LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಚನ ಸಾಹಿತ್ಯ ಬದುಕಿನ ಮೌಲ್ಯಶಿಕ್ಷಣ ನೀಡುತ್ತದೆ: ಸುಷ್ಮಾ ಒಡೆಯರ

Advertisement

ಬಿ.ವಿ.ವಿ. ಸಂಘದ ಅಕ್ಕಮಹಾದೇವಿಮಹಾವಿದ್ಯಾಲಯದಲ್ಲಿ ಡಾ. ಫ. ಗು. ಹಳಕಟ್ಟಿ ಅವರ ಜನ್ಮದಿನ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ

ಬಾಗಲಕೋಟೆ, : ಮನುಷ್ಯ ಸಮಾಜಕ್ಕೆ ಬದುಕಿನ ಮೌಲ್ಯಗಳನ್ನು ಬೋಧಿಸಿರುವುದು ವಚನ ಸಾಹಿತ್ಯವಾಗಿದ್ದು, ವಿದ್ಯಾರ್ಥಿಗಳು ವಚನ ಸಾಹಿತ್ಯವನ್ನು ಅಧ್ಯಯನ ಮಾಡುವುದು ಅಗತ್ಯವಾಗಿದೆ ಎಂದು ಬಿ.ವಿ.ವಿ. ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯೆ ಸುಷ್ಮಾ ಒಡೆಯರ ಹೇಳಿದರು.
ನಗರದ ಬಿ.ವಿ.ವಿ. ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಐಕ್ಯೂಎಸಿ ಹಾಗೂ ಕನ್ನಡ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಡೆದ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಅವರ ಜನ್ಮದಿನ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಕನ್ನಡ ಪ್ರಾಧ್ಯಾಪಕ ಡಾ. ಜಿ. ಐ. ನಂದಿಕೋಲಮಠ ಅವರು, ಡಾ. ಫ. ಗು. ಹಳಕಟ್ಟಿಯವರ ಜೀವನ, ಸಾಹಿತ್ಯ ಸೇವೆ ಹಾಗೂ ವಚನ ಸಾಹಿತ್ಯ ಸಂರಕ್ಷಣೆಯಲ್ಲಿ ಅವರ ಮಹತ್ವದ ಕೊಡುಗೆಯನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಅಲ್ಲದೇ, ವಿದ್ಯಾರ್ಥಿಗಳಲ್ಲಿ ವಚನ ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸುವ ಉದ್ದೇಶದಿಂದ ಮಹಾವಿದ್ಯಾಲಯದಲ್ಲಿ ವಚನ ಪಠಣ ಹಾಗೂ ವಚನ ಸಾಹಿತ್ಯ ಪ್ರಬಂಧ ರಚನೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಚನ ಗಾಯನದ ಮೂಲಕ ಎಲ್ಲರ ಗಮನ ಸೆಳೆದರು.
ಈ ಸಂದರ್ಭದಲ್ಲಿ ಐಕ್ಯೂಎಸಿ ಸಂಯೋಜಕಿ ಪಿ. ಕೆ. ಚೌಗಲಾ, ಉಪನ್ಯಾಸಕರಾದ ಎ. ವಿ. ಪುರಾಣಿಕಮಠ, ಎಸ್. ಕೆ. ಹಿರೇಮಠ ಸೇರಿದಂತೆ ಬೋಧಕ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇದೇ ಜೂಲೈ 4 ರಂದು ಬಿ.ವಿ.ವಿ.ಸಂಘದ ಎಸ್.ಸಿ. ನಂದಿಮಠ ಕಾನೂನು ಮಹಾವಿದ್ಯಾಲಯದ ಪದವಿ ಪ್ರದಾನ ಸಮಾರಂಭವಚನ ಸಾಹಿತ್ಯ ಬದುಕಿನ ಮೌಲ್ಯಶಿಕ್ಷಣ ನೀಡುತ್ತದೆ: ಸುಷ್ಮಾ ಒಡೆಯರವಚನ ಸಾಹಿತ್ಯ ಉಳಿಸಿ ಬೆಳೆಸಿದ ಮಹನೀಯ ಡಾ. ಫ.ಗು. ಹಳಕಟ್ಟಿ: ಕಮಲಾ ರುದ್ರಾಕ್ಷಿಸಾರಿಗೆ ನೌಕರರಿಗೆ ಸಿಹಿ ಸುದ್ದಿ – ಈ ತಿಂಗಳಿನಿಂದಲೇ ಅಕೌಂಟ್‌ಗೆ ಪರಿಷ್ಕೃತ ವೇತನ ಜಮೆಬೆಳಗಾವಿಯಲ್ಲಿ ಜುಲೈ 10 ರಿಂದ ಆರ್‌ಎಸ್‌ಎಸ್ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ವಾರ್ಷಿಕ ಸಭೆಕಲ್ಲು ಕ್ವಾರಿ ದುರಂತ – ಮೃತರ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಲಿ: ಹೆಚ್‌ಡಿಕೆಬದುಕು ಕಟ್ಟಿಕೊಳ್ಳಲು ಬಂದಿದ್ದ ಯಾದಗಿರಿ ಕಾರ್ಮಿಕ ಕಲ್ಲು ಕ್ವಾರಿ ದುರಂತದಲ್ಲಿ ಸಾವುಸತೀಶ್ ಕಡತನಮಲೆಗೆ ಶಾಕ್ – ಬಿಜೆಪಿಯಿಂದ 6 ವರ್ಷ ಉಚ್ಚಾಟನೆಕಲ್ಲು ಕ್ವಾರಿ ದುರಂತ – ಅಧಿಕೃತ ವರದಿ ಬಂದ ಬಳಿಕ ಕ್ರಮಗಳ ಬಗ್ಗೆ ತೀರ್ಮಾನ: ಡಿಕೆಶಿಚಿಕ್ಕಮಗಳೂರು ಕೋರ್ಟ್‌ಗೆ ಬಾಂಬ್‌ ಬೆದರಿಕೆ – ಕಲಾಪ ನಿಲ್ಲಿಸದೇ ತಪಾಸಣೆಗೆ ಸೂಚಿಸಿದ ಜಡ್ಜ್‌