk.

ಬೆಂಗಳೂರು: ಕೆಪಿಎಸ್‌ಸಿ ನೇಮಕಾತಿಯಲ್ಲಿ ಬಹುದೊಡ್ಡ ಅಕ್ರಮ ನಡೆದಿದೆ. ನೇಮಕಾತಿ ಪಟ್ಟಿಯೇ ನಾಪತ್ತೆ ಆಗಿರುವುದೇ ಇದಕ್ಕೆ ಸಾಕ್ಷಿ ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿದೆ.

ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಬಿಜೆಪಿ, ಕಲೆಕ್ಷನ್‌, ಕಮಿಷನ್‌, ಟ್ರಾನ್ಸ್‌ಫರ್‌ ದಂಧೆ ನಡೆಸುತ್ತಿರುವ ಮಜಾವಾದಿ ಸಿದ್ದರಾಮಯ್ಯ ಸರ್ಕಾರ, ಇದೀಗ ಕೆಪಿಎಸ್‌ಸಿ ನೇಮಕಾತಿಯಲ್ಲೂ ಅಕ್ರಮ ನಡೆಸಿದೆ. ಈ ಅಕ್ರಮ ಬಯಲಿಗೆ ಬರಬಾರದು ಎಂದು ನೇಮಕಾತಿ ಪಟ್ಟಿಯನ್ನೇ ಕಳ್ಳತನ ಮಾಡಿ ನಾಪತ್ತೆ ಆಗಿದೆ ಎಂದು ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದೆ ಎಂದು ಆರೋಪಿಸಿದೆ.

ಮಜಾವಾದಿ ಸರ್ಕಾರ ಅಧಿಕಾರದಲ್ಲಿದ್ದಾಗ ಸರ್ಕಾರಿ ಕಡತಗಳು ಸುಟ್ಟು ಹೋಗುವುದು, ನಾಪತ್ತೆ ಆಗುವುದು ಸಾಮಾನ್ಯವಾಗಿ ಬಿಟ್ಟಿದೆ. ಕಡತಗಳು ದೊರೆತರೇ ಮಾತ್ರ ಕಳ್ಳರು ಸಿಕ್ಕು ಬೀಳುತ್ತಾರೆ. ಕಡತವೇ ಇಲ್ಲ ಎಂದರೆ, ಕಳ್ಳರು ರಾಜಾರೋಷವಾಗಿ ಓಡಾಡಬಹುದು ಎನ್ನುವುದೇ ಸ್ಲೀಪಿಂಗ್ ಸರ್ಕಾರ ದ ಮೂಲ ಮಂತ್ರ ಎಂದು ಹೇಳಿದೆ.

Google News Join Facebook Live 24/7 Help Desk

Tags: