LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಡಿಕೆ ಶಿವಕುಮಾರ್ ಸಿಎಂ ಆಗಿರೋದು ವಿಪಕ್ಷಗಳಿಗೆ ತಡೆಯಲು ಆಗ್ತಿಲ್ಲ: ಚಲುವರಾಯಸ್ವಾಮಿ

Advertisement
Advertisement

ಬೆಂಗಳೂರು: ಡಿಕೆ ಶಿವಕುಮಾರ್  ಸಿಎಂ ಆಗಿರೋದು ತಡೆಯಲು ಆಗದೇ ಬಿಡದಿ ಟೌನ್‌ಶಿಪ್  ವಿಚಾರದಲ್ಲಿ ದೇವೇಗೌಡ, ಕುಮಾರಸ್ವಾಮಿ, ಅಶೋಕ್ ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ  ಕಿಡಿಕಾರಿದ್ದಾರೆ.

ಮಂಗಳವಾರ ದೇವೇಗೌಡರು ಸುದ್ದಿಗೋಷ್ಟಿ ಮಾಡಿದ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ದೇವೇಗೌಡರು ನಿನ್ನೆ ಮಾತಾಡಿದ್ದಾರೆ. ದೇವೇಗೌಡರ ಬಗ್ಗೆ ನಮಗೆ ಅಪಾರ ಗೌರವ ಇದೆ. ಸತ್ಯಾಗ್ರಹ ಮಾಡ್ತೀನಿ ಅಂತಾರೆ.ನೀಟ್ ಲೋಪ ಆದಾಗ ಮಕ್ಕಳು ಆತ್ಮಹತ್ಯೆ ಮಾಡಿಕೊಂಡರು ದೇವೇಗೌಡ ಮಾತೇ ಆಡಲಿಲ್ಲ. ಇವತ್ತು ಡಿಕೆ ಶಿವಕುಮಾರ್ ವಿರುದ್ದ ಹೋರಾಟ ಮಾಡ್ತಾರಂತೆ. ದೇವನಹಳ್ಳಿಯಲ್ಲಿ ರೈತರು ಪ್ರತಿಭಟನೆ ಮಾಡಿದಾಗ ದೇವೇಗೌಡರು ಅಲ್ಲಿಗೆ ಹೋಗಿರಲಿಲ್ಲ ಎಂದು ಪ್ರಶ್ನೆ ಮಾಡಿದರು. 

ಕುಮಾರಸ್ವಾಮಿ ಪ್ರತಿಭಟನೆ ಸ್ಥಳಕ್ಕೆ ಬನ್ನಿ ಅಂತಾರೆ. ಕುಸ್ತಿ ಆಡೋಕೆ ಹೋಗಬೇಕಾ? ರೈತರ ಸಮಸ್ಯೆ ಇತ್ಯರ್ಥ ಮಾಡೋಕೆ ವಿಧಾನಸೌಧ ಇದೆ. ಕೆಂಗಲ್ ಹನುಮಂತಯ್ಯ ಕಟ್ಟಿರೋದು. ಹರಿಯಾಣ, ಪಂಜಾಬ್‌ನಲ್ಲಿ ಅನೇಕ ದಿನ ರೈತರು ಪ್ರತಿಭಟನೆ ಮಾಡಿದ್ರು. ಯಾಕೆ ದೇವೇಗೌಡ ಹೋಗಿಲ್ಲ? ಕುಮಾರಸ್ವಾಮಿಗೆ ಮಾತುಕತೆಗೆ ಕರೆದರೆ ವಿಧಾನಸೌಧಕ್ಕೆ ಬರಲ್ಲ ಅಂತಾರೆ. ಪಾಪ ಕುಮಾರಸ್ವಾಮಿ, ಅಶೋಕ್‌ಗೆ ನೋವಾಗಿದೆ ಎಂದು ಲೇವಡಿ ಮಾಡಿದರು. 

ಹೋರಾಟದಿಂದ ಡಿಕೆಶಿ ಸಿಎಂ ಆಗಿದ್ದಾರೆ. ಅಶೋಕ್ ಸಿಎಂ ಮೇಲೆ 150 ಕೋಟಿ ಆರೋಪ ಮಾಡುತ್ತಾರೆ. ಅಶೋಕ್ ಬಾಯಿಗೆ ಬೀಗ ಹಾಕದೇ ಹೋದ್ರೆ ಒಳ್ಳೆಯ ಹೆಸರು ಬರಲ್ಲ. ಬಾಯಿಗೆ ಬೀಗ ಹಾಕಿಕೊಳ್ಳಿ. ಯಡಿಯೂರಪ್ಪ ಬಗ್ಗೆ ಯತ್ನಾಳ್ ಮಾತಾಡಿದ್ರು. ದುಡ್ಡು ಕೊಟ್ಟು ಮಂತ್ರಿ ಆಗೋದು ಬಿಜೆಪಿ ಅವರು ನಾವಲ್ಲ. ಕುಮಾರಸ್ವಾಮಿ, ಅಶೋಕ್‌ಗೆ ಡಿಕೆ ಶಿವಕುಮಾರ್ ಸಿಎಂ ಆಗಿರೋದು ಇಷ್ಟ ಇಲ್ಲ. ಅದಕ್ಕೆ ಮೊದಲ ದಿನದಿಂದ ಡಿಕೆ ಶಿವಕುಮಾರ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. 

ಡಿಕೆಶಿ ಸಿಎಂ ಆದ ಮೇಲೆ ಅನೇಕ ಅಭಿವೃದ್ಧಿ ಕೆಲಸ ಆಗುತ್ತಿದೆ. ಉತ್ತಮ ಕೆಲಸ ಮಾಡಲು ಸಿಎಂ ಮೀಟಿಂಗ್ ಮಾಡುತ್ತಿದ್ದಾರೆ. ಬೆಳಗ್ಗೆಯಿಂದ ಸಂಜೆವರೆಗೂ ಕೆಲಸ ಮಾಡುತ್ತಿದ್ದಾರೆ. ಅಸೂಯೆಯಿಂದ ಹೀಗೆ ಮಾತಾಡಬಾರದು ಎಂದು ಕಿಡಿಕಾರಿದರು. 

ಎಸ್‌ಎಂ ಕೃಷ್ಣ ಸಿಎಂ ಆಗಿದ್ದು ನಿಮಗೆ ಇಷ್ಟ ಆಗಿಲ್ಲ. ಎರಡನೇ ಬಾರಿ ಧರ್ಮಸಿಂಗ್ ಅವರನ್ನ ಸಿಎಂ ಮಾಡಿದ್ರಿ. ಇವತ್ತು ಡಿಕೆಶಿ ಸಿಎಂ ಆಗಿರೋದು ಸಹಿಸೋಕೆ ಆಗ್ತಿಲ್ಲ. ಜನರು ಮಾತಾಡೋದನ್ನ ಅಶೋಕ್, ಕುಮಾರಸ್ವಾಮಿ ನೋಡಬೇಕು. ಕುಮಾರಸ್ವಾಮಿ, ಅಶೋಕ್ ಭ್ರಮೆಯಲ್ಲಿ ಇದ್ದಾರೆ. ದೇವೇಗೌಡರಿಂದ ಇದನ್ನ ನಿರೀಕ್ಷೆ ಮಾಡಿರಲಿಲ್ಲ. ದೇವೇಗೌಡರ ಸಲಹೆ ಕೊಡಲಿ, ಫಾರ್ಮುಲ ಕೊಡಲಿ. ವಿಧಾನಸೌಧಕ್ಕೆ ಬಂದು ಚರ್ಚೆ ಮಾಡಿ ಸಲಹೆ ಕೊಡಲಿ. ಬಿಡದಿ ವಿಚಾರದಲ್ಲಿ ಸಿಎಂ ಬೇಕಾದ್ರೆ ಸಲಹೆ ಪಡೆಯುತ್ತಾರೆ ಎಂದು ದೇವೇಗೌಡರಿಗೆ ತಿರುಗೇಟು ಕೊಟ್ಟರು. 

70-80% ಜನ ಭೂಮಿ ಕೊಡಲು ಒಪ್ಪಿದ್ದಾರೆ. ಅವರು ರಾಜಕೀಯಕ್ಕೆ ವಿರೋಧ ಮಾಡುತ್ತಾರೆ. ಸಿಎಂ ಅವರು ಈ ಬಗ್ಗೆ ನಿರ್ಧಾರ ಮಾಡುತ್ತಾರೆ. ಕುಮಾರಸ್ವಾಮಿ ದಾರಿ ತಪ್ಪಿರಬಹುದು. ದೇವೇಗೌಡರು ಮಾರ್ಗದರ್ಶನ ನೀಡಬೇಕು. ಅಶೋಕ್‌ಗೆ ದೇವೇಗೌಡರು ಮಾರ್ಗದರ್ಶನ ನೀಡಲಿ. ಅದು ಬಿಟ್ಟು ಅಸೂಯೆ ಬೀಳಬೇಡಿ. ಪ್ರತಿಭಟನೆ ಮಾಡಿ ಮತ್ತಷ್ಟು ಗೊಂದಲ ಮಾಡಬೇಡಿ ಎಂದು ತಿಳಿಸಿದರು. 

ಜೆಡಿಎಸ್ ತಮ್ಮ ಅಸ್ಥಿತ್ವ ಉಳಿಸಿಕೊಳ್ಳೋಕೆ ಪ್ರತಿಭಟನೆ ಮಾಡುತ್ತಿದ್ದಾರೆ. ಅದಕ್ಕೆ ಇದು ಗೊಂದಲ ಆಗುತ್ತದೆ. 70-80% ರೈತರು ಒಪ್ಪಿದ್ದಾರೆ. ರೆಡ್ ಜೋನ್ ತೆಗೆಯಲು ಆಗಲ್ಲ. ಹೀಗಾಗಿ ಟೌನ್‌ಶಿಪ್ ಆಗಲಿ ಅಂತ ರೈತರು ಹೇಳುತ್ತಿದ್ದಾರೆ. ಸದ್ಯದಲ್ಲೇ ಎಲ್ಲವೂ ಗೊತ್ತಾಗುತ್ತದೆ ಎಂದರು. 

ಹೈಕಮಾಂಡ್ ಆಸೆ ಫುಲ್‌ಫಿಲ್ ಮಾಡೋಕೆ ಬಿಡದಿ ಟೌನ್‌ಶಿಪ್ ಎಂಬ ದೇವೇಗೌಡ ಆರೋಪ ವಿಚಾರಕ್ಕೆ ಚಲುವರಾಯಸ್ವಾಮಿ, ದೇವೇಗೌಡರ ಬಗ್ಗೆ ಅಪಾರ ಗೌರವ ಇದೆ. ಇಳಿ ವಯಸ್ಸಿನಲ್ಲಿ ಒಳ್ಳೆ ಮಾರ್ಗದರ್ಶನ ಕೊಡಲಿ. ಅಶೋಕ್, ಕುಮಾರಸ್ವಾಮಿಗೆ ಅಸ್ತ್ರ ಆಗೋದು ಬೇಡ. ಅವರು ಒಳ್ಳೆಯ ಸಲಹೆ ಕೊಡಲಿ ಸ್ವೀಕಾರ ಮಾಡುತ್ತೇವೆ. ಡಿಕೆ ಶಿವಕುಮಾರ್ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ವಿಪಕ್ಷಗಳೇ ಅವರ ಉತ್ತಮ ಕೆಲಸದ ಬಗ್ಗೆ ಹೇಳುತ್ತಿದ್ದಾರೆ. ಹೈಕಮಾಂಡ್ ಜವಾಬ್ದಾರಿ ಕೊಟ್ಟಿದ್ದಾರೆ. ಡಿಕೆಶಿ ಮಾಡುತ್ತಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ, ಹರಿಪ್ರಸಾದ್ ಸೇರಿ 2028ಕ್ಕೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರುವ ಕೆಲಸ ಮಾಡುತ್ತಾರೆ. ದೇವೇಗೌಡರು ಹೊಟ್ಟೆ ಉರಿಗೆ ಮಾತಾಡೋದು ಬೇಡ ಎಂದು ಕಿಡಿಕಾರಿದರು. 

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ: ಏನುಮೇರೇಷನ್ ಫಾರಂ ಸಲ್ಲಿಸಿದ ಡಾ. ವೀರಣ್ಣ ಚರಂತಿಮಠಬಿ.ವಿ.ವಿ.ಎಸ್. ಹೋಮಿಯೋಪಥಿಕ ವೈದ್ಯಕೀಯ ಮಹಾವಿದ್ಯಾಲಯದಲ್ಲಿ "ವೈವಿಧ್ಯದಲ್ಲಿ ಏಕತೆ" ಉಡುಪು ಪ್ರದರ್ಶನಇನ್ಮುಂದೆ ಪಿಯುಸಿ ಉಪನ್ಯಾಸಕರು 9, 10ನೇ ತರಗತಿಗೆ ಪಾಠ ಮಾಡೋದು ಕಡ್ಡಾಯಸಚಿವ ಸಂಪುಟ ವಿಸ್ತರಣೆಗೆ ಸೋಮವಾರ ಶುಭ ಮುಹೂರ್ತ? – ಹೈಕಮಾಂಡ್ ಮುಂದೆ 2 ದಿನಾಂಕ ಪ್ರಸ್ತಾಪಿಸಿದ ಡಿಕೆಶಿಹೊತ್ತಿ ಉರಿದ ಕೊಟ್ಟಿಗೆ – 12 ಜಾನುವಾರುಗಳು ಸಜೀವ ದಹನಆಫ್ರಿಕಾದಲ್ಲಿ ವೇಶ್ಯಾವಾಟಿಕೆ ದಂಧೆಗೆ ಮಗಳ ಮಾರಾಟ – ಚಿಕ್ಕಮಗಳೂರು ಹಕ್ಕಿಪಿಕ್ಕಿ ದಂಪತಿಯಿಂದ ನೀಚ ಕೃತ್ಯಅಣ್ಣನ ಪ್ರೀತಿ ನಿರಾಕರಿಸಿದ್ದಕ್ಕೆ ತಮ್ಮನಿಂದ ಕಾನೂನು ವಿದ್ಯಾರ್ಥಿನಿಯ ಹತ್ಯೆ – ವಿಚ್ಛೇದಿತ ಪ್ರಿಯಕರ ಸೇರಿ ಇಬ್ಬರು ಅಂದರ್‌ಅಶ್ಲೀಲ ಕಮೆಂಟ್ ಮಾಡೋ ಶೂರರಿಗೆ ಶಾಕ್ – 6 ತಿಂಗಳಿಂದ 1 ವರ್ಷ ಜಾಮೀನು ರಹಿತ ಜೈಲು ಶಿಕ್ಷೆಆರೇಳು ಬೀದಿ ನಾಯಿಗಳು ಏಕಕಾಲಕ್ಕೆ ದಾಳಿ – ಒಂದೂವರೆ ವರ್ಷದ ಕಂದಮ್ಮ ಸಾವುಉಪಸಭಾಪತಿ ಪ್ರಾಣೇಶ್ ಪರಿಷತ್‌ ಸದಸ್ಯತ್ವ ರದ್ದು