LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ತೇರದಾಳ ಜಾತ್ರೆಯಲ್ಲಿ ಕುಸ್ತಿ ಹಬ್ಬ: ಇರಾನ್, ರಷ್ಯಾ ಪೈಲ್ವಾನರನ್ನು ಮಣಿಸಿದ ದೇಸಿ ಮಲ್ಲರು!

Advertisement

ಬಾಗಲಕೋಟೆ: ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ತೇರದಾಳದ ಶ್ರೀ ಅಲ್ಲಮಪ್ರಭು ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಾವಳಿಗಳು  ಅತ್ಯಂತ ರೋಮಾಂಚಕಾರಿಯಾಗಿ ಜರುಗಿದ್ದು, ಸಾವಿರಾರು ಕ್ರೀಡಾಭಿಮಾನಿಗಳನ್ನು ರಂಜಿಸಿತು

ಕಳೆದ ವರ್ಷ ಮಳೆಯಿಂದಾಗಿ ಕುಸ್ತಿ ರದ್ದಾಗಿ ನಿರಾಸೆಗೊಂಡಿದ್ದ ಪ್ರೇಕ್ಷಕರಿಗೆ ಈ ಬಾರಿಯ ಮೈದಾನದ ಸೆಣಸಾಟಗಳು ಕಣ್ಣಿಗೆ ಹಬ್ಬವನ್ನು ಉಂಟುಮಾಡಿದವು. ಅದರಲ್ಲೂ ಅಂತರರಾಷ್ಟ್ರೀಯ ಮಟ್ಟದ ಪೈಲ್ವಾನರ ನಡುವಿನ ಅಂತಿಮ ಮೂರು ಪಂದ್ಯಗಳು ಪ್ರೇಕ್ಷಕರು ಉಸಿರು ಬಿಗಿಹಿಡಿದು ನೋಡುವಂತೆ ಮಾಡಿದವು.

ಮುಂಬೈನ ಪೈಲ್ವಾನ್ ಗಣೇಶ್ ಜಗತಾಪ್ ಅವರು ಇರಾನ್ ದೇಶದ ಖ್ಯಾತ ಪೈಲ್ವಾನ್ ಅಲಿ ಇರಾನಿ ಅವರನ್ನು ಕೇವಲ 3 ನಿಮಿಷಗಳಲ್ಲಿ ಚಿತ್ ಮಾಡುವ ಮೂಲಕ ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಂಡರು.

ಪುಣೆಯ ಪೈಲ್ವಾನ್ ಪೃಥ್ವಿರಾಜ್ ಮೋಹಳ ಅವರು ರಷ್ಯಾ ಪ್ರಸಿದ್ಧ ಪೈಲ್ವಾನ್ ಜಬರ್ ಅಲಿ ವಿರುದ್ಧ ಭರ್ಜರಿ ಜಯಗಳಿಸಿ, ವಿದೇಶಿ ಮಲ್ಲನಿಗೆ ಸೋಲಿನ ರುಚಿ ತೋರಿಸಿದರು.

ಕೊಲ್ಲಾಪುರದ ಪ್ರಸಿದ್ಧ ಪೈಲ್ವಾನ್ ಸಿಕಂದರ್ ಶೇಕ್ ಮತ್ತು ಇರಾನ್‌ನ ಅಮಿರ್ ಮಹ್ಮದ್ ಹುಸೈನ್ ನಡುವಿನ ಸುಮಾರು 10 ನಿಮಿಷಗಳ ಸೆಣಸಾಟ ಮೈದಾನದಲ್ಲಿ ತೀವ್ರ ಕುತೂಹಲ ಮೂಡಿಸಿತ್ತು. ಹಲವು ಬಾರಿ ಸೋಲಿನ ಅಂಚಿಗೆ ಹೋದರೂ ಎದೆಗುಂದದೆ ಕಠಿಣ ಪೈಪೋಟಿ ನೀಡಿದ ಸಿಕಂದರ್ ಶೇಕ್, ಅಂತಿಮವಾಗಿ ಇರಾನ್ ಪೈಲ್ವಾನ್‌ನನ್ನು ಮಣ್ಣು ಮುಕ್ಕಿಸಿ ವಿಜಯ ಪತಾಕೆ ಹಾರಿಸಿದರು. 

ಸಿಕಂದರ್ ಶೇಕ್ ಅವರ ಈ ರೋಚಕ ಗೆಲುವನ್ನು ಪ್ರೇಕ್ಷಕರು ಕೇಕೆ-ಶಿಳ್ಳೆಗಳ ಮೂಲಕ ಅದ್ಧೂರಿಯಾಗಿ ಸಂಭ್ರಮಿಸಿದರು. ಇದೇ ವೇಳೆ ಮೈದಾನಕ್ಕೆ ಆಗಮಿಸಿದ ಸ್ಥಳೀಯ ಶಾಸಕ ಸಿದ್ದು ಸವದಿ ಅವರು ವಿಜೇತ ಪೈಲ್ವಾನ್ ಸಿಕಂದರ್ ಶೇಕ್ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.

ಜಾತ್ರೆಗೆ ನೆರೆಹೊರೆಯ ಜಿಲ್ಲೆ ಹಾಗೂ ರಾಜ್ಯಗಳಿಂದ ಆಗಮಿಸುವ ಭಕ್ತರು ಮತ್ತು ಕ್ರೀಡಾಭಿಮಾನಿಗಳಿಗೆ ಸಾರಿಗೆ ತೊಂದರೆಯಾಗದಂತೆ ಹೆಚ್ಚುವರಿ ಬಸ್‌ಗಳನ್ನು ಒದಗಿಸುವಂತೆ ಸಾಮಾಜಿಕ ಕಾರ್ಯಕರ್ತ ಶರತ್ ಬಾಳಿಕಾಯಿ ಅವರು ಸಾರಿಗೆ ಇಲಾಖೆಯ ಡಿಪೋ ಮ್ಯಾನೇಜರ್‌ಗೆ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿ ಸುಗಮ ಸಾರಿಗೆ ವ್ಯವಸ್ಥೆ ಕಲ್ಪಿಸಿದ್ದಕ್ಕಾಗಿ ಅವರು ಡಿಪೋ ಮ್ಯಾನೇಜರ್‌ಗೆ ವಿಶೇಷ ಧನ್ಯವಾದ ಅರ್ಪಿಸಿದರು.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವೀಡಿಯೋ ವೈರಲ್ ಬಳಿಕ ತಂದೆ, ಸಹೋದರನಿಂದ ಯುವತಿಯ `ಮರ್ಯಾದಾ ಹತ್ಯೆ’ – ಅಪಘಾತದಂತೆ ಬಿಂಬಿಸಲು ಯತ್ನಬಯಲುಸೀಮೆಯ ಬಹುದಿನದ ಕನಸು ನನಸು – ಕೋಟೆ ನಾಡು ಪ್ರವೇಶಿಸಿದ ಭದ್ರಾ ನೀರುರಾಜ್ಯದ ವಿಜ್ಞಾನ ಕೇಂದ್ರಗಳಲ್ಲಿ ‘ವಿದ್ಯಾರ್ಥಿ–ವಿಜ್ಞಾನಿ ಸಂವಾದ’ಕ್ಕೆ ಇಸ್ರೋ ಸಹಕಾರ ಕೋರಿದ ಸಚಿವ ಅಜಯ್ ಸಿಂಗ್ಈ ಬಾರಿ ಮೈಸೂರು ದಸರಾ ಮೆರವಣಿಗೆಯಲ್ಲಿ ನಟ – ನಟಿಯರು ಭಾಗಿಭಾರತ ರತ್ನ ಪ್ರೊ. ಸಿಎನ್‌ಆರ್‌ ರಾವ್‌ಗೆ ಎಸ್‌ಐಆರ್ ನೋಟಿಸ್ ಜಾರಿ ಮಾಡಿಲ್ಲ: ಜಿಬಿಎ ಸ್ಪಷ್ಟನೆ`ದೃಢ ಕರ್ನಾಟಕದ ಸಂಕಲ್ಪ’: ಸರ್ಕಾರದ 100 ದಿನಗಳ ಯಶಸ್ವಿ ಆಡಳಿತ; ವಿಧಾನಸೌಧದಲ್ಲಿ `ಶತಕದ ಪಥ, ಪ್ರಗತಿಯ ರಥ’ ವಿಶೇಷ ಕಾರ್ಯಕ್ರಮಮಂತ್ರಾಲಯ ರಾಯರ ಮಠದಲ್ಲಿ ದಾಖಲೆ ಮಟ್ಟದ ಕಾಣಿಕೆ ಸಂಗ್ರಹ – 16 ದಿನದಲ್ಲಿ 3.30 ಕೋಟಿ ರೂ. ಕಾಣಿಕೆ ನೀಡಿದ ಭಕ್ತರುತನಿಖಾ ಸಂಸ್ಥೆಗಳಿಂದ ಇನ್ನಷ್ಟು ಕ್ರಮ ಆಗೋ ಸಾಧ್ಯತೆ – ಎಲ್ಲ ಶಾಸಕರು, ಸಚಿವರಿಗೆ ಎಚ್ಚರಿಕೆ ನೀಡಿದ್ದೇನೆ: ಡಿಕೆಶಿಕರ್ನಾಟಕದ ರೈಲು ಜಾಲಕ್ಕೆ ಹೊಸ ಬಲ – 10 ಸಾವಿರ ಕೋಟಿ ಮೊತ್ತದ ಎರಡು ರೈಲ್ವೆ ಯೋಜನೆಗಳಿಗೆ ಕೇಂದ್ರ ಅನುಮೋದನೆಡಾ. ವಿಷ್ಣುವರ್ಧನ್ ಅಮೃತ ಮಹೋತ್ಸವ: ಬಹುಭಾಷಾ ತಾರೆಯರ ಸಮಾಗಮ