ಕಬ್ಬು ಕಟಾವುದಾರರ ದರ ಹೆಚ್ಚಳಕ್ಕೆ ಆಗ್ರಹ

Apr 2, 2024 - 10:18
 18
Google  News Join WhatsApp Join Telegram Live

ಕಬ್ಬು ಕಟಾವುದಾರರ ದರ ಹೆಚ್ಚಳಕ್ಕೆ ಆಗ್ರಹ

Panchayat Swaraj Samachar News Desk.

ಬೆಳಗಾವಿ: ಕಬ್ಬು ಕಟಾವುದಾರರ ದರ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿದ ಸ್ವಾಭಿಮಾನಿ ಕಬ್ಬು ಕಟಾವು ಸಂಘಟನೆ ವತಿಯಿಂದ ಮನವಿ ಸಲ್ಲಿಸಿದರು.

ಮಹಾರಾಷ್ಟ್ರದಿಂದ ಬರುವ ಕಬ್ಬು ಕಟಾವು ಗಾರರ ಕೂಲಿ ಕಾರ್ಮಿಕರ ಕಬ್ಬು ಕಟ್ವ ದರವನ್ನು ಹೆಚ್ಚಳ ಮಾಡಬೇಕೆಂದು ಸ್ವಾಭಿಮಾನಿ ಶುಗರ್ ಕೇನ್ ಹಾರ್ವೆಸ್ಟ್ ಆಂಡ ಟ್ರಾನ್ಸಪೋರ್ಟ್ ಆರ್ಗನೈಜೇಷನ್ ಮಹರಾಷ್ಟ್ರ ಆಂಡ ಕರ್ನಾಟಕ ವತಿಯಿಂದ ಆಯುಕ್ತರು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಕಬ್ಬು ಕಟ್ಟಾವದಾರರಿಗೆ ಆಗುತ್ತಿರುವ ತೊಂದರೆಯನ್ನು ತಿಳಿಸಿ ಮನವಿ ಸಲ್ಲಿಸಿದರು.

 ಸಂಘಟನೆಯ ರಾಜ್ಯ ಸಚಿವರಾದ ಪ್ರವೀಣ್ ಕುಮಾರ್ ಶೆಟ್ಟಿ ಸುದ್ದಿಗಾರರೊಂದಿಗೆ ಮಾತನಡಿ ರಾಷ್ಟ್ರೀಯ ನಾಯಕರಾದ ಸ್ವಾಭಿಮಾನಿ ರೈತ ಮುಖಂಡರಾದ ರಾಜು ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ನಾವಿಲ್ಲಿ ಆಗಮಿಸಿದ್ದೇವೆ. ಅದರಂತೆ ಮಹಾರಾಷ್ಟ್ರದಿಂದ ಕರ್ನಾಟಕ ಹಾಗೂ ಕರ್ನಾಟಕದ ಗಡಿ ಭಾಗಗಳಲ್ಲಿ ಅನೇಕ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಕಟಾವು ತಂಡಗಳು ಬರುತ್ತವೆ ಅದರಂತೆ ಕಬ್ಬು ಕಟಾವು ಗೋಸ್ಕರ ಪ್ರತೀ ಮೂರು ವರ್ಷದಲ್ಲಿ ಕಬ್ಬು ಕಟಾವು ದರವನ್ನು ಹೆಚ್ಚಳ ಮಾಡಲಾಗುತ್ತದೆ ಈ ವರ್ಷ 34% ರಷ್ಟು ಹೆಚ್ಚಳ ಮಾಡಲಾಗಿದೆ. ಅದರಂತೆ ಎಲ್ಲಾ ಸಕ್ಕರೆ ಕಾರ್ಖಾನೆಗಳು ಹಾಗೂ ಸರ್ಕಾರಿ ಹತ್ರ ಕಾರ್ಖಾನೆಗಳು ಈ ದರವನ್ನು ನಿದ್ದಿ ಪಡಿಸಬೇಕು ಅದರಂತೆ 366 ಮತ್ತು 20 ಪರ್ಸೆಂಟ್ ಕಮಿಷನ್ ಆಧಾರೀಸಿ 73.20 ಒಟ್ಟು 439.29 ದರ ನೀಡಬೇಕಾಗಿದೆ ಈ ಧರ ವನ್ನು ಕರ್ನಾಟಕ ಎಲ್ಲಾ ಸಕ್ಕರೆ ಕಾರ್ಖಾನೆಗಳು ಮಂಜೂರು ಮಾಡಬೇಕು ಎಂದು ಸ್ವಾಭಿಮಾನಿ ಶುಗರ್ ಕೇನ್ ಹಾರ್ವೆಸ್ಟಿಂಗ್ ಸಂಘಟನೆ ವತಿಯಿಂದ ಬೆಳಗಾವಿ ರೈತರು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

 ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಬ್ಬು ಕಟಾವು ಸಂಘಟನೆ ಅಧ್ಯಕ್ಷರಾದ ರಾಜು ಪಾಟೀಲ, ಮಹಾರಾಷ್ಟ್ರ ರಾಜ್ಯದ ಕಬ್ಬು ಕಟಾವು ಸಂಘಟನೆಯ ಪ್ರಮುಖರಾದ, ರಾವ ಸಾಹೇಬ್ ಅಪಠಾಣ, ತನಜಿ ಪಾಟೀಲ, ವಿದ್ಯಾಸಾಗರ್ ಪಾಟೀಲ, ಸಾಗರ್ ಬೇಡಿಕೆಹಾಳ, ವಿನೋದ್ ಪಾಟೀಲ, ಮುಂತಾದವರು ಉಪಸ್ಥಿತರಿದ್ದರು

Google News Join Facebook Live 24/7 Help Desk

Tags: