LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಸಂತೋಷ್‌ ಲಾಡ್‌ ಕಣ್ಣೀರು

ಬೆಂಗಳೂರು: ಸಿಎಂ ಸಿದ್ದರಾಮಯ್ಯ  ರಾಜೀನಾಮೆಗೆ ಸಚಿವ ಸಂತೋಷ್‌ ಲಾಡ್‌ ಕಣ್ಣೀರಿಟ್ಟಿದ್ದಾರೆ.

ರಾಜೀನಾಮೆಗೂ ಮುನ್ನ ಸಚಿವರ ಜೊತೆ ಸಿಎಂ ಸಿದ್ದರಾಮಯ್ಯ ಇಂದು ಬ್ರೇಕ್‌ಫಾಸ್ಟ್‌ ಸಭೆ ನಡೆಸಿದರು. ಈ ವೇಳೆ ತಮ್ಮ ರಾಜೀನಾಮೆಯನ್ನು ಸಹ ಘೋಷಣೆ ಮಾಡಿದರು. ಮುಂದಿನ ಸಿಎಂ ಡಿ.ಕೆ.ಶಿವಕುಮಾರ್‌ ಎಂದು ಘೋಷಿಸಿ, ಅವರಿಗೆ ಸಹಕಾರ ನೀಡುವಂತೆ ಸಚಿವರಲ್ಲಿ ಸಿದ್ದರಾಮಯ್ಯ ಮನವಿ ಮಾಡಿಕೊಂಡರು. 

ಸಿದ್ದರಾಮಯ್ಯ ರಾಜೀನಾಮೆ ಘೋಷಣೆ ಕೇಳಿ ಸಭೆಯಲ್ಲೇ ಆಪ್ತ ಸಚಿವರು ಕಣ್ಣೀರಿಟ್ಟರು. ಸಭೆ ಬಳಿಕ ಒಬ್ಬೊಬ್ಬರಾಗಿ ಹೊರಬಂದ ಸಚಿವರ ಮುಖದಲ್ಲಿ ಬೇಸರದ ಭಾವ ಕಂಡುಬಂದಿತು. ಸಿಎಂ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ರಾಜೀನಾಮೆ ಕುರಿತು ಸಚಿವ ಸಂತೋಷ್‌ ಲಾಡ್‌ ಬಳಿ ಮಾಧ್ಯಮದವರು ಪ್ರಶ್ನೆ ಕೇಳಿದರು. ಈ ವೇಳೆ, ಗದ್ಗದಿತರಾದ ಸಂತೋಷ್‌ ಲಾಡ್‌ ದುಃಖ ತಡೆಯಲಾಗದೇ ಕಣ್ಣೀರಿಟ್ಟರು. ಯಾವುದೇ ಪ್ರತಿಕ್ರಿಯೆ ನೀಡದೇ ಕಾರಲ್ಲಿ ಹೊರಟುಹೋದರು.

Advertisement

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾಂಗ್ರೆಸ್‌ನಿಂದ ಹಿಂದುಳಿದವರಿಗೆ ನಂಬಿಕೆ ದ್ರೋಹ – ಬೊಮ್ಮಾಯಿಬಳ್ಳಾರಿ ಪೊಲೀಸರ ಕಾರ್ಯಾಚರಣೆ – ಅಕ್ರಮವಾಗಿ ಸಾಗಿಸುತ್ತಿದ್ದ 5.52 ಲಕ್ಷ ಮೌಲ್ಯದ ಪಡಿತರ ಅಕ್ಕಿ ವಶಸಿದ್ದರಾಮಯ್ಯ ರಾಜೀನಾಮೆ ವಿರೋಧಿಸಿ ಯಾದಗಿರಿಯಲ್ಲಿ ಪ್ರತಿಭಟನೆ – ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿಅಧಿಕಾರದ ಹಿಂದೆ ಹೋದವನಲ್ಲ, ಆಸ್ತಿ-ಹಣದ ಹಿಂದೆ ಬಿದ್ದಿಲ್ಲ: ಸಿದ್ದರಾಮಯ್ಯ ನೇರ ನುಡಿಯತೀಂದ್ರ ಸಂಪುಟ ಸೇರ್ಪಡೆಗೆ ಕೊನೆಗೂ ಒಪ್ಪಿದ ಸಿದ್ದರಾಮಯ್ಯಸಕಲ ದೋಷ ನೋಡಿಕೊಂಡು ಡಿಕೆಶಿ ಮುನ್ನಡೆಯಬೇಕಾಗುತ್ತೆ – ಕರಿವೃಷಭ ಶಿವಯೋಗೀಶ್ವರ ಸ್ವಾಮೀಜಿ ಎಚ್ಚರಿಕೆಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಸಂತೋಷ್‌ ಲಾಡ್‌ ಕಣ್ಣೀರುನನಗೆ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ, ರಾಜ್ಯ ರಾಜಕೀಯದಲ್ಲೇ ಮುಂದುವರಿಯುತ್ತೇನೆ: ಸಿದ್ದರಾಮಯ್ಯ ಸ್ಪಷ್ಟನೆರಾಜೀನಾಮೆ ಬೆನ್ನಲ್ಲೇ ದೆಹಲಿಗೆ ಸಿದ್ದರಾಮಯ್ಯ – ಹೈಕಮಾಂಡ್ ನಾಯಕರ ಭೇಟಿ ಹಿಂದಿನ ಗುಟ್ಟೇನು?ಮುಂದಿನ ಸಿಎಂ ಯಾರು – ಪ್ರಶ್ನೆಗೆ ಉತ್ತರ ನೀಡದೇ ನಗುಮುಖದಿಂದ ಎದ್ದು ಹೋದ ಸಿದ್ದರಾಮಯ್ಯ