LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಕೊಡೋ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ: ಬಸವರಾಜ ಹೊರಟ್ಟಿ

Advertisement
Advertisement

ಬೆಂಗಳೂರು: ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಕೊಡುವ ಬಗ್ಗೆ ನಾನಿನ್ನೂ ನಿರ್ಧಾರ ಮಾಡಿಲ್ಲ ಎಂದು ಬಸವರಾಜ ಹೊರಟ್ಟಿ  ತಿಳಿಸಿದ್ದಾರೆ.

 ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಸಿಎಂ ಡಿಕೆಶಿ  ತಿಳಿಸಿದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಮ್ಮ ವರಿಷ್ಠರು ಸಭಾಪತಿ, ಉಪ ಸಭಾಪತಿ ಸ್ಥಾನಕ್ಕೆ ಇಬ್ಬರನ್ನು ಆಯ್ಕೆ ಮಾಡಿದ್ದಾರೆ, ಹೀಗಾಗಿ ನೀವು ರಾಜೀನಾಮೆ ನೀಡಬೇಕೆಂದು ಸಿಎಂ ತಿಳಿಸಿದ್ದಾರೆಂದು ಹೇಳಿದ್ದಾರೆ.

ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಕೊಡೋ ಬಗ್ಗೆ ನಾನಿನ್ನೂ ನಿರ್ಧಾರ ಮಾಡಿಲ್ಲ. ಈ ರೀತಿ ಇತಿಹಾಸದಲ್ಲಿ ಯಾವತ್ತೂ ಆಗಿಲ್ಲ. ಹೈಕಮಾಂಡ್ ಹೆಸರು ಹೇಳಿದ ಉದಾಹರಣೆ ಇಲ್ಲ. ನಮ್ಮ ಪಕ್ಷದ ನಾಯಕರ ಜೊತೆ ಚರ್ಚೆ ಮಾತಾಡ್ತೀನಿ, ಸಿಎಂ ಕರೆ ಮಾಡಿ ರಾಜೀನಾಮೆ ಕೊಡೋಕೆ ಹೇಳಿದ್ದಾರೆ. ಸದನದಲ್ಲಿ ಈ ಬಗ್ಗೆ ತೀರ್ಮಾನ ಆಗಲಿ. ಸದನದ ನಿರ್ಧಾರಕ್ಕೆ ನಾನು ಗೌರವ ಕೊಡ್ತೀನಿ. ಈ ವಿದ್ಯಾಮಾನ ನನಗೆ ನೋವು ತರಿಸಿದೆ, ಮೊದಲು ಅವರು ನೊಟೀಸ್ ಕೊಡಲಿ ಅಮೇಲೆ ಆ ಬಗ್ಗೆ ನಿರ್ಧಾರ ಮಾಡ್ತೀನಿ. ಸದನ ನಿರ್ಧಾರಕ್ಕೆ ನಾನು ಬದ್ಧ ಎಂದಿದ್ದಾರೆ.

ಇನ್ನೂ ಸಭಾಪತಿ ಹೊರಟ್ಟಿ ಅವರನ್ನ ಭೇಟಿ ಮಾಡಿದ ಸಚಿವ ಶರಣಪ್ರಕಾಶ್ ಪಾಟೀಲ್ ಕೆಲಕಾಲ ಮಾತುಕತೆ ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಸಭಾಪತಿ ರಾಜೀನಾಮೆ ಬಗ್ಗೆ ನಾನು ಮಾತಾಡಲ್ಲ. ಯಾವುದೋ ಮೀಟಿಂಗ್ ಇತ್ತು. ಆ ವಿಚಾರವಾಗಿ ಚರ್ಚೆ ಮಾಡಿದ್ದೇನೆ ಅಷ್ಟೆ. ರಾಜೀನಾಮೆ ಬಗ್ಗೆ ಚರ್ಚೆ ಮಾಡಿಲ್ಲ. ಸಿಎಂ ಕರೆ ಮಾಡಿರೋ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದಿದ್ದಾರೆ.

ಹೊರಟ್ಟಿ ಅವರ ರಾಜೀನಾಮೆ ವಿಚಾರ ಎಲ್ಲರ ನಿರ್ಣಯದ ಮೇಲೆ ನಿರ್ಧಾರ ಆಗುತ್ತದೆ. ಪಕ್ಷ ನಿರ್ಣಯ ಮಾಡೋ ವಿಚಾರ ಇದು. ಇದರ ಬಗ್ಗೆ ನಾನು ವೈಯಕ್ತಿಕ ಅಭಿಪ್ರಾಯ ನೀಡಲ್ಲ ಎಂದು ತಿಳಿಸಿದ್ದಾರೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಮೆ ಇಲ್ಲದ ವಾಹನಗಳಿಗೆ ಇನ್ಮುಂದೆ ಪೆಟ್ರೋಲ್‌ ಸಿಗಲ್ಲ?ನಾನು ರೈತರ ಪರ, ಮಂಡ್ಯದವಳು – ಅಖಂಡ ಕರ್ನಾಟಕ ಬಂದ್‌ಗೆ ನಟಿ ರಮ್ಯಾ ಬೆಂಬಲ 16ನೇ ದಕ್ಷಿಣ ಏಷ್ಯನ್ ಚಾಂಪಿಯನ್‌ಶಿಪ್ – 2026 ವಿಜೇತ ಕ್ರೀಡಾಪಟುಗಳ ಸನ್ಮಾನ ಸಮಾರಂಭ ಸ್ನೇಹಿತನ ಬರ್ತ್‌ಡೇ ಮುಗಿಸಿ ಬರುತ್ತಿದ್ದಾಗ ಕಾರು ಪಲ್ಟಿ – ಇಬ್ಬರು ದುರ್ಮರಣ, ಮೂವರು ಗಂಭೀರ ಸುಬ್ಬಾರೆಡ್ಡಿಗೆ ಕೈತಪ್ಪಿದ ಸಚಿವ ಸ್ಥಾನ – ಬೆಂಬಲಿಗರಿಂದ ಬಾಗೇಪಲ್ಲಿ ಬಂದ್, ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆಸಚಿವ ಬಿ. ನಾಗೇಂದ್ರಗೆ ಬಿಗ್‌ ಶಾಕ್‌ – ದೆಹಲಿಗೆ ತೆರಳಲು ಸಲ್ಲಿಸಿದ್ದ ಅರ್ಜಿ ವಜಾKPSC ಹಗರಣ CBI ತನಿಖೆಗೆ ಆಗ್ರಹಿಸಿ ಆ.5 ರಿಂದ ABVP ಅನಿರ್ದಿಷ್ಟಾವಧಿ ಧರಣಿಮಹಿಳೆಯರ ಮೆನೋಪಾಸ್ ಸಮಸ್ಯೆಗೆ ರಾಜ್ಯ ಸರ್ಕಾರ ವಿಶೇಷ ನೀತಿ – ನಟಿ ರಮ್ಯಾ ಬ್ರ್ಯಾಂಡ್ ಅಂಬಾಸಿಡರ್ಪ್ರಾಥಮಿಕ ಅಂಕಿ ಅಂಶಗಳಿಲ್ಲದೆ ಸಭೆಗೆ ಏಕೆ ಬರ್ತೀರಿ? – ಜಿಬಿಎ ಎಂಜಿನಿಯರ್‌ಗಳಿಗೆ ಕೃಷ್ಣ ಬೈರೇಗೌಡ ಕ್ಲಾಸ್ಕೃಷಿ ಅಧಿಕಾರಿಗಳ ನೇಮಕಾತಿ ಗೊಂದಲ – ಪ್ರತಿಭಟನಾ ನಿರತ ಜಿಕೆವಿಕೆ ವಿದ್ಯಾರ್ಥಿಗಳ ಸಮಸ್ಯೆ ಖುದ್ದು ಆಲಿಸಿದ ಡಿಕೆಶಿ