ಬೆಂಗಳೂರು: ಬಿಡದಿ ಟೌನ್‌ಶಿಪ್ ವಿಚಾರವಾಗಿ ಸದನದಲ್ಲಿ ವಿಪಕ್ಷಗಳು ಚರ್ಚೆ ಮಾಡಲಿ ಸರ್ಕಾರ ಉತ್ತರ ಕೊಡುತ್ತದೆ ಅಂತ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
ಬಿಡದಿ ಟೌನ್ ಶಿಪ್ ವಿರೋಧಿಸಿ ಜೆಡಿಎಸ್ ಮಾಡ್ತಿರೋ ಪಾದಯಾತ್ರೆಗೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬಿಡದ ಟೌನ್ ಶಿಪ್ ಪಾದಯಾತ್ರೆ ಮಾಡಲಿ. ಹೋರಾಟಗಳು ಆಗಬೇಕು. ಇವರ ಕಾಲದಲ್ಲೇ ಈ ಯೋಜನೆ ಆಗಿದ್ದುಎಲ್ಲವೂ ಸದನದಲ್ಲಿ ಚರ್ಚೆ ಆಗಲಿ ಎಂದರು.
ವಿಪಕ್ಷಗಳು ಸದನದಲ್ಲಿ ಚರ್ಚೆ ಮಾಡಲಿ. ಎಲ್ಲವನ್ನು ತೆರೆದಿಡುವ ಕೆಲಸ ಸದನದಲ್ಲಿ ಮಾಡ್ತೀವಿ. ಅವರು ಚರ್ಚೆ ಮಾಡಲಿ ನಾವು ಅದಕ್ಕೆ ಸದನದಲ್ಲಿ ಉತ್ತರ ಕೊಡ್ತೀವಿ ಅಂತ ತಿಳಿಸಿದರು.
NDRF ನಿಯಮ ಕೇಂದ್ರ ಬದಲಾಯಿಸಬೇಕು
ಬರ ಪರಿಹಾರ ವಿಚಾರದಲ್ಲಿ NDRF ನಿಯಮಗಳನ್ನು ಕೇಂದ್ರ ಸರ್ಕಾರ ಬದಲಾವಣೆ ಮಾಡಬೇಕು ಅಂತ ಸಚಿವ ಸಂತೋಷ್ ಲಾಡ್ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಬರ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಧಾರವಾಡದಲ್ಲಿ ರೈತರು ಸಂಕಟರಲ್ಲಿ ಇದ್ದಾರೆ.96% ಬಿತ್ತನೆ ಆಗಿದೆ.ಆದ್ರೆ ಫಸಲು ಸಿಕ್ತಿಲ್ಲ.ಮಳೆ ಕೆಲವು ಕಡೆ ಬಂದಿಲ್ಲ. ಕೆಲವು ಕಡೆ ಬಂದಿದೆ.ಮೇಲೆ ಹಸಿರು ಕಾಣುತ್ತದೆ. ಆದ್ರೆ ಅಲ್ಲಿ ಬೆಳೆ ಇಲ್ಲ.ಹಸಿರು ಬರ ಅಂತ ಘೋಷಣೆ ಮಾಡಬಹುದು ಹಾಗೆ ಇದೆ ಸ್ಥಿತಿ ಅಂತ ತಿಳಿಸಿದರು.
ಸಿಎಂ ಅವರು ಬರ ಅಧ್ಯಯನಕ್ಕೆ ಸೂಚನೆ ಕೊಟ್ಟಿದ್ದರು. ವರದಿ ಸಿದ್ದವಾಗಿದೆ. ಸಿಎಂಗೆ ವರದಿ ಕೊಡ್ತೀವಿ. NDRF ನಿಯಮ ಬದಲಾವಣೆ ಮಾಡಬೇಕು. ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಲೇಬೇಕು. ರಾಜ್ಯ ಏನು ಮಾಡಬೇಕು ಅಂತ ಸಿಎಂ ನಿರ್ಧಾರ ಮಾಡ್ತಾರೆ. ಬರ ಘೋಷಣೆ ಮಾಡಬೇಕಾದ್ರೆ ನಿಯಮ ಇದೆ. ಕೇಂದ್ರ ಸರ್ಕಾರ ಬಂದು ಅಧ್ಯಯನ ಮಾಡಬೇಕು. ನಮ್ಮ ಸರ್ಕಾರದ ಅನುದಾನದ ಬಗ್ಗೆ ಸಿಎಂ ನಿರ್ಧಾರ ಮಾಡ್ತಾರೆ ಅಂತ ತಿಳಿಸಿದರು.

